promo shoot of Bigg Boss : ಶೀಘ್ರದಲ್ಲೇ ಬರ್ತಿದೆ ಬಿಗ್​ ಬಾಸ್​ ಕನ್ನಡ ಸೀಸನ್​ 9: ಪ್ರೊಮೋ ಶೂಟ್​ನಲ್ಲಿ ಭಾಗಿಯಾದ ಕಿಚ್ಚ

promo shoot of Bigg Boss : ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಬಿಗ್​ ಬಾಸ್​ ಕನ್ನಡ ರಿಯಾಲಿಟಿ ಶೋಗೆ ಅಪಾರ ಅಭಿಮಾನಿ ಬಳಗವಿದೆ. ಸೆಲೆಬ್ರಿಟಿಗಳನ್ನು ಒಂದೇ ಮನೆಯಲ್ಲಿ ಕೂಡಿಟ್ಟು ಅವರಿಗೆ ವಿವಿಧ ಟಾಸ್ಕ್​ಗಳನ್ನು ನೀಡುವ ಈ ಆಟ ಕಿರುತೆರೆಯ ಅತ್ಯಂತ ಜನಪ್ರಿಯ ರಿಯಾಲಿಟಿ ಶೋ ಅಂದರೆ ತಪ್ಪಾಗಲಾರದು. ಬಿಗ್​ ಬಾಸ್​ ಸೀಸನ್​ ಎಂಟರ ಬಳಿಕ ಮಿನಿ ಸೀಸನ್​ ಆಯೋಜಿಸಿದ್ದ ಕಲರ್ಸ್​ ಕನ್ನಡ ವಾಹಿನಿ ಇದಾದ ಬಳಿಕ ಬೇರೆ ಬೇರೆ ರಿಯಾಲಿಟಿ ಶೋಗಳನ್ನು ತಂದಿತ್ತೇ ವಿನಃ ಬಿಗ್​ ಬಾಸ್​​ ಶೋ ಬಗ್ಗೆ ಯಾವುದೇ ಮಾಹಿತಿ ನೀಡಿರಲಿಲ್ಲ.


ಆದರೆ ಇದೀಗ ಬಿಗ್​ ಬಾಸ್​ ಕನ್ನಡ ಸೀಸನ್​ 9 ಬರ್ತಿರೋ ಬಗ್ಗೆ ಸ್ವತಃ ಕಿಚ್ಚ ಸುದೀಪ ಮಾಹಿತಿ ನೀಡಿದ್ದಾರೆ. ಈ ವಿಚಾರವಾಗಿ ಟ್ವೀಟ್​ ಮಾಡಿರುವ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ ಹೊಸ ಬಿಗ್​ ಬಾಸ್​ ಕನ್ನಡ ಶೋಗಾಗಿ ಅತ್ಯದ್ಭುತ ಪ್ರೊಮೋ ಶೂಟ್​ ಮಾಡಿದ್ದೇವೆ. ನಿಮ್ಮೆಲ್ಲರ ಪ್ರಯತ್ನಗಳಿಗಾಗಿ ನಾನು ಸಂಪೂರ್ಣ ತಂಡಕ್ಕೆ ಆಭಾರಿಯಾಗಿದ್ದೇನೆ. ಅಲ್ಲದೇ ಶೂಟ್​ನಲ್ಲಿ ಭಾಗಿಯಾದ ನನ್ನೆಲ್ಲ ಪ್ರೀತಿಯ ಜನರಿಗೂ ನನ್ನ ಧನ್ಯವಾದಗಳು. ನೀವೆಲ್ಲರೂ ಶೀಘ್ರದಲ್ಲೇ ಬರುತ್ತಿರುವ ಪ್ರೋಮೋಗಾಗಿ ಕಾದು ನೋಡಿ. ಇದೊಂದು ಸೂಪರ್​ ಅನೌನ್ಸ್​​ಮೆಂಟ್​ ಎಂದು ಬರೆದುಕೊಂಡಿದ್ದಾರೆ.


