ಅಡಿಲೇಡ್ : ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಭಾರತ ತಂಡ ಸಜ್ಜಾಗುತ್ತಿದ್ದು, ಗುರುವಾರ ಅಡಿಲೇಡ್ ಓವಲ್ (Adelaide Oval) ಮೈದಾನದಲ್ಲಿ ನಡೆಯುವ ಪಂದ್ಯದಲ್ಲಿ (Rohit Injured)ಇಂಗ್ಲೆಂಡ್ (India vs England Semifinal) ತಂಡವನ್ನು ಎದುರಿಸಲಿದೆ. ಇಂಗ್ಲೆಂಡ್ ವಿರುದ್ಧದ ಸೆಮಿಫೈನಲ್ ಕದನಕ್ಕೆ ಸಜ್ಜಾಗುತ್ತಿರುವ ಟೀಮ್ ಇಂಡಿಯಾಗೆ ದೊಡ್ಡ ಆಘಾತ ಎದುರಾಗಿದೆ. ಅಡಿಲೇಡ್ ಓವಲ್ ಮೈದಾನದಲ್ಲಿ ಅಭ್ಯಾಸ ನಡೆಸುವ ವೇಳೆ ನಾಯಕ ರೋಹಿತ್ ಶರ್ಮಾ ಅವರ ಬಲಗೈಗೆ ಚೆಂಡು ಬಡಿದು ಗಾಯವಾಗಿದೆ.
Just in: Rohit Sharma hit on the right hand during India's nets in Adelaide #T20WorldCup pic.twitter.com/1PMKAXqiiP
— ESPNcricinfo (@ESPNcricinfo) November 8, 2022
ಅಭ್ಯಾಸದ ವೇಳೆ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ಸೈಡ್ ಆರ್ಮ್ ಮೂಲಕ ಎಸೆದ ಶರವೇಗದ ಎಸೆತವೊಂದು ರೋಹಿತ್ ಶರ್ಮಾ ಅವರ ಬಲಗೈಗೆ ಬಡಿದಿದೆ. ಕೂಡಲೇ ರೋಹಿತ್ ಶರ್ಮಾ ಅಭ್ಯಾಸ ನಿಲ್ಲಿಸಿ ನೆಟ್ಸ್’ನಿಂದ ತೆರಳಿ ಚಿಕಿತ್ಸೆ ಪಡೆದಿದ್ದಾರೆ. ಕೆಲವೇ ನಿಮಿಷಗಳಲ್ಲಿ ವಾಪಸ್ ನೆಟ್ಸ್’ಗೆ ಮರಳಿ ಅಭ್ಯಾಸ ಮುಂದುವರಿಸಿದರು. ರೋಹಿತ್ ಅವರ ಕೈಗೆ ಆಗಿರುವ ಗಾಯ ಗಂಭೀರ ಸ್ವರೂಪದ್ದಲ್ಲ ಎಂದು ತಿಳಿದು ಬಂದಿದೆ.
BREAKING:
— RevSportz (@RevSportz) November 8, 2022
Good news for the Indian fans, as the skipper walks back to the nets!@debasissen @BoriaMajumdar @sharmisthagoop2 @amitshah22 #BreakingNews #RohitSharma𓃵 #TeamIndia #T20WorldCup pic.twitter.com/7em9p5Inhh
ಟಿ20 ವಿಶ್ವಕಪ್ ಟೂರ್ನಿಯಲ್ಲಿ ರೋಹಿತ್ ಶರ್ಮಾ ಸತತ ವೈಫಲ್ಯ ಎದುರಿಸುತ್ತಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ಅರ್ಧಶತಕ (53 ರನ್) ಬಾರಿಸಿದ್ದು ಬಿಟ್ಟರೆ, ಉಳಿದ ನಾಲ್ಕೂ ಪಂದ್ಯಗಳಲ್ಲಿ ರೋಹಿತ್ ದಯನೀಯ ವೈಫಲ್ಯ ಎದುರಿಸಿದ್ದಾರೆ. ಪಾಕಿಸ್ತಾನ ವಿರುದ್ಧ 4 ರನ್, ದಕ್ಷಿಣ ಆಫ್ರಿಕಾ ವಿರುದ್ಧ 15 ರನ್, ಬಾಂಗ್ಲಾದೇಶ ವಿರುದ್ಧ 2 ರನ್ ಹಾಗೂ ಜಿಂಬಾಬ್ವೆ ವಿರುದ್ಧದ ಕೊನೆಯ ಸೂಪರ್-12 ಪಂದ್ಯದಲ್ಲಿ ರೋಹಿತ್ 15 ರನ್ನಿಗೆ ಔಟಾಗಿದ್ದರು.
ನಾಯಕನಾಗಿ ಮುಂಚೂಣಿಯಲ್ಲಿ ನಿಂತು ತಂಡವನ್ನು ಮುನ್ನಡೆಸುವಲ್ಲಿ ವಿಫಲರಾಗಿರುವ ರೋಹಿತ್ ಶರ್ಮಾ, ಸೆಮಿಫೈನಲ್ ಪಂದ್ಯದಲ್ಲಿ ಫಾರ್ಮ್ ಕಂಡುಕೊಳ್ಳುವ ನಿರೀಕ್ಷೆಯಲ್ಲಿದ್ದಾರೆ. ಸೆಮಿಫೈನಲ್’ನಲ್ಲಿ ಭಾರತಕ್ಕೆ ಎದುರಾಳಿಯಾಗಿರುವ 2010ರ ಚಾಂಪಿಯನ್ಸ್ ಇಂಗ್ಲೆಂಡ್, ಗ್ರೂಪ್-1ರಲ್ಲಿ 5 ಪಂದ್ಯಗಳಿಂದ 7 ಅಂಕ ಗಳಿಸಿ ಅಂತಿಮ 4ರ ಘಟ್ಟ ತಲುಪಿತ್ತು. ಭಾರತ ಗ್ರೂಪ್-2ರಲ್ಲಿ ಆಡಿದ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು 8 ಅಂಕಗಳೊಂದಿಗೆ ಗುಂಪಿನಿಂದ ಅಗ್ರಸ್ಥಾನಿಯಾಗಿ ಸೆಮಿಫೈನಲ್ ತಲುಪಿದೆ.
ಇದನ್ನೂ ಓದಿ : Abu Dhabi T10 : ಅಬುಧಾಬಿ T10 ಟೂರ್ನಿಯಲ್ಲಿ ಆಡಲಿದ್ದಾರೆ ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ
ಇದನ್ನೂ ಓದಿ : Dinesh Karthik : ದಿನೇಶ್ ಕಾರ್ತಿಕ್ ಕರಿಯರ್ ಕ್ಲೋಸ್, ಇನ್ನು ಡಿಕೆಗಿಲ್ಲ ಸೆಕೆಂಡ್ ಚಾನ್ಸ್
ಇದನ್ನೂ ಓದಿ : Suryakumar Yadav Batting : 20ನೇ ಓವರ್‌ನಲ್ಲಿ ಸೂರ್ಯನ ಬೆಂಕಿ-ಬಿರುಗಾಳಿ ಬಿರುಗಾಳಿ ಬ್ಯಾಟಿಂಗ್; 18 ಎಸೆತ, 10 ಸಿಕ್ಸರ್, 72 ರನ್
ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ 2009ರ ಚಾಂಪಿಯನ್ ಪಾಕಿಸ್ತಾನ ಹಾಗೂ ಕಳೆದ ಬಾರಿಯ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.
Rohit Injured :Rohit Sharma’s right hand injury, a shock for Team India before the World Cup semi-final!