Rohith Sharma 500 Sixers : 500 ಸಿಕ್ಸರ್ಸ್ ಹೊಸ್ತಿಲಲ್ಲಿ ಹಿಟ್‌ಮ್ಯಾನ್, ಮಹೋನ್ನತ ದಾಖಲೆಗೆ ಮೂರೇ ಸಿಕ್ಸರ್ಸ್ ಬಾಕಿ

ಬೆಂಗಳೂರು : ಭಾರತ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮತ್ತೊಂದು ದಾಖಲೆ ಬರೆಯಲು (Rohits Sharma 500 Sixers) ಸಜ್ಜಾಗಿದ್ದಾರೆ. ಇನ್ನು 3 ಸಿಕ್ಸರ್’ಗಳನ್ನು ಬಾರಿಸಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 500 ಸಿಕ್ಸರ್’ಗಳನ್ನು ಬಾರಿಸಿದ ಜಗತ್ತಿನ 2ನೇ ಹಾಗೂ ಭಾರತದ ಮೊದಲ ಆಟಗಾರನೆಂಬ ಹಿರಿಮೆಗೆ ರೋಹಿತ್ ಶರ್ಮಾ ಪಾತ್ರರಾಗಲಿದ್ದಾರೆ.

ಬುಧವಾರ ನಡೆಯಲಿರುವ ಬಾಂಗ್ಲಾದೇಶ ವಿರುದ್ಧದ 2ನೇ ಏಕದಿನ ಪಂದ್ಯದಲ್ಲೇ ರೋಹಿತ್ ಶರ್ಮಾ ಈ ಸಾಧನೆ ಮಾಡುವ ಸಾಧ್ಯತೆಯಿದೆ. ಮೀರ್’ಪುರ್’ನಲ್ಲಿ ಭಾನುವಾರ ನಡೆದಿದ್ದ ಮೊದಲ ಪಂದ್ಯದಲ್ಲಿ ರೋಹಿತ್ ಒಂದು ಸಿಕ್ಸರ್ ಬಾರಿಸಿದ್ದರು. ಆದರೆ ಆ ಪಂದ್ಯದಲ್ಲಿ 1 ವಿಕೆಟ್ ಅಂತರದಲ್ಲಿ ರೋಚಕ ಗೆಲುವು ಸಾಧಿಸಿದ್ದ ಬಾಂಗ್ಲಾದೇಶ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತ್ತು. ಸರಣಿಯನ್ನು ಜೀವಂತವಾಗಿಡಬೇಕಾದರೆ ಭಾರತ ಬುಧವಾರ ಗೆಲ್ಲಲೇಬೇಕಿದೆ.

2007ರಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ 35 ವರ್ಷದ ರೋಹಿತ್ ಶರ್ಮಾ ಇಲ್ಲಿಯವರೆಗೆ ಏಕದಿನ, ಟೆಸ್ಟ್ ಹಾಗೂ ಟಿ20ಯಲ್ಲಿ ಒಟ್ಟು 497 ಸಿಕ್ಸರ್’ಗಳನ್ನು ಬಾರಿಸಿದ್ದಾರೆ. ಏಕದಿನ ಕ್ರಿಕೆಟ್’ನಲ್ಲಿ 251 ಸಿಕ್ಸರ್ಸ್, ಟಿ20 ಕ್ರಿಕೆಟ್’ನಲ್ಲಿ 182 ಸಿಕ್ಸರ್ಸ್ ಹಾಗೂ ಟೆಸ್ಟ್ ಕ್ರಿಕೆಟ್’ನಲ್ಲಿ 64 ಸಿಕ್ಸರ್’ಗಳನ್ನು ಬಾರಿಸಿರುವ ರೋಹಿತ್ ಶರ್ಮಾ, ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಾರೆ ಅತೀ ಹೆಚ್ಚು ಸಿಕ್ಸರ್’ಗಳನ್ನು ಸಿಡಿಸಿರುವವರ ಸಾಲಿನಲ್ಲಿ 2ನೇ ಸ್ಥಾನದಲ್ಲಿದ್ದಾರೆ (most sixes in international cricket). 483 ಅಂತಾರಾಷ್ಟ್ರೀಯ ಪಂದ್ಯಗಳಿಂದ ಒಟ್ಟು 553 ಸಿಕ್ಸರ್’ಗಳನ್ನು ಬಾರಿಸಿರುವ ವೆಸ್ಟ್ ಇಂಡೀಸ್ ದಿಗ್ಗಜ ಕ್ರಿಸ್ ಗೇಲ್ ಮೊದಲ ಸ್ಥಾನದಲ್ಲಿದ್ದಾರೆ.