ನಿನ್ನೆಯಷ್ಟೇ ಕಲರ್ಸ್ ಕನ್ನಡ ವಾಹಿನಿಯ ಬ್ಯುಸಿನೆಸ್​ ಹೆಡ್​ ಪರಮೇಶ್ವರ ಗುಂಡ್ಕಲ್​ ಕೂಡ ಸೋಶಿಯಲ್​ ಮೀಡಿಯಾದಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ಬಿಗ್​ ಬಾಸ್​ ಮನೆಯ ಎದುರು ಫೋಟೋ ಕ್ಲಿಕ್ಕಿಸಿಕೊಂಡಿದ್ದ ಫೋಟೋವನ್ನು ಹಂಚಿಕೊಂಡಿದ್ದರು. ಈ ಫೋಟೋವನ್ನು ಹಂಚಿಕೊಳ್ಳುವ ಮೂಲಕ ಬಿಗ್​ಬಾಸ್​ ಶೀಘ್ರದಲ್ಲಿಯೇ ಬರ್ತಿದೆ ಎಂಬ ಸುಳಿವನ್ನು ನೀಡಿದ್ದರು. ಇಂದು ಮತ್ತೊಂದು ಸೋಶಿಯಲ್​ ಮೀಡಿಯಾ ಪೋಸ್ಟ್​ ಶೇರ್​ ಮಾಡಿರುವ ಪರಮೇಶ್ವರ್​ ಗುಂಡ್ಕಲ್​​ ಪ್ರೊಮೋಶೂಟ್​ ಎಂದು ಶೀರ್ಷಿಕೆ ನೀಡಿದ್ದಾರೆ.


ಮೂಲಗಳ ಪ್ರಕಾರ ಬಿಗ್​ ಬಾಸ್​ ಕನ್ನಡ ಸೀಸನ್​ 9 ಆಗಸ್ಟ್​ ತಿಂಗಳಿನಿಂದಲೇ ಆರಂಭಗೊಳ್ಳಲಿದೆ ಎಂದು ಹೇಳಲಾಗ್ತಿದೆ. ಆದರೆ ಈ ಬಾರಿ ಮಿನಿ ಸೀಸನ್​ ಮೊದಲು ಆಯೋಜನೆಗೊಳ್ಳಲಿದ್ದು ಇದು ವೂಟ್​ನಲ್ಲಿ ಪ್ರಸಾರಗೊಳ್ಳಲಿದೆ. ಮಿನಿ ಸೀಸನ್​ನಲ್ಲಿ ಕಿರುತೆರೆಯ ಕಲಾವಿದರು ಹಾಗೂ ಸೋಶಿಯಲ್​ ಮೀಡಿಯಾದಲ್ಲಿ ಫೇಮಸ್​ ಆದ ಜನರು ಇರಲಿದ್ದಾರೆ. ಅಕ್ಟೋಬರ್​ನಲ್ಲಿ ಈ ಸೀಸನ್​ ಮುಗಿಯಲಿದ್ದು ಬಳಿಕ ಬಿಗ್​ ಬಾಸ್​​​ ಸೀಸನ್​ 9 ಆರಂಭಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಇದನ್ನು ಓದಿ : 20 Years for NatWest Final : ದಾದಾ ಶರ್ಟ್ ಬಿಚ್ಚಿ ಅಬ್ಬರಿಸಿದ್ದ ಕ್ಷಣಕ್ಕೆ.., ಭಾರತೀಯ ಕ್ರಿಕೆಟ್’ನ ಮಹೋನ್ನತ ಗೆಲುವಿಗೆ ತುಂಬಿತು 20 ವರ್ಷ

ಇದನ್ನೂ ಓದಿ : Virat Kohli Mets Childhood Friend : ‘’ಚಿರು ಹೇಗಿದ್ದೀಯಾ ?’’ 18 ವರ್ಷಗಳ ಹಿಂದಿನ ಗೆಳೆಯನನ್ನು ಇಂಗ್ಲೆಂಡ್’ನಲ್ಲಿ ಭೇಟಿ ಮಾಡಿದ ಕೊಹ್ಲಿ, ಖುಷಿ ಹಂಚಿಕೊಂಡ ಸ್ನೇಹಿತ..!

Actor Sudeep participated in the promo shoot of Bigg Boss

Comments are closed.