ಮಂಗಳವಾರ, ಏಪ್ರಿಲ್ 29, 2025
HomeSportsCricketSachin Tendulkar Silent virat Kohli: ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಗೆ ಶಹಬ್ಬಾಸ್ ಅಂದ್ರೂ ಸಚಿನ್...

Sachin Tendulkar Silent virat Kohli: ಇಡೀ ಕ್ರಿಕೆಟ್ ಜಗತ್ತೇ ಕೊಹ್ಲಿಗೆ ಶಹಬ್ಬಾಸ್ ಅಂದ್ರೂ ಸಚಿನ್ ತೆಂಡೂಲ್ಕರ್ ಮಾತ್ರ ಗಪ್ ಚುಪ್

- Advertisement -

ದುಬೈ: (Sachin Tendulkar Silent virat Kohli) ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ 1020 ದಿನಗಳ ನಂತರ ಶತಕ ಬಾರಿಸಿರುವ ಟೀಮ್ ಇಂಡಿಯಾ ಬ್ಯಾಟಿಂಗ್ ಮಾಸ್ಟರ್ ವಿರಾಟ್ ಕೊಹ್ಲಿ ಅವರಿಗೆ ಇಡೀ ಕ್ರಿಕೆಟ್ ಜಗತ್ತೇ ಶಹಬ್ಬಾಸ್ ಹೇಳುತ್ತಿದೆ. ಆದರೆ ಮಾಸ್ಟರ್ ಬ್ಲಾಸ್ಟರ್ ಸಚಿನ್ ತೆಂಡೂಲ್ಕರ್ ಮಾತ್ರ ಕನಿಷ್ಠ ಒಂದು ಟ್ವೀಟ್ ಕೂಡ ಮಾಡದೆ ಮೌನಕ್ಕೆ ಶರಣಾಗಿರುವುದು ಅಚ್ಚರಿ ಮೂಡಿಸಿದೆ.ಏಷ್ಯಾ ಕಪ್ ಟಿ20 ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಸೂಪರ್-4 ಪಂದ್ಯದಲ್ಲಿ ಅಬ್ಬರಿಸಿದ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಕೊಹ್ಲಿ ಬಾರಿಸಿದ 71ನೇ ಶತಕ ಹಾಗೂ ಅಂತಾರಾಷ್ಟ್ರೀಯ ಟಿ20ಯಲ್ಲಿ ಚೊಚ್ಚಲ ಶತಕ. ಕೊಹ್ಲಿ ಅವರ ಈ ಅಮೋಘ ಸಾಧನೆಗೆ ಬೆಕ್ಕಸ ಬೆರಗಾಗಿರುವ ಕ್ರಿಕೆಟ್ ಜಗತ್ತು ಕಿಂಗ್ ಕೊಹ್ಲಿಗೆ ಅಭಿನಂದನೆ ಸಲ್ಲಿಸುತ್ತಿದೆ.

ದಕ್ಷಿಣ ಆಫ್ರಿಕಾದ ದಿಗ್ಗಜ ಬ್ಯಾಟ್ಸ್’ಮನ್ ಎಬಿ ಡಿ ವಿಲಿಯರ್ಸ್, ಪಾಕಿಸ್ತಾನದ ದಿಗ್ಗಜ ವೇಗದ ಬೌಲರ್ ಶೋಯೆಬ್ ಅಖ್ತರ್, ಶ್ರೀಲಂಕಾ ತಂಡದ ಮಾಜಿ ನಾಯಕ ಏಂಜಲೊ ಮ್ಯಾಥ್ಯೂಸ್, ಭಾರತದ ಮಾಜಿ ನಾಯಕ ಮೊಹಮ್ಮದ್ ಅಜರುದ್ದೀನ್, ಮಾಜಿ ಕ್ರಿಕೆಟಿಗರಾಗ ಮೊಹಮ್ಮದ್ ಕೈಫ್, ಹರ್ಭಜನ್ ಸಿಂಗ್, ಸುರೇಶ್ ರೈನಾ, ಇರ್ಫಾನ್ ಪಠಾಣ್, ಯೂಸುಫ್ ಪಠಾಣ್, ಎಸ್.ಬದ್ರಿನಾಥ್, ರಾಬಿನ್ ಉತ್ತಪ್ಪ, ಅಮಿತ್ ಮಿಶ್ರಾ.. ಹೀಗೆ ಮಾಜಿ-ಹಾಲಿ ಕ್ರಿಕೆಟಿಗರೆಲ್ಲಾ ಕೊಹ್ಲಿಗೆ ಟ್ವೀಟ್ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ ಸಚಿನ್ ತೆಂಡೂಲ್ಕರ್ ಮಾತ್ರ ಈ ಕ್ಷಣದವರೆಗೆ ಒಂದೇ ಒಂದು ಟ್ವೀಟ್ ಮಾಡಿಲ್ಲ.


71 ಅಂತಾರಾಷ್ಟ್ರೀಯ ಶತಕಗಳನ್ನ ವಿರಾಟ್ ಕೊಹ್ಲಿ ಸಚಿನ್ ತೆಂಡೂಲ್ಕರ್ ಅವರಿಗಿಂತ ವೇಗವಾಗಿ ಗಳಿಸಿದ್ದಾರೆ. ಕೊಹ್ಲಿ 522 ಇನ್ನಿಂಗ್ಸ್’ಗಳಲ್ಲಿ 71 ಶತಕ ಬಾರಿಸಿದ್ರೆ, ಸಚಿನ್ ತೆಂಡೂಲ್ಕರ್ 71 ಶತಕಗಳನ್ನು ಬಾರಿಸಲು 523 ಇನ್ನಿಂಗ್ಸ್ ಆಡಿದ್ದಾರೆ.

ಅತೀ ವೇಗವಾಗಿ 71 ಅಂತಾರಾಷ್ಟ್ರೀಯ ಶತಕ

ವಿರಾಟ್ ಕೊಹ್ಲಿ: 522 ಇನ್ನಿಂಗ್ಸ್
ಸಚಿನ್ ತೆಂಡೂಲ್ಕರ್: 523 ಇನ್ನಿಂಗ್ಸ್
ರಿಕಿ ಪಾಂಟಿಂಗ್: 652 ಇನ್ನಿಂಗ್ಸ್

ಅಂತಾರಾಷ್ಟ್ರೀಯ ಕ್ರಿಕೆಟ್’ನಲ್ಲಿ ಸಚಿನ್ ತೆಂಡೂಲ್ಕರ್ ಒಟ್ಟು 782 ಇನ್ನಿಂಗ್ಸ್’ಗಳಲ್ಲಿ 100 ಶತಕಗಳನ್ನು ಬಾರಿಸಿದ್ದಾರೆ. ಸಚಿನ್ ದಾಖಲೆಯನ್ನು ಮುರಿಯಲು 33 ವರ್ಷದ ವಿರಾಟ್ ಕೊಹ್ಲಿ ಅವರಿಗೆ ಬೇಕಿರುವುದಿನ್ನು ಕೇವಲ 29 ಶತಕ.

ಇದನ್ನೂ ಓದಿ : Virat Kohli KL Rahul : ಕೊಹ್ಲಿ ಆರಂಭಿಕನಾಗಿ ಆಡಿದರೆ ನಾನೇನು ಹೊರಗೆ ಕೂರಬೇಕಾ ; ಕೆ.ಎಲ್ ರಾಹುಲ್ ಹೀಗಂದಿದ್ದೇಕೆ ?

ಇದನ್ನೂ ಓದಿ : Virat Kohli Vs Sachin Tendulkar : 71ನೇ ಶತಕ ಬಾರಿಸಲು ತೆಗೆದುಕೊಂಡದ್ದು 1020 ದಿನ.. ಆದರೂ ಸಚಿನ್ ತೆಂಡೂಲ್ಕರ್‌ಗಿಂತ ಸ್ಪೀಡು ಕಿಂಗ್ ಕೊಹ್ಲಿ

Sachin Tendulkar Silent on Virat Kohli Century in Asia Cup 2022 Ind Vs Afg

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular