Shubman Gill double century: ಗಿಲ್ ಗಿಲ್ ಗಿಲ್ಲಕ್ಕು, ಶುಭಮನ್ ಗಿಲ್ ಡಬಲ್ ಸೆಂಚುರಿ ಕಿಕ್ಕು ; ಭರ್ಜರಿ ದ್ವಿಶತಕ ಸಿಡಿಸಿದ ಪಂಜಾಬ್ ಕಾ ಪುತ್ತರ್

ಹೈದರಾಬಾದ್: Shubman Gill double century : ಟೀಮ್ ಇಂಡಿಯಾದ ಯುವ ಬಲಗೈ ಓಪನರ್ ಶುಭಮನ್ ಗಿಲ್ ನ್ಯೂಜಿಲೆಂಡ್ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದಾರೆ. ಹೈದರಾಬಾದ್’ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಕಿವೀಸ್ ವಿರುದ್ಧ ಅಬ್ಬರಿಸಿದ ಶುಭಮನ್ ಗಿಲ್ ಕೇವಲ 145 ಎಸೆತಗಳಲ್ಲಿ ದ್ವಿಶತಕ ಸಿಡಿಸಿದರು. ಈ ಮೂಲಕ ಏಕದಿನ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ 8ನೇ ಆಟಗಾರನೆಂಬ ಹಿರಿಮೆಗೆ ಗಿಲ್ ಪಾತ್ರರಾದರು. 23 ವರ್ಷದ ಪಂಜಾಬ್’ನ ಆಟಗಾರ ಶುಭಮನ್ ಗಿಲ್ 149 ಎಸೆತಗಳನ್ನೆದುರಿಸಿ 19 ಬೌಂಡರಿ ಹಾಗೂ 9 ಸಿಕ್ಸರ್’ಗಳ ಸಹಿತ 208 ರನ್ ಗಳಿಸಿ ಔಟಾದರು.

https://twitter.com/Ruchi0495/status/1615681967693131779?s=20&t=J9uX4eTpbBCP3Vr040Vl7w

11 ಎಸೆತಗಳಲ್ಲಿ 6 ಸಿಕ್ಸರ್ !
ಕೊನೆಯ 3 ಓವರ್’ಗಳಲ್ಲಿ ತಾವು ಎದುರಿಸಿದ 11 ಎಸೆತಗಳಲ್ಲಿ ಗಿಲ್ ಆರು ಸಿಕ್ಸರ್’ಗಳನ್ನು ಬಾರಿಸಿದ್ದು ವಿಶೇಷ. 47ನೇ ಓವರ್ ಅಂತ್ಯಕ್ಕೆ 137 ಎಸೆತಗಳಲ್ಲಿ 169 ರನ್ ಗಳಿಸಿದ್ದ ಗಿಲ್, ಮುಂದಿನ 11 ಎಸೆತಗಳಲ್ಲಿ 39 ರನ್ ಬಾರಿಸಿದರು. ಇದಕ್ಕೂ ಮೊದಲು ಭಾರತದ ಸಚಿನ್ ತೆಂಡೂಲ್ಕರ್, ವೀರೇಂದ್ರ ಸೆಹ್ವಾಗ್, ಇಶಾನ್ ಕಿಶನ್, ರೋಹಿತ್ ಶರ್ಮಾ, ವೆಸ್ಟ್ ಇಂಡೀಸ್’ನ ಕ್ರಿಸ್ ಗೇಲ್, ಪಾಕಿಸ್ತಾನದ ಫಖಾರ್ ಜಮಾನ್, ನ್ಯೂಜಿಲೆಂಡ್’ನ ಮಾರ್ಟಿನ್ ಗಪ್ಟಿಲ್ ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ದ್ವಿಶತಕ ಬಾರಿಸಿದ್ದರು. ಈ ಸಾಲಿಗೆ ಈಗ ಶುಭಮನ್ ಗಿಲ್ ಸೇರ್ಪಡೆಗೊಂಡಿದ್ದಾರೆ.

ಏಕದಿನ ಅಂತರಾಷ್ಟ್ರೀಯ ಕ್ರಿಕೆಟ್’ನ ದ್ವಿಶತಕ ವೀರರು

ರೋಹಿತ್ ಶರ್ಮಾ: 264 (ಶ್ರೀಲಂಕಾ ವಿರುದ್ಧ, 2014)
ಮಾರ್ಟಿನ್ ಗಪ್ಟಿಲ್: 237* (ವೆಸ್ಟ್ ಇಂಡೀಸ್ ವಿರುದ್ಧ, 2015)
ವೀರೇಂದ್ರ ಸೆಹ್ವಾಗ್: 219 (ವೆಸ್ಟ್ ಇಂಡೀಸ್ ವಿರುದ್ಧ, 2011)
ಕ್ರಿಸ್ ಗೇಲ್: 215 (ಜಿಂಬಾಬ್ವೆ ವಿರುದ್ಧ, 2015)
ಫಖಾರ್ ಜಮಾನ್: 210* (ಜಿಂಬಾಬ್ವೆ ವಿರುದ್ಧ, 2018)
ಇಶಾನ್ ಕಿಶನ್: 210 ಬಾಂಗ್ಲಾದೇಶ ವಿರುದ್ಧ, 2022)
ರೋಹಿತ್ ಶರ್ಮಾ: 209 (ಆಸ್ಟ್ರೇಲಿಯಾ ವಿರುದ್ಧ, 2013)
ರೋಹಿತ್ ಶರ