2022 lucky for 5 legends : ಪಂಚಪಾಂಡವರಿಗೆ ಅದೃಷ್ಟ ತಂದ 2022.. ಯಾರು ಆ ಪಂಚಪಾಂಡವರು, ಏನು ಆ ಅದೃಷ್ಟ?

ಬೆಂಗಳೂರು: 2022ನೇ ವರ್ಷ ಕೆಲವರಿಗೆ ಅದೃಷ್ಟ ತಂದ ವರ್ಷ, ಇನ್ನು ಕೆಲವರಿಗೆ ದುರದೃಷ್ಟ ತಂದ (2022 lucky for 5 legends) ವರ್ಷ. 2022 ಮುಗಿದು 2023ಕ್ಕೆ ಕಾಲಿಡಲು ಇನ್ನೇನು ಒಂದು ದಿನವಷ್ಟೇ ಬಾಕಿ. 2022ನೇ ವರ್ಷ ಕ್ರಿಕೆಟ್ ಜಗತ್ತಿನ ಪಂಚ ಪಾಂಡವರಿಗೆ ಅದೃಷ್ಟ ತಂಡ ವರ್ಷ.

ಭಾರತದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli), ಆಸ್ಟ್ರೇಲಿಯಾದ ಆಧುನಿಕ ದಿಗ್ಗಜ ಸ್ವೀವನ್ ಸ್ಮಿತ್ (Steve Smith), ಟೀಮ್ ಇಂಡಿಯಾದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ (Cheteshwar Pujara), ಆಸ್ಟ್ರೇಲಿಯಾದ ಆರಂಭಿಕ ಬ್ಯಾಟ್ಸ್’ಮನ್ ಡೇವಿಡ್ ವಾರ್ನರ್ (David Warner) ಮತ್ತು ನ್ಯೂಜಿಲೆಂಡ್ ಟೆಸ್ಟ್ ತಂಡದ ಮಾಜಿ ನಾಯಕ ಕೇನ್ ವಿಲಿಯಮ್ಸನ್ (Kane Williamson) ಅವರಿಗೆ 2022 ಅದೃಷ್ಟವನ್ನೇ ಹೊತ್ತು ತಂದಿದೆ.

ಈ ಐವರು ಆಟಗಾರರು ಕಳೆದ ಕೆಲ ವರ್ಷಗಳಿಂದ ಶತಕದ ಬರ ಎದುರಿಸಿದ್ದರು. ಆ ಶತಕದ ಬರವನ್ನು ಈ ವರ್ಷ ನೀಗಿಸಿಕೊಂಡಿದ್ದಾರೆ. ರನ್ ಮಷಿನ್ ವಿರಾಟ್ ಕೊಹ್ಲಿ 2019ರ ನವೆಂಬರ್’ನಲ್ಲಿ ಶತಕ ಬಾರಿಸಿದ ನಂತರ ಕಳೆದ 3 ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಸಿಡಿಸಿರಲಿಲ್ಲ. ಕೊನೆಗೂ ಆ ಶತಕ ಈ ವರ್ಷದ ಸೆಪ್ಟೆಂಬರ್ 8ರಂದು ದುಬೈನಲ್ಲಿ ನಡೆದ ಏಷ್ಯಾ ಕಪ್ ಟಿ20 ಟೂರ್ನಿಯಲ್ಲಿ ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ 3 ವರ್ಷಗಳ ಶತಕದ ಬರವನ್ನು ನೀಗಿಸಿಕೊಂಡಿದ್ದರು.

ಇನ್ನು ಆಸ್ಟ್ರೇಲಿಯಾ ತಂಡದ ಮಾಜಿ ನಾಯಕ ಸ್ಟೀವನ್ ಸ್ಮಿತ್ ಕಳೆದ 2 ವರ್ಷಗಳಿಂದ ಏಕದಿನ ಕ್ರಿಕೆಟ್’ನಲ್ಲಿ ಶತಕ ಬಾರಿಸಿರಲಿಲ್ಲ. 2020ರ ನವೂಂಬರ್’ನಲ್ಲಿ ಭಾರತ ವಿರುದ್ಧ ಸಿಡ್ನಿಯಲ್ಲಿ ಸ್ಮಿತ್ ತಮ್ಮ ಕೊನೆಯ ಏಕದಿನ ಶತಕ ಬಾರಿಸಿದ್ದರು. ಈ ವರ್ಷದ ಸೆಪ್ಟೆಂಬರ್’ನಲ್ಲಿ ನ್ಯೂಜಿಲೆಂಡ್ ವಿರುದ್ಧ ಶತಕ ಬಾರಿಸುವ ಮೂಲಕ ತಮ್ಮ 2 ವರ್ಷಗಳ ಶತಕದ ಬರವನ್ನು ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಭಾರತದ ಟೆಸ್ಟ್ ಸ್ಪೆಷಲಿಸ್ಟ್ ಚೇತೇಶ್ವರ್ ಪೂಜಾರ 2019ರ ಜನವರಿಯಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 193 ರನ್ ಗಳಿಸಿದ್ದೇ ಕೊನೆ. ನಂತರ ಪೂಜಾರ ಬ್ಯಾಟ್’ನಿಂದ ಶತಕ ಸಿಡಿದಿರಲಿಲ್ಲ. ಕೊನೆಗೂ ಬಾಂಗ್ಲಾದೇಶ ವಿರುದ್ಧ ಛಟ್ಟೋಗ್ರಾಮ್’ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಶತಕ ಬಾರಿಸುವ ಮೂಲಕ ಪೂಜಾರ ನಾಲ್ಕು ವರ್ಷಗಳ ಸೆಂಚುರಿ ಬರವನ್ನು ನೀಗಿಸಿಕೊಂಡಿದ್ದಾರೆ.

