BCCI new selection committee : ಬಿಸಿಸಿಐ ನೂತನ ಆಯ್ಕೆ ಸಮಿತಿಗೆ ಮತ್ತೆ ಚೇತನ್ ಶರ್ಮಾ ಮುಖ್ಯಸ್ಥ, ಸೆಲೆಕ್ಷನ್ ಕಮಿಟಿಯಲ್ಲಿ ಕರ್ನಾಟಕದವರಿಗಿಲ್ಲ ಸ್ಥಾನ

ಮುಂಬೈ: ( BCCI new selection committee ) : ಭಾರತ ಸೀನಿಯರ್ ಕ್ರಿಕೆಟ್ ತಂಡದ ನೂತನ ಆಯ್ಕೆ ಸಮಿತಿಯನ್ನು ಬಿಸಿಸಿಐ ಪ್ರಕಟಿಸಿದ್ದು, ಈ ಹಿಂದೆ ವಜಾಗೊಂಡಿದ್ದ ಮಾಜಿ ಕ್ರಿಕೆಟಿಗ ಚೇತನ್ ಶರ್ಮಾ ಅವರೇ ಹೊಸ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ (BCCI announces All-India Senior Men Selection Committee). ಚೇತನ್ ಶರ್ಮಾ (Chetan Sharma) ನೇತೃತ್ವದ ನೂತನ ಆಯ್ಕೆ ಸಮಿತಿಯಲ್ಲಿ ಒಡಿಶಾದ ಮಾಜಿ ಕ್ರಿಕೆಟಿಗ ಶಿವಸುಂದರ್ ದಾಸ್ (Shiv Sundar Das), ಬಂಗಾಳದ ಸುಬ್ರತೊ ಬ್ಯಾನರ್ಜಿ (Subroto Banerjee), ಮುಂಬೈನ ಸಲೀಲ್ ಅಂಕೋಲ (Salil Ankola) ಮತ್ತು ತಮಿಳುನಾಡಿನ ಶ್ರೀಧರನ್ ಶರತ್ (Sridharan Sharath) ಸ್ಥಾನ ಪಡೆದಿದ್ದಾರೆ.

ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ವೈಫಲ್ಯದ ಬೆನ್ನಲ್ಲೇ ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ಬಿಸಿಸಿಐ ವಜಾ ಮಾಡಿತ್ತು. ಇದೀಗ ಮತ್ತದೇ ಚೇತನ್ ಶರ್ಮಾಗೆ ಬಿಸಿಸಿಐ ಆಯ್ಕೆ ಸಮಿತಿಯ ಮುಖ್ಯಸ್ಥನ ಪಟ್ಟ ಕಟ್ಟಿದೆ. ಅಶೋಕ್ ಮಲ್ಹೋತ್ರಾ, ಜತಿನ್ ಪರಾಂಜಪೆ ಮತ್ತು ಸುಲಕ್ಷಣಾ ನಾಯ್ಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿ ಹೊಸ ಆಯ್ಕೆ ಸಮಿತಿಯ ನೇಮಕ ಮಾಡಿದೆ.

ಬಿಸಿಸಿಐ ನೂತನ ಆಯ್ಕೆ ಸಮಿತಿ BCCI new selection committee)

ಚೇತನ್ ಶರ್ಮಾ (ಉತ್ತರ ವಲಯ): ಮುಖ್ಯಸ್ಥ
ಶಿವಸುಂದರ್ ದಾಸ್ (ಪೂರ್ವ ವಲಯ)
ಸುಬ್ರತೊ ಬ್ಯಾನರ್ಜಿ (ಪೂರ್ವ ವಲಯ)
ಸಲೀಲ್ ಅಂಕೋಲ (ಪಶ್ಚಿಮ ವಲಯ)
ಶ್ರೀಧರನ್ ಶರತ್ (ದಕ್ಷಿಣ ವಲಯ)

ಬಿಸಿಸಿಐ ಆಯ್ಕೆ ಸಮಿತಿಗೆ 600 ಅರ್ಜಿಗಳು ಬಂದಿದ್ದು, ಈ ಪೈಕಿ 11 ಮಂದಿಯನ್ನು ಕ್ರಿಕೆಟ್ ಸಲಹಾ ಸಮಿತಿ ಅಂತಿಮಗೊಳಿಸಿತ್ತು. ಆ 11 ಮಂದಿಯಲ್ಲಿ ಕೊನೆಗೆ ಐವರನ್ನು ಆಯ್ಕೆ ಮಾಡಿದ್ದು, ಈ ಹಿಂದಿನ ಆಯ್ಕೆ ಸಮಿತಿಯಲ್ಲಿ ಮುಖ್ಯಸ್ಥರಾಗಿದ್ದ ಚೇತನ್ ಶರ್ಮಾ ಮತ್ತೊಂದು ಅವಧಿಗೆ ಸೆಲೆಕ್ಷನ್ ಕಮಿಟಿ ಮುಖ್ಯಸ್ಥರಾಗಿ ಮುಂದುವರಿದಿದ್ದಾರೆ. ಚೇತನ್ ಶರ್ಮಾ ಅವಧಿಯಲ್ಲಿ ಭಾರತ ಕ್ರಿಕೆಟ್ ತಂಡ ಕಳೆದ ವರ್ಷ 7 ಮಂದಿ ನಾಯಕರನ್ನು ಕಂಡಿತ್ತು. ಅಷ್ಟೇ ಅಲ್ಲ, ಐಸಿಸಿ ಟಿ20 ವಿಶ್ವಕಪ್, ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಫೈನಲ್ ತಲುಪಲು ವಿಫಲವಾಗಿತ್ತು.

ಇದನ್ನೂ ಓದಿ : Virat Kohli dance : ಆರ್‌ಸಿಬಿ ತಂಡದ ಹೊಸ ರ್ಯಾಪ್ ಸಾಂಗ್‌ನಲ್ಲಿ ಕಿಂಗ್ ಕೊಹ್ಲಿ ಭರ್ಜರಿ ಡ್ಯಾನ್ಸ್

ಇದನ್ನೂ ಓದಿ : Rishabh Pant knee ligament surgery: ರಿಷಬ್ ಪಂತ್‌ಗೆ ಮೊಣಕಾಲು ಶಸ್ತ್ರಚಿಕಿತ್ಸೆ ಸಕ್ಸಸ್; ಕ್ರಿಕೆಟ್‌ನಿಂದ ಕನಿಷ್ಠ 9 ತಿಂಗಳು ಔಟ್, ವಿಶ್ವಕಪ್‌ಗೂ ಡೌಟ್

ಇಂಗ್ಲಿಷ್‌ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Chetan Sharma again heads BCCI’s new selection committee Karnataka has no place in the selection committee

Comments are closed.