ತಿರುವನಂತಪುರ: (Sanju Samson Cutout) ದೇವರನಾಡು ಕೇರಳದಲ್ಲೀಗ ಸಂಜು ಸ್ಯಾಮ್ಸನ್ ಅವರದ್ದೇ ಸದ್ದು. ತಮ್ಮ ಮನೆಮಗನಿಗೆ ಟಿ20 ವಿಶ್ವಕಪ್ ತಂಡದಲ್ಲಿ ಸ್ಥಾನ ಸಿಗದಿರುವುದಕ್ಕೆ ಆಕ್ರೋಶ ಗೊಂಡಿರುವ ಅಲ್ಲಿನ ಕ್ರಿಕೆಟ್ ಪ್ರಿಯರು, ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯ ನಡೆಯಲಿರುವ ಗ್ರೀನ್ ಫೀಲ್ಡ್ ಮೈದಾನ ದ (Greenfield International Stadium, Thiruvananthapuram) ಹೊರಗೆ ಸ್ಯಾಮ್ಸನ್ ಅವರ ಬೃಹತ್ ಕಟೌಟ್ ಹಾಕಿದ್ದಾರೆ. ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದ ಹೊರಭಾಗದ ರಸ್ತೆಯಲ್ಲಿ ಸಂಜು ಸ್ಯಾಮ್ಸನ್ ಅವರ ಭಾರೀ ಗಾತ್ರದ ಕಟೌಟ್ ರಾರಾಜಿಸುತ್ತಿದ್ದು, ಟೀಮ್ ಇಂಡಿಯಾ ಆಟಗಾರರಿಗೆ ಸ್ವಾಗತ ಕೋರುತ್ತಿದೆ. ಸಂಜು ಸ್ಯಾಮ್ಸನ್ ಫ್ಯಾನ್ಸ್ ಕೇರಳ (SSFK) ಸಂಸ್ಥೆ ಈ ಕಟೌಟ್ ಹಾಕಿದೆ.
ಮುಂದಿನ ತಿಂಗಳು ಆಸ್ಟ್ರೇಲಿಯಾದಲ್ಲಿ ನಡೆಯುವ ಐಸಿಸಿ ಟಿ20 ವಿಶ್ವಕಪ್’ನಲ್ಲಿ ಆಡಲಿರುವ ಭಾರತ ತಂಡದಲ್ಲಿ ಸಂಜು ಸ್ಯಾಮ್ಸನ್ ಅವರಿಗೆ ಸ್ಥಾನ ಸಿಕ್ಕಿಲ್ಲ. ಇದರಿಂದ ಅಸಮಾಧಾನ ಗೊಂಡಿರುವ ಕೇರಳದ ಸ್ಯಾಮ್ಸನ್ ಅಭಿಮಾನಿಗಳು ಬುಧವಾರ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆಯುವ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಪಂದ್ಯದ ವೇಳೆ ಶಾಂತ ರೀತಿಯಿಂದ ಪ್ರತಿಭಟಿಸಲು ಮುಂದಾಗಿದ್ದಾರೆ. ಭಾರತ VS ದಕ್ಷಿಣ ಆಫ್ರಿಕಾ ಪಂದ್ಯಕ್ಕೆ ಸಂಜು ಸ್ಯಾಮ್ಸನ್ ಅವರ ಭಾವಚಿತ್ರವಿರುವ ಟೀ-ಶರ್ಟ್’ಗಳನ್ನು ಧರಿಸಿ ಅಭಿಮಾನಿಗಳು ಮೈದಾನಕ್ಕೆ ಆಗಮಿಸಲಿದ್ದಾರೆ. ಅದಕ್ಕೂ ಮೊದಲೇ ಅಭಿಮಾನಿಗಳು ಕ್ರೀಡಾಂಗಣದ ಹೊರಭಾಗದಲ್ಲಿ ಸ್ಯಾಮ್ಸನ್ ಅವರ ಕಟೌಟ್ ನಿಲ್ಲಿಸಿದ್ದಾರೆ.
Huge flex of Sanju Samson in front of the Greenfield stadium. pic.twitter.com/yQy1UvTzU0
— Johns. (@CricCrazyJohns) September 28, 2022
ಐಸಿಸಿ ಟ20 ವಿಶ್ವಕಪ್, ಆಸ್ಟ್ರೇಲಿಯಾ ಹಾಗೂ ದಕ್ಷಿಣ ಆಫ್ರಿಕಾ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಂಜು ಸ್ಯಾಮ್ಸನ್ ವಿಫಲ ರಾಗಿದ್ದಾರೆ. ಇದರ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಕ್ರಿಕೆಟ್ ಪ್ರಿಯರು ಬಿಸಿಸಿಐ ವಿರುದ್ಧ ಆಕ್ರೋಶ ಹೊರ ಹಾಕಿದ್ದರು. ಇದರ ಬೆನ್ನಲ್ಲೇ ನ್ಯೂಜಿಲೆಂಡ್ ‘ಎ’ ವಿರುದ್ಧದ ಏಕದಿನ ಸರಣಿಯಲ್ಲಿ ಸಂಜು ಸ್ಯಾಮ್ಸನ್ ಅವರನ್ನು ಭಾರತ ‘ಎ’ ತಂಡದ ನಾಯಕರನ್ನಾಗಿ ಮಾಡಲಾಗಿತ್ತು. ಸ್ಯಾಮ್ಸನ್ ನಾಯಕತ್ವದಲ್ಲಿ ಭಾರತ ‘ಎ’ ತಂಡದ ನ್ಯೂಜಿಲೆಂಡ್ ‘ಎ’ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯನ್ನು 3-0 ಅಂತರದಲ್ಲಿ ಕ್ಲೀನ್ ಸ್ವೀಪ್ ಮಾಡಿತ್ತು. ಅಕ್ಟೋಬರ್ 5ರಂದು ಆರಂಭವಾಗಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಗೆ ಸಂಜು ಸ್ಯಾಮ್ಸನ್ ಭಾರತ ತಂಡದ ಉಪನಾಯಕರಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ.
ಇದನ್ನೂ ಓದಿ : Suryakumar Yadav Record : 3.7 ಎಸೆತಕ್ಕೊಂದು ಬೌಂಡರಿ, 8.9 ಎಸೆತಕ್ಕೊಂದು ಸಿಕ್ಸರ್; ಸೂರ್ಯನಿಗೆ Sky is the only limit
Sanju Samson Cutout in Greenfield International Stadium Thiruvananthapuram