ಇನ್ನು ಆಸ್ಟ್ರೇಲಿಯಾ ಓಪನರ್ ಡೇವಿಡ್ ವಾರ್ನರ್ 2020ರ ಜನವರಿಯಲ್ಲಿ ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ವಿರುದ್ಧದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿರಲಿಲ್ಲ. ವಾರ್ನರ್’ಗೆ ಶತಕದ ಬರವನ್ನು ನೀಗಿಸಿದ್ದು 2022ನೇ ವರ್ಷ. ಇಂಗ್ಲೆಂಡ್ ವಿರುದ್ಧ ಮೆಲ್ಬೋರ್ನ್’ನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವಾರ್ನರ್ ಅಮೋಘ ಶತಕ ಸಿಡಿಸಿದ್ದರು. ಅಷ್ಟೇ ಅಲ್ಲ, ಡಿಸೆಂಬರ್ 26ರಂದು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ತಮ್ಮ 100ನೇ ಟೆಸ್ಟ್ ಪಂದ್ಯದಲ್ಲಿ ವಾರ್ನರ್ ಭರ್ಜರಿ ದ್ವಿಶತಕದೊಂದಿಗೆ ಅಬ್ಬರಿಸಿದ್ದರು.

ನ್ಯೂಜಿಲೆಂಡ್’ನ ದಿಗ್ಗಜ ಆಟಗಾರ ಕೇನ್ ವಿಲಿಯಮ್ಸನ್ 2021ರ ಜನವರಿಯಲ್ಲಿ ಪಾಕಿಸ್ತಾನ ವಿರುದ್ಧ ಟೆಸ್ಟ್ ದ್ವಿಶತಕ ಬಾರಿಸಿದ ನಂತರ ಕಳೆದ ಎರಡು ವರ್ಷಗಳಿಂದ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಶತಕ ಬಾರಿಸಿರಲಿಲ್ಲ. ಇದೀಗ ಪಾಕಿಸ್ತಾನ ವಿರುದ್ಧ ಕರಾಚಿಯಲ್ಲಿ ನಡೆಯುತ್ತಿರುವ ಟೆಸ್ಟ್ ಪಂದ್ಯದಲ್ಲೇ ಮತ್ತೆ ದ್ವಿಶತಕ ಬಾರಿಸುವ ಮೂಲಕ 2ನ ವರ್ಷಗಳ ಶತಕದ ಬರವನ್ನು ನೀಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ವಿರಾಟ್ ಕೊಹ್ಲಿ (ಭಾರತ):
3 ವರ್ಷಗಳ ನಂತರ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಶತಕ

ಸ್ಟೀವನ್ ಸ್ಮಿತ್ (ಆಸ್ಟ್ರೇಲಿಯಾ):
2 ವರ್ಷಗಳ ನಂತರ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಶತಕ

ಚೇತೇಶ್ವರ್ ಪೂಜಾರ (ಭಾರತ):
4 ವರ್ಷಗಳ ನಂತರ ಟೆಸ್ಟ್ ಕ್ರಿಕೆಟ್’ನಲ್ಲಿ ಮೊದಲ ಶತಕ

ಡೇವಿಡ್ ವಾರ್ನರ್ (ಆಸ್ಟ್ರೇಲಿಯಾ):
3 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಶತಕ

ಇದನ್ನೂ ಓದಿ : Rishabh Pant car accident: ಕಾರು ಅಪಘಾತದಲ್ಲಿ ಗಂಭೀರ ಗಾಯ; ರಿಷಭ್ ಪಂತ್ ಚೇತರಿಕೆಗೆ ಕ್ರಿಕೆಟ್ ದಿಗ್ಗಜರ ಹಾರೈಕೆ

ಇದನ್ನೂ ಓದಿ : Rishabh Pant injured : ಡಿವೈಡರ್ ಗೆ ಕಾರು ಢಿಕ್ಕಿ : ಖ್ಯಾತ ಕ್ರಿಕೆಟಿಗ ರಿಷಬ್ ಪಂತ್ ಗೆ ಗಂಭೀರ ಗಾಯ

ಇದನ್ನೂ ಓದಿ : Arjun Tendulkar duck out : ಕರ್ನಾಟಕ ವಿರುದ್ಧ ನಡೆಯದ ಅರ್ಜುನನ ಆಟ, ಮೊದಲ ಎಸೆತದಲ್ಲೇ ಸಚಿನ್ ಪುತ್ರ ಡಕೌಟ್ !

ಕೇನ್ ವಿಲಿಯಮ್ಸನ್ (ನ್ಯೂಜಿಲೆಂಡ್):
2 ವರ್ಷಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಮೊದಲ ಶತಕ

2022 lucky for 5 legends : 2022 that brought luck to Panchpandas.. Who are those Panchpandas, what is that luck?

Comments are closed.