ಆರ್‌ಸಿಬಿ ಅಭಿಮಾನಿಗಳಿಗೆ ಗುಡ್ ನ್ಯೂಸ್, ಮುಂದಿನ ವರ್ಷ ಬೆಂಗಳೂರಿನಲ್ಲೂ ನಡೆಯಲಿದೆ ಮಹಿಳಾ ಐಪಿಎಲ್

ಬೆಂಗಳೂರು: ಚೊಚ್ಚಲ ಆವೃತ್ತಿಯಲ್ಲೇ ಭಾರೀ ಯಶಸ್ಸು ಕಂಡಿರುವ ಮಹಿಳಾ ಐಪಿಎಲ್ ಖ್ಯಾತಿಯ ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿ (Women’s Premier League) ಮುಂದಿನ ವರ್ಷ ಬೆಂಗಳೂರಿನಲ್ಲೂ (RCB Women fans) ನಡೆಯಲಿದೆ. ಐಪಿಎಲ್ ಮಾದರಿಯಲ್ಲಿ ಡಬ್ಲ್ಯೂಪಿಎಲ್ (WPL) ಟೂರ್ನಿಯನ್ನು ನಡೆಸಲು ಬಿಸಿಸಿಐ (BCCI) ಮುಂದಾಗಿದೆ. ಕಳೆದ ತಿಂಗಳು ನಡೆದ ಚೊಚ್ಚಲ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್’ನ ಪಂದ್ಯಗಳು ಮುಂಬೈನಲ್ಲಿ ಮಾತ್ರ ನಡೆದಿದ್ದವು.

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣ ಹಾಗೂ ಡಿ.ವೈ ಪಾಟೀಲ್ ಮೈದಾನಗಳು ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳಿಗೆ ಆತಿಥ್ಯ ವಹಿಸಿದ್ದರು. ಒಟ್ಟು ಐದು ತಂಡಗಳು ಭಾಗವಹಿಸಿದ್ದ ಟೂರ್ನಿಯಲ್ಲಿ ಆತಿಥೇಯ ಮುಂಬೈ ಇಂಡಿಯನ್ಸ್ (Mumbai Indians Women) ತಂಡ ಫೈನಲ್’ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು (Delhi Capitals Women) ಸೋಲಿಸಿ ಚಾಂಪಿಯನ್ ಪಟ್ಟ ಗೆದ್ದುಕೊಂಡಿತ್ತು. ಸ್ಮೃತಿ ಮಂಧನ ನಾಯಕತ್ವದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮಹಿಳಾ ತಂಡ (Royal Challengers Bangalore Women) ಟೂರ್ನಿಯಲ್ಲಿ 4ನೇ ಸ್ಥಾನ ಪಡೆದಿತ್ತು.

ಮುಂದಿನ ವರ್ಷದ ಮಹಿಳಾ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ಆಯಾ ತಂಡಗಳ ತವರು ರಾಜ್ಯಗಳಲ್ಲಿ ಆಡಿಸಲು ಬಿಸಿಸಿಐ ಮುಂದಾಗಿದೆ. ಹೀಗಾಗಿ WPL ಪಂದ್ಯಗಳು ಮುಂಬೈ ಅಷ್ಟೇ ಅಲ್ಲದೆ, ಬೆಂಗಳೂರು, ದೆಹಲಿ, ಲಕ್ನೋ ಮತ್ತು ಅಹ್ಮದಾಬಾದ್’ನಲ್ಲೂ ನಡೆಯಲಿವೆ. ಮಹಿಳಾ ಪ್ರೀಮಿಯರ್ ಲೀಗ್ ಟೂರ್ನಿಯ ಮೊದಲ ಆವೃತ್ತಿಯಲ್ಲೇ ಭಾರೀ ಯಶಸ್ಸು ಕಂಡಿತ್ತು.

ಇದನ್ನೂ ಓದಿ : Virat Kohli One-8 Resturant : ತನ್ನದೇ ರೆಸ್ಟೋರೆಂಟ್‌ನಲ್ಲಿ ಮ್ಯಾಕ್ಸಿ, ಫಾಫ್, ಸಿರಾಜ್‌ಗೆ ಭರ್ಜರಿ ಊಟ ಮಾಡಿಸಿದ ಕಿಂಗ್ ಕೊಹ್ಲಿ

ಇದನ್ನೂ ಓದಿ : Nepal to support RCB : ಆರ್‌ಸಿಬಿಗೆ ಸಪೋರ್ಟ್ ಮಾಡಲು 2,376 ಕಿ.ಮೀ ದೂರದಿಂದ ಬೆಂಗಳೂರಿಗೆ ಬಂದ ಅಭಿಮಾನಿಗಳು

ಬ್ರೆಬೋರ್ನ್ ಕ್ರೀಡಾಂಗಣ ಮತ್ತು ಡಿ.ವೈ ಪಾಟೀಲ್ ಸ್ಪೋರ್ಟ್ಸ್ ಅಕಾಡೆಮಿ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ವೀಕ್ಷಿಸಲು ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿ ಆಗಮಿಸಿದ್ದರು. ಲೀಗ್ ಹಂತದ ಪಂದ್ಯಗಳಿಗೆ ಮಹಿಳೆಯರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿತ್ತು. ಡಬ್ಲ್ಯೂಪಿಎಲ್ ಟೂರ್ನಿಗೆ ಒಟ್ಟು 5 ಫ್ರಾಂಚೈಸಿ ತಂಡಗಳ ಬಿಡ್ಡಿಂಗ್’ನಲ್ಲಿ ಬಿಸಿಸಿಐ 4700 ಕೋಟಿ ರುಪಾಯಿ ಆದಾಯ ಗಳಿಸಿತ್ತು. ಟೂರ್ನಿಯ ಮಾಧ್ಯಮ ಪ್ರಸಾರ ಹಕ್ಕುಗಳನ್ನು 951 ಕೋಟಿ ರುಪಾಯಿಗಳಿಗೆ ಮಾರಾಟ ಮಾಡಲಾಗಿತ್ತು.

RCB Women fans: Good news for RCB fans, Women’s IPL will also be held in Bangalore next year

Comments are closed.