ಸೋಮವಾರ, ಏಪ್ರಿಲ್ 28, 2025
HomeSportsCricketFaf du Plessis: ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ RCB ಕ್ಯಾಪ್ಟನ್ ಫಾಫ್ ಡು...

Faf du Plessis: ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ RCB ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್

- Advertisement -

ಜೋಹಾನ್ಸ್’ಬರ್ಗ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore)ತಂಡದ ನಾಯಕ, ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಫಾಫ್ ಡು ಪ್ಲೆಸಿಸ್ (Faf du Plessis) ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ. RCB ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್ (RCB captain Faf du Plessis) ಸೂಪರ್ ಕಿಂಗ್ಸ್ ಕ್ಯಾಪ್ಟನ್ ಆಗಲು ಹೇಗೆ ಸಾಧ್ಯ? ಹೀಗಂತ ನೀವು ಯೋಚನೆ ಮಾಡುತ್ತಿರಬಹುದು. ಫಾಫ್ ಡು ಪ್ಲೆಸಿಸ್ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ನಾಯಕತ್ವ ವಹಿಸುತ್ತಿಲ್ಲ. ಬದಲಾಗಿ ಅವರು ನಾಯಕನಾಗಿರುವುದು ಜೋಬರ್ಗ್ ಸೂಪರ್ ಕಿಂಗ್ಸ್ ತಂಡಕ್ಕೆ.

ದಕ್ಷಿಣ ಆಫ್ರಿಕಾ ಕ್ರಿಕೆಟ್ ಮಂಡಳಿಯ ಬಹು ನಿರೀಕ್ಷಿತ ಸೌತ್ ಆಫ್ರಿಕಾ ಟಿ20 (SA20) ಟೂರ್ನಿ ಇಂದು (ಮಂಗಳವಾರ) ಆರಂಭವಾಗಲಿದೆ. ರಾತ್ರಿ 9 ಗಂಟೆಗೆ ನಡೆಯಲಿರುವ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಎಂಐ ಕೇಪ್ ಟೌನ್ ಹಾಗೂ ಪಾರ್ಲ್ ರಾಯಲ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈ ಇಂಡಿಯನ್ಸ್ ಫ್ರಾಂಚೈಸಿ ಎಂಐ ಕೇಪ್ ಟೌನ್ ತಂಡದ ಮಾಲೀಕರಾಗಿರುವುದು ವಿಶೇಷ. ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿ ಪಾರ್ಲ್ ರಾಯಲ್ಸ್ ತಂಡದ ಮಾಲೀಕತ್ವ ಪಡೆದಿದೆ. ಮತ್ತೊಂದು ವಿಶೇಷ ಏನಂದ್ರೆ ಐಪಿಎಲ್’ನಲ್ಲಿ ಗುಜರಾತ್ ಟೈಟನ್ಸ್ ತಂಡದ ಆಟಗಾರನಾಗಿರುವ ಅಫ್ಘಾನಿಸ್ತಾನ ಆಲ್ರೌಂಡರ್ ರಶೀದ್ ಖಾನ್, SA20 ಟೂರ್ನಿಯಲ್ಲಿ ಎಂಐ ಕೇಪ್ ಟೌನ್ ತಂಡವನ್ನು ಮುನ್ನಡೆಸಲಿದ್ದಾರೆ.

SA20 ಟೂರ್ನಿಯಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿಯ ಮಾಲೀಕತ್ವದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡವೂ ಆಡುತ್ತಿದ್ದು, ಫಾಫ್ ಡು ಪ್ಲೆಸಿಸ್ ನಾಯಕತ್ವ ವಹಿಸಲಿದ್ದಾರೆ. ಬುಧವಾರ ನಡೆಯಲಿರುವ ತಮ್ಮ ಮೊದಲ ಪಂದ್ಯದಲ್ಲಿ ಡು ಪ್ಲೆಸಿಸ್ ಸಾರಥ್ಯದ ಜೋಬರ್ಗ್ ಸೂಪರ್ ಕಿಂಗ್ಸ್ ತಂಡ ಡರ್ಬನ್ ಸೂಪರ್ ಜೈಂಟ್ಸ್ ತಂಡವನ್ನು ಎದುರಿಸಲಿದೆ. ಐಪಿಎಲ್’ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮಾಲೀಕತ್ವ ಹೊಂದಿರುವ ಫ್ರಾಂಚೈಸಿಯೇ ಡರ್ಬನ್ ತಂಡಕ್ಕೂ ಮಾಲೀಕ.