ಇದನ್ನೂ ಓದಿ : ICC Under-19 Women’s World Cup : ಐಸಿಸಿ ಮಹಿಳಾ U19 ವಿಶ್ವಕಪ್: ಭಾರತ ತಂಡಕ್ಕೆ ಶೆಫಾಲಿ ವರ್ಮಾ ನಾಯಕಿ

ಇದನ್ನೂ ಓದಿ : India Vs Bangladesh ODI series : 5 ಐಪಿಎಲ್ ಟ್ರೋಫಿ ಗೆದ್ದ ನಾಯಕನ ನೇತೃತ್ವದಲ್ಲಿ ಭಾರತ ತಂಡ ಬರ್ಬಾದ್!

ಇದನ್ನೂ ಓದಿ : Exclusive : Abu Dhabi T10 League : ಡೆಕ್ಕನ್ ಗ್ಲಾಡಿಯೇಟರ್ಸ್ ಚಾಂಪಿಯನ್ ಆಗಿದ್ದರ ಹಿಂದೆ ಕನ್ನಡಿಗ “ರಾಮನ್ ಎಫೆಕ್ಟ್”

Rohith Sharma 500 Sixers : ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಅತೀ ಹೆಚ್ಚು ಸಿಕ್ಸರ್ಸ್ (ಟಾಪ್-10) :

  1. ಕ್ರಿಸ್ ಗೇಲ್ (ವೆಸ್ಟ್ ಇಂಡೀಸ್): 551 ಸಿಕ್ಸರ್ಸ್ (483 ಪಂದ್ಯ, 551 ಇನ್ನಿಂಗ್ಸ್)
  2. ರೋಹಿತ್ ಶರ್ಮಾ (ಭಾರತ): 497 ಸಿಕ್ಸರ್ಸ್ (427 ಪಂದ್ಯ, 444 ಇನ್ನಿಂಗ್ಸ್)
  3. ಶಾಹೀದ್ ಅಫ್ರಿದಿ (ಪಾಕಿಸ್ತಾನ): 476 ಸಿಕ್ಸರ್ಸ್ (524 ಪಂದ್ಯ, 508 ಇನ್ನಿಂಗ್ಸ್)
  4. ಬ್ರೆಂಡನ್ ಮೆಕ್ಕಲಂ (ನ್ಯೂಜಿಲೆಂಡ್): 398 ಸಿಕ್ಸರ್ಸ್ (432 ಪಂದ್ಯ, 474 ಇನ್ನಿಂಗ್ಸ್)
  5. ಮಾರ್ಟಿನ್ ಗಪ್ಟಿಲ್ (ನ್ಯೂಜಿಲೆಂಡ್): 383 ಸಿಕ್ಸರ್ಸ್ (367 ಪಂದ್ಯ, 402 ಇನ್ನಿಂಗ್ಸ್)
  6. ಎಂ.ಎಸ್ ಧೋನಿ (ಭಾರತ): 359 ಸಿಕ್ಸರ್ಸ್ (538 ಪಂದ್ಯ, 526 ಇನ್ನಿಂಗ್ಸ್)
  7. ಸನತ್ ಜಯಸೂರ್ಯ (ಶ್ರೀಲಂಕಾ): 352 ಸಿಕ್ಸರ್ಸ್ (586 ಪಂದ್ಯ, 651 ಇನ್ನಿಂಗ್ಸ್)
  8. ಐಯನ್ ಮಾರ್ಗನ್ (ಇಂಗ್ಲೆಂಡ್): 346 ಸಿಕ್ಸರ್ಸ್ (379 ಪಂದ್ಯ, 361 ಇನ್ನಿಂಗ್ಸ್)
  9. ಎಬಿ ಡಿ ವಿಲಿಯರ್ಸ್ (ದಕ್ಷಿಣ ಆಫ್ರಿಕಾ): 328 ಸಿಕ್ಸರ್ಸ್ (420 ಪಂದ್ಯ, 484 ಇನ್ನಿಂಗ್ಸ್)
  10. ಜೋಸ್ ಬಟ್ಲರ್ (ಇಂಗ್ಲೆಂಡ್): 287 ಸಿಕ್ಸರ್ಸ್ (319 ಪಂದ್ಯ, 327 ಇನ್ನಿಂಗ್ಸ್)

Rohith Sharma 500 Sixers : Hitman on the verge of 500 Sixers, three Sixers away from the outstanding record

Comments are closed.