Shreyas Iyer set for Surgery in London : ಶ್ರೇಯಸ್ ಅಯ್ಯರ್ ಐಪಿಎಲ್ ಕನಸು ನುಚ್ಚುನೂರು ; ಟೆಸ್ಟ್ ಚಾಂಪಿಯನ್‌ಷಿಪ್ ಫೈನಲ್‌ಗೂ ಇಲ್ಲ!

ಮುಂಬೈ: ಬೆನ್ನು ನೋವಿನ ಗಾಯದಿಂದ ಬಳಲುತ್ತಿರುವ ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್ ಶ್ರೇಯಸ್ ಅಯ್ಯರ್ (Shreyas Iyer set for Surgery in London) ಅವರ ಐಪಿಎಲ್ ಕಂಬ್ಯಾಕ್ ಕನಸು ನುಚ್ಚುನೂರಾಗಿದೆ. ಐಪಿಎಲ್ ಅಷ್ಟೇ ಅಲ್ಲ, ಜೂನ್’ನಲ್ಲಿ ಇಂಗ್ಲೆಂಡ್’ನಲ್ಲಿ ನಡೆಯಲಿರುವ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್’ಗೂ (ICC World test championship final 2023) ಶ್ರೇಯಸ್ ಅಯ್ಯರ್ ಅಲಭ್ಯರಾಗಿದ್ದಾರೆ. ಕಾರಣ ಇಷ್ಟೇ. ಬೆನ್ನು ನೋವಿಗೆ ಲಂಡನ್’ನಲ್ಲಿ ಶಸ್ತ್ರಚಿಕಿತ್ಸೆಗೊಳಾಗುವಂತೆ ಶ್ರೇಯಸ್ ಅಯ್ಯರ್’ಗೆ ಬಿಸಿಸಿಐ ಸೂಚನೆ ನೀಡಿದೆ.

ಈ ಹಿಂದೆಯೇ ಶಸ್ತ್ರಚಿಕಿತ್ಸೆಗೊಳಲಾಗುವಂತೆ ಬಿಸಿಸಿಐ ಮತ್ತು ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (NCA) ಶ್ರೇಯಸ್ ಅಯ್ಯರ್’ಗೆ ಸೂಚನೆ ನೀಡಿತ್ತು. ಆದರೆ ಐಪಿಎಲ್ ಮತ್ತು ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಲ್ಲಿ ಆಡುವ ಉದ್ದೇಶದಿಂದ ಶಸ್ತ್ರಚಿಕಿತ್ಸೆಗೊಳಗಾಗಲು ಅಯ್ಯರ್ ಹಿಂದೇಟು ಹಾಕಿದ್ದರು. ಐಪಿಎಲ್ ಮತ್ತು WTC ಫೈನಲ್ ಅಷ್ಟೇ ಅಲ್ಲ, ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ಭಾರತದಲ್ಲೇ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ (ICC men’s World Cup 2023) ಟೂರ್ನಿಯ ವೇಳೆಗೂ ಶ್ರೇಯಸ್ ಅಯ್ಯರ್ ಚೇತರಿಸಿಕೊಳ್ಳುವ ಸಾಧ್ಯತೆ ಕಡಿಮೆಯಿತ್ತು.

ಹೀಗಾಗಿ ಶಸ್ತ್ರಚಿಕಿತ್ಸೆಗೊಳಗಾಗುವಂತೆ ಬಿಸಿಸಿಐ ನೀಡಿರುವ ಸೂಚನೆಯನ್ನು ಧಿಕ್ಕರಿಸಿದ್ದ ಶ್ರೇಯಸ್ ಅಯ್ಯರ್, ಕೆಲ ದಿನಗಳ ವಿಶ್ರಾಂತಿಯನ್ನಷ್ಟೇ ಪಡೆಯಲು ನಿರ್ಧರಿಸಿದ್ದರು. ಹೀಗಾಗಿ ಐಪಿಎಲ್ ಟೂರ್ನಿಯ ಆರಂಭದ ಕೆಲ ಪಂದ್ಯಗಳಿಗೆ ಅಲಭ್ಯರಾಗಿ, ಟೂರ್ನಿಯ ಮಧ್ಯದಲ್ಲಿ ಕೋಲ್ಕತಾ ನೈಟ್ ರೈಡರ್ಸ್ (Kolkata Knight Riders) ತಂಡವನ್ನು ಸೇರಿಕೊಳ್ಳುವ ಲೆಕ್ಕಾಚಾರದಲ್ಲಿದ್ದರು. ತಮ್ಮ ಬೆನ್ನು ನೋವಿಗೆ ಆಯುರ್ವೇದಿಕ್ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಚೇತರಿಕೆ ಕಾಣದ ಕಾರಣ, ಬಿಸಿಸಿಐ ಸೂಚನೆಯಂತೆ ಕೊನೆಗೂ ಶಸ್ತ್ರಚಿಕಿತ್ಸೆಗೊಳಗಾಗಲು ನಿರ್ಧರಿಸಲಿದ್ದಾರೆ.

ಇದನ್ನೂ ಓದಿ : Virat Kohli One-8 Resturant : ತನ್ನದೇ ರೆಸ್ಟೋರೆಂಟ್‌ನಲ್ಲಿ ಮ್ಯಾಕ್ಸಿ, ಫಾಫ್, ಸಿರಾಜ್‌ಗೆ ಭರ್ಜರಿ ಊಟ ಮಾಡಿಸಿದ ಕಿಂಗ್ ಕೊಹ್ಲಿ

ಶ್ರೇಯಸ್ ಅಯ್ಯರ್ ಅವರ ಗಾಯದ ಗಂಭೀರತೆಯನ್ನು ಅರಿತಿರುವ ಬಿಸಿಸಿಐ, ಶಸ್ತ್ರಚಿಕಿತ್ಸೆ ನಡೆಸಿಕೊಳ್ಳುವಂತೆ ಅಯ್ಯರ್’ಗೆ ಕಟ್ಟು ನಿಟ್ಟಿನ ಸೂಚನೆ ನೀಡಿದೆ. ಹೀಗಾಗಿ ಐಪಿಎಲ್, ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್’ನಿಂದ ಅಯ್ಯರ್ ಹೊರಗುಳಿಯಲಿದ್ದು, ಏಕದಿನ ವಿಶ್ವಕಪ್ ಟೂರ್ನಿಯ ವೇಳೆಗೆ ಭಾರತ ತಂಡವನ್ನು ಸೇರಿಕೊಳ್ಳುವ ಸಾಧ್ಯತೆಯಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್ ಪಂದ್ಯ ಜೂನ್ 7ರಂದು ಇಂಗ್ಲೆಂಡ್’ನ ಓವಲ್ ಮೈದಾನದಲ್ಲಿ ಆರಂಭವಾಗಲಿದ್ದು, ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಲಿವೆ.

Shreyas Iyer set for Surgery in London: Shreyas Iyer’s IPL dream come true; Not even the Test Championship final!

Comments are closed.