ಸನ್ ರೈಸರ್ಸ್ ಹೈದರಾಬಾದ್ ತಂಡದ ಫ್ರಾಂಚೈಸಿ SA20ಯಲ್ಲಿ ಸನ್ ರೈಸರ್ಸ್ ಈಸ್ಟನ್ಸ್ ಕೇಪ್ ತಂಡದ ಮಾಲೀಕತ್ವ ಹೊಂದಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿ ಪ್ರಿಟೋರಿಯಾ ಕ್ಯಾಪಿಟಲ್ಸ್ ತಂಡದ ಮಾಲೀಕತ್ವ ಹೊಂದಿದೆ. ಒಟ್ಟಾರೆ SA20ಯಲ್ಲಿ ಆಡುತ್ತಿರುವ ಆರೂ ಫ್ರಾಂಚೈಸಿಗಳ ಮಾಲೀಕತ್ವನನ್ನು ಐಪಿಎಲ್’ನ ಆರು ಫ್ರಾಂಚೈಸಿಗಳೇ ಹೊಂದಿರುವುದು ವಿಶೇಷ.

SA20 ಟೂರ್ನಿಯ ಆರು ತಂಡಗಳ ವಿವರ

ಜೋಬರ್ಗ್ ಸೂಪರ್ ಕಿಂಗ್ಸ್ (Joburg Super Kings):
ಫಾಫ್ ಡು ಪ್ಲೆಸಿಸ್ (ನಾಯಕ), ಹ್ಯಾರಿ ಬ್ರೂಕ್, ನಾಂಡ್ರೆ ಬರ್ಗರ್, ಜೆರಾಲ್ಡ್ ಕೋಟ್ಜೀ, ಲೂಸ್ ಡು ಪ್ಲೂಯ್, ಡೊನೊವನ್ ಫೆರೇರಾ, ಜಾರ್ಜ್ ಗಾರ್ಟನ್, ಲೂಯಿಸ್ ಗ್ರೆಗೋರಿ, ರೀಜಾ ಹೆಂಡ್ರಿಕ್ಸ್, ಅಲ್ಜಾರಿ ಜೋಸೆಫ್, ಜಾನೆಮನ್ ಮಲಾನ್, ಆರೋನ್ ಫಂಗಿಸೊ, ಕ್ಯಾಲೆಬ್ ಸಲೇಕಾ, ರೊಮಾರಿಯಾ ಶೆಫರ್ಡ್, ಮಲುಸಿ ಸಿಬೊಟೊ, ಮಹೀಶ್ ತೀಕ್ಷಣ, ಕೈಲ್ ವೆರೆಯ್ನ್, ಲಿಜಾಡ್ ವಿಲಿಯಮ್ಸ್.

