Captain fails in T20 World Cup : ಟಿ20 ವಿಶ್ವಕಪ್ 2022 : ಸೆಮಿಫೈನಲ್‌ನಲ್ಲಿ ಆಡುತ್ತಿರುವ ನಾಲ್ಕೂ ತಂಡಗಳ ಕ್ಯಾಪ್ಟನ್‌ಗಳು ಫೇಲ್

ಅಡಿಲೇಡ್: (Captain fails in T20 World Cup)ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ 2007ರ ಚಾಂಪಿಯನ್ ಭಾರತ, 2009ರ ಚಾಂಪಿಯನ್ ಪಾಕಿಸ್ತಾನ, 2010ರ ಚಾಂಪಿಯನ್ ಇಂಗ್ಲೆಂಡ್ ಹಾಗೂ 2021ರ ರನ್ನರ್ಸ್ ಅಪ್ ನ್ಯೂಜಿಲೆಂಡ್ ತಂಡಗಳು ಸೆಮಿಫೈನಲ್ ತಲುಪಿವೆ.

ಬುಧವಾರ ಸಿಡ್ನಿ ಕ್ರಿಕೆಟ್ ಗ್ರೌಂಡ್’ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ (Pakistan Vs New Zeeland Semifinal) ತಂಡಗಳು ಮುಖಾಮುಖಿಯಾಗಲಿವೆ. ಗುರುವಾರ ಅಡಿಲೇಡ್ ಓವಲ್ (Adelaide Oval) ಮೈದಾನದಲ್ಲಿ ನಡೆಯುವ 2ನೇ ಸೆಮಿಫೈನಲ್ ಕದನದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾ, ಇಂಗ್ಲೆಂಡ್ (India vs England Semifinal) ತಂಡವನ್ನು ಎದುರಿಸಲಿದೆ.

ಇಂಟ್ರೆಸ್ಟಿಂಗ್ ಸಂಗತಿ ಏನಂದ್ರೆ ಟಿ20 ವಿಶ್ವಕಪ್’ನಲ್ಲಿ ಸೆಮಿಫೈನಲ್ ತಲುಪಿರುವ ನಾಲ್ಕೂ ತಂಡಗಳ ನಾಯಕರು ಈ ಟೂರ್ನಿಯಲ್ಲಿ ವಿಫಲರಾಗಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma), ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ (Joss Butler), ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ (Kane Williamson) ಹಾಗೂ ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ (Babar Azam) ಅವರಿಂದ ಇಲ್ಲಿಯವರೆಗೆ ನಾಯಕನ ಆಟ ಬಂದಿರುವುದಿಲ್ಲ.

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಆಡಿರುವ 5 ಪಂದ್ಯಗಳಿಂದ 17.70 ಸರಾಸರಿಯಲ್ಲಿ ಕೇವಲ 89 ರನ್ ಕಲೆ ಹಾಕಿದ್ದಾರೆ. ನೆದರ್ಲೆಂಡ್ಸ್ ವಿರುದ್ಧ ಅರ್ಧಶತಕ (53 ರನ್) ಬಾರಿಸಿದ್ದು ಬಿಟ್ಟರೆ, ಉಳಿದ ನಾಲ್ಕೂ ಪಂದ್ಯಗಳಲ್ಲಿ ರೋಹಿತ್ ದಯನೀಯ ವೈಫಲ್ಯ ಎದುರಿಸಿದ್ದಾರೆ. ಪಾಕಿಸ್ತಾನ ವಿರುದ್ಧ 4 ರನ್, ದಕ್ಷಿಣ ಆಫ್ರಿಕಾ ವಿರುದ್ಧ 15 ರನ್, ಬಾಂಗ್ಲಾದೇಶ ವಿರುದ್ಧ 2 ರನ್ ಹಾಗೂ ಜಿಂಬಾಬ್ವೆ ವಿರುದ್ಧದ ಕೊನೆಯ ಸೂಪರ್-12 ಪಂದ್ಯದಲ್ಲಿ ರೋಹಿತ್ 15 ರನ್ನಿಗೆ ಔಟಾಗಿದ್ದರು.

ಇನ್ನು ಇಂಗ್ಲೆಂಡ್ ತಂಡದ ನಾಯಕ ಜೋಸ್ ಬಟ್ಲರ್ ಆಡಿರುವ 4 ಇನ್ನಿಂಗ್ಸ್’ಗಳಿಂದ 29.75ರ ಸರಾಸರಿಯಲ್ಲಿ 119 ರನ್ ಗಳಿಸಿದ್ದಾರೆ. ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್ ಆಡಿರುವ 4 ಪಂದ್ಯಗಳಿಂದ 132 ರನ್ ಕಲೆ ಹಾಕಿದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್ ಅವರಂತೂ ಈ ವಿಶ್ವಕಪ್ ಟೂರ್ನಿಯಲ್ಲಿ ದಯನೀಯ ವೈಫಲ್ಯ ಎದುರಿಸಿದ್ದು, 5 ಇನ್ನಿಂಗ್ಸ್’ಗಳಿಂದ ಕೇವಲ 39 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Suryakumar Yadav Batting : 20ನೇ ಓವರ್‌ನಲ್ಲಿ ಸೂರ್ಯನ ಬೆಂಕಿ-ಬಿರುಗಾಳಿ ಬಿರುಗಾಳಿ ಬ್ಯಾಟಿಂಗ್; 18 ಎಸೆತ, 10 ಸಿಕ್ಸರ್, 72 ರನ್

ಇದನ್ನೂ ಓದಿ : Abu Dhabi T10 : ಅಬುಧಾಬಿ T10 ಟೂರ್ನಿಯಲ್ಲಿ ಆಡಲಿದ್ದಾರೆ ಸುರೇಶ್ ರೈನಾ, ಸ್ಟುವರ್ಟ್ ಬಿನ್ನಿ

ಇದನ್ನೂ ಓದಿ : Rohit Injured : ರೋಹಿತ್ ಶರ್ಮಾ ಬಲಗೈಗೆ ಗಾಯ, ವಿಶ್ವಕಪ್ ಸೆಮಿಫೈನಲ್‌ಗೂ ಮುನ್ನ ಟೀಮ್ ಇಂಡಿಯಾಗೆ ಆಘಾತ!

ಟಿ20 ವಿಶ್ವಕಪ್-2022: ಸೆಮಿಫೈನಲ್ ತಲುಪಿದ ನಾಲ್ಕು ತಂಡಗಳ ನಾಯಕರು ಗಳಿಸಿರುವ ರನ್
ರೋಹಿತ್ ಶರ್ಮಾ (ಭಾರತ): 5 ಇನ್ನಿಂಗ್ಸ್, 89 ರನ್, 17.70 ಸರಾಸರಿ, 109.88 ಸ್ಟ್ರೈಕ್’ರೇಟ್, 53 ಗರಿಷ್ಠ
ಜೋಸ್ ಬಟ್ಲರ್ (ಇಂಗ್ಲೆಂಡ್): 4 ಇನ್ನಿಂಗ್ಸ್, 119 ರನ್, 29.75 ಸರಾಸರಿ, 132.22 ಸ್ಟ್ರೈಕ್’ರೇಟ್, 73 ಗರಿಷ್ಠ
ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್): 4 ಇನ್ನಿಂಗ್ಸ್, 132 ರನ್, 33.00 ಸರಾಸರಿ, 118.92 ಸ್ಟ್ರೈಕ್’ರೇಟ್, 61 ಗರಿಷ್ಠ
ಬಾಬರ್ ಅಜಮ್ (ಪಾಕಿಸ್ತಾನ): 5 ಇನ್ನಿಂಗ್ಸ್, 39 ರನ್, 7.80 ಸರಾಸರಿ, 61.90 ಸ್ಟ್ರೈಕ್’ರೇಟ್, 25 ಗರಿಷ್ಠ.

Captain fails in T20 World Cup : T20 World Cup 2022 : Captains of all the four teams playing in the semi-finals fail.

Comments are closed.