Rishabh Pant knee ligament surgery: ರಿಷಬ್ ಪಂತ್‌ಗೆ ಮೊಣಕಾಲು ಶಸ್ತ್ರಚಿಕಿತ್ಸೆ ಸಕ್ಸಸ್; ಕ್ರಿಕೆಟ್‌ನಿಂದ ಕನಿಷ್ಠ 9 ತಿಂಗಳು ಔಟ್, ವಿಶ್ವಕಪ್‌ಗೂ ಡೌಟ್

ಮುಂಬೈ: Rishabh Pant knee ligament surgery : ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿರುವ ಟೀಮ್ ಇಂಡಿಯಾದ ಸ್ಫೋಟಕ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ರಿಷಭ್ ಪಂತ್ ಕನಿಷ್ಠ 9 ತಿಂಗಳುಗಳ ಕಾಲ ಕ್ರಿಕೆಟ್ ಮೈದಾನಕ್ಕೆ ಮರಳುವುದು ಡೌಟ್.

ಅಪಘಾತದಲ್ಲಿ ರಿಷಭ್ ಪಂತ್ ಅವರ ಮೊಣಕಾಲಿಗೆ ಗಾಯವಾಗಿದ್ದು, ಮುಂಬೈನಲ್ಲಿ ಶುಕ್ರವಾರ ಮೊಣಕಾಲು ಅಸ್ಥಿರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ (Rishabh Pant undergoes knee ligament surgery). ಮುಂಬೈನ ಕೊಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಯಲ್ಲಿ ಪಂತ್’ಗೆ ಆಪರೇಷನ್ ನಡೆದಿದ್ದು, ಸಂಪೂರ್ಣ ಚೇತರಿಕೆಗೆ ಕನಿಷ್ಠ 9 ತಿಂಗಳು ಹಿಡಿಯಲಿದೆ. ಹೀಗಾಗಿ ಮುಂದಿನ ಅಕ್ಟೋಬರ್-ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಗೂ ರಿಷಭ್ ಪಂತ್ ಅಲಭ್ಯರಾಗುವ ಸಾಧ್ಯತೆಯಿದೆ.

ದೆಹಲಿ-ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿಯ ರೂರ್ಕಿ ಬಳಿ ರಿಷಬ್ ಪಂತ್ ಡಿಸೆಂಬರ್ 30ರಂದು ರಸ್ತೆ ಅಫಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದರು. ಡೆಹ್ರಾಡೂನ್’ನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಪಂತ್ ಅವರನ್ನು ಬಿಸಿಸಿಐ ಬುಧವಾರ ಮುಂಬೈನ ಕೊಕಿಲಾಬೆನ್ ಧೀರೂಭಾಯ್ ಅಂಬಾನಿ ಆಸ್ಪತ್ರೆಗೆ ಏರ್ ಲಿಫ್ಟ್ ಮಾಡಿತ್ತು.

25 ವರ್ಷದ ರಿಷಭ್ ಪಂತ್ ಡಿಸೆಂಬರ್ 30ರಂದು ಬೆಳಗ್ಗೆ ಐದೂವರೆಗೆ ದೆಹಲಿ ಡೆಹ್ರಾಡೂನ್ ರಾಷ್ಟ್ರೀಯ ಹೆದ್ದಾರಿ ರೂರ್ಕಿಯ ನರ್ಸನ್ ಬಳಿಯಿರುವ ಹಮ್ಜದ್’ಪುರ ಸಮೀಪ ಅಪಘಾತಕ್ಕೊಳಗಾಗಿದ್ದರು. ಪಂತ್ ಚಲಾಯಿಸುತ್ತಿದ್ದ ಮರ್ಸಿಡಿಸ್ ಬೆಂಜ್ ಕಾರು ರಸ್ತೆ ಡಿವೈಡರ್’ಗೆ ಡಿಕ್ಕಿ ಹೊಡೆದಿತ್ತು. ಅತಿಯಾದ ವೇಗದಲ್ಲಿದ್ದ ಕಾರು ಡಿವೈಡರ್’ಗೆ ಬಂದಪ್ಪಳಿಸಿದ ಪರಿಣಾಮ ಕಾರು ಚಲಾಯಿಸುತ್ತಿದ್ದ ರಿಷಭ್ ಪಂತ್ ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದಲ್ಲಿ ಪಂತ್ ಅವರ ಮುಖ, ಬೆನ್ನು, ಮೊಣಕಾಲು, ಪಾದಕ್ಕೆ ಗಾಯವಾಗಿತ್ತು.

ಅಪಘಾತವಾಗುತ್ತಿದ್ದಂತೆ ರಿಷಭ್ ಪಂತ್ ಅವರ ಕಾರಿಗೆ ಬೆಂಕಿ ಹೊತ್ತಿಕೊಂಡಿತ್ತು. ಆ ಸಂದರ್ಭದಲ್ಲಿ ಅಲ್ಲಿಗೆ ಬಂದ ಹರ್ಯಾಣ ಮೂಲಕ ಟ್ರಕ್ ಡ್ರೈವರ್ ಒಬ್ಬರು ರಿಷಭ್ ಪಂತ್ ಅವರನ್ನು ಕಾರಿನಿಂದ ಹೊರಗೆಳೆದು ಪ್ರಾಣ ಕಾಪಾಡಿದ್ದರು. ಅಷ್ಟೇ ಅಲ್ಲ, ಆಂಬ್ಯುಲೆನ್ಸ್’ಗೆ ಕರೆ ಮಾಡಿ ಆಸ್ಪತ್ರೆಗೆ ಸೇರಿಸಿದ್ದರು.

ಇದನ್ನೂ ಓದಿ : Virat Kohli dance : ಆರ್‌ಸಿಬಿ ತಂಡದ ಹೊಸ ರ್ಯಾಪ್ ಸಾಂಗ್‌ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಡ್ಯಾನ್ಸ್

ಇದನ್ನೂ ಓದಿ : Ranji Trophy 2022-23 : ಛತ್ತೀಸ್‌ಗಢ ವಿರುದ್ಧ ತವರು ನೆಲದಲ್ಲಿ ಭರ್ಜರಿ ಜಯ, ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟ ಕರ್ನಾಟಕ

English News Click Here

Rishabh Pant knee ligament surgery Rest 9 months missing World cup and IPL 2023

Comments are closed.