ಡರ್ಬನ್ ಸೂಪರ್ ಜೈಂಟ್ಸ್ (Durban Super Giants):
ಕ್ವಿಂಟನ್ ಡಿ ಕಾಕ್, ಕೈಲ್ ಅಬಾಟ್, ಮ್ಯಾಥ್ಯೂ ಬ್ರೀಟ್ಜ್’ಕೀ, ಜಾನ್ಸನ್ ಚಾರ್ಲ್ಸ್, ಜ್ಯೂನಿಯರ್ ಡಾಲಾ, ಅಕಿಲ ಧನಂಜಯ, ಸೈಮನ್ ಹಾರ್ಮರ್, ಜೇಸನ್ ಹೋಲ್ಡರ್, ಕ್ರಿಸ್ಟಿಯನ್ ಜಾಂಕರ್, ಹೆನ್ರಿಕ್ ಕ್ಲಾಸೆನ್, ದಿಲ್ಶನ್ ಮದುಶಂಕ, ಕೇಶವ ಮಹಾರಾಜ್, ಕೈಲ್ ಮೇಯರ್ಸ್, ವಿಯಾಮ್ ಮುಲ್ಡರ್, ಕೀಮೊ ಪಾಲ್, ಡ್ವೇನ್ ಪ್ರಿಟೋರಿಯಸ್, ಪ್ರೆನೆಲನ್ ಸುಬ್ರಾಯೆನ್, ರೀಸಿ ಟಾಪ್ಲೀ.

ಎಂಐ ಕೇಪ್ ಟೌನ್ (MI Cape Town):
ರಶೀದ್ ಖಾನ್ (ನಾಯಕ), ಡೆವಾಲ್ಡ್ ಬ್ರೆವಿಸ್, ಸ್ಯಾಮ್ ಕರನ್, ಜೋಫ್ರಾ ಆರ್ಚರ್, ಜಿಯಾದ್ ಅಬ್ರಹಾಮ್ಸ್, ಬುರಾನ್ ಹೆನ್ರಿಕ್ಸ್, ಜುವಾನ್ ಜಾನ್ಸೆನ್, ಜಾರ್ಜ್ ಲಿಂಡೆ, ಲಿಯಾಮ್ ಲಿವಿಂಗ್’ಸ್ಟನ್, ವೆಸ್ಲೇ ಮಾರ್ಷಲ್, ಡೆಲಾನೊ ಪೊಟ್ಗೀಟರ್, ಕಗಿಸೊ ರಬಾಡ, ರ್ಯಾನ್ ರಿಕೆಲ್ಟನ್, ಗ್ರ್ಯಾಂಟ್ ರೂಲೊಫ್ಸೆನ್, ಒಡೇನ್ ಸ್ಮಿತ್, ಓಲೀ ಸ್ಟೋನ್, ರಾಸ್ಸೀ ವಾನ್ ಡನ್ ಡುಸೆನ್, ವಕಾರ್ ಸಲಾಮ್’ಖೀಲ್.

ಪಾರ್ಲ್ ರಾಯಲ್ಸ್ (Paarl Royals):
ಜೋಸ್ ಬಟ್ಲರ್, ಫೆರಿಸ್ಕೊ ಆಡಮ್ಸ್, ಕಾರ್ಬಿನ್ ಬಾಷ್, ಜೋಸ್ ಬಟ್ಲರ್, ಕೋಡಿ ಯೂಸುಫ್, ಜೋನ್ ಫಾರ್ಚುನ್, ಇವಾನ್ ಜೋನ್ಸ್, ವಿಹಾನ್ ಲುಬ್ಬೆ, ಇಮ್ರಾನ್ ಮನಕ್, ಓಬೇಡ್ ಮೆಕೋಯ್, ಡೇವಿಡ್ ಮಿಲ್ಲರ್, ಐಯಾನ್ ಮಾರ್ಗನ್, ಲುಂಗಿ ಎನ್’ಗಿಡಿ, ಜೇಸನ್ ರಾಯ್, ಆಂಡಿಲೆ ಫೆಲುಕ್ವಾಯೊ, ತಬ್ರೈಜ್ ಶಮ್ಸಿ, ರಾಮೊನ್ ಸೈಮಂಡ್ಸ್, ಮಿಚೆಲ್ ವಾನ್ ಬ್ಯುರೆನ್, ಡೇನ್ ವಿಲಾಸ್.

ಪ್ರಿಟೋರಿಯಾ ಕ್ಯಾಪಿಟಲ್ಸ್ (Pretoria Capitals):
ಈಥನ್ ಬಾಷ್, ಶೇನ್ ಡ್ಯಾಡ್ಸ್’ವೆಲ್, ಥ್ಯುನಿಸ್ ಡಿ ಬ್ರುಯ್ನ್, ಕ್ಯಾಮರೂನ್ ಡೆಲ್’ಪೋರ್ಟ್, ಡ್ಯಾರಿನ್ ಡುಪವಿಲನ್, ವಿಲ್ ಜೇಕ್ಸ್, ಜೋಶ್ ಲಿಟಲ್, ಮಾರ್ಕೊ ಮರಾಯ್ಸ್, ಕುಸಾಲ್ ಮೆಂಡಿಸ್, ಸೆನುರನ್ ಮುತ್ತುಸಾಮಿ, ಜೇಮ್ಸ್ ನೀಶನ್, ಆನ್ರಿಚ್ ನೋಕಿಯಾ, ವೇನ್ ಪಾರ್ನೆಲ್, ಮಿಗಾಯ್ಲ್ ಪ್ರಿಟೋರಿಯಸ್, ಆದಿಲ್ ರಶೀದ್, ರಿಲೀ ರೋಸೊ, ಫಿಲ್ ಸಾಲ್ಟ್, ಶಾನ್ ವಾನ್ ಬರ್ಗ್.

ಸನ್ ರೈಸರ್ಸ್ ಈಸ್ಟರ್ನ್ ಕೇಪ್ (Sunrisers Eastern Cape):
ಟಾಮ್ ಅಬೆಲ್, ಮಾರ್ಕ್ವೀಸ್ ಆಕರ್’ಮನ್, ಒಟ್ನೀಲ್ ಮಾರ್ಟ್’ಮ್ಯಾನ್, ಬ್ರೈಡನ್ ಕಾರ್ಸ್, ಜೋರ್ಡನ್ ಕಾಕ್ಸ್, ಮಾಸನ್ ಕ್ರೇನ್, ಜುನೈದ್ ದಾವೂದ್, ಸರೆಲ್ ಇರ್ವೀ, ಜೇಮ್ಸ್ ಫುಲ್ಲರ್, ಅಯಬುಲೆಲ ಗಾಮನೆ, ಜೋರ್ಡನ್ ಹರ್ಮನ್, ಮಾರ್ಕೊ ಜಾನ್ಸೆನ್, ಸಿಸಾಂಡ ಮಗಾಲ, ಏಡನ್ ಮಾರ್ಕ್ರಮ್, ಆಡಮ್ ರಾಸಿಂಗ್ಟನ್, ಜೆಜೆ ಸ್ಮಟ್ಸ್, ಟ್ರಿಸ್ಟನ್ ಸ್ಟಬ್ಸ್, ರೋಲೋಫ್ ವಾನ್ ಡರ್ ಮರ್ಮ್.

ಇದನ್ನೂ ಓದಿ : Jasprit Bumrah: ದೇಶಕ್ಕಿಂತ ದುಡ್ಡೇ ಮುಖ್ಯ: ಶ್ರೀಲಂಕಾ, ಕಿವೀಸ್ ವಿರುದ್ಧದ ಸರಣಿಯಿಂದ ಔಟ್, ಐಪಿಎಲ್‌ಗೆ ರೆಡಿಯಾಗ್ತಿದ್ದಾರೆ ಜಸ್‌ಪ್ರೀತ್ ಬುಮ್ರಾ

ಇದನ್ನೂ ಓದಿ : Exclusive: Ravindra Jadeja fitness test : ರವೀಂದ್ರ ಜಡೇಜಗೆ ಇಂದು Yo-Y0, ಡೆಕ್ಸಾ ಟೆಸ್ಟ್, ಫಿಟ್ನೆಸ್ ಪರೀಕ್ಷೆಯಲ್ಲಿ ಪಾಸಾದ್ರೆ ಮಾತ್ರ ಟೀಮ್ ಇಂಡಿಯಾ ಕಂಬ್ಯಾಕ್

SA 20 Trophy Joburg Super Kings will be captained by RCB captain Faf du Plessis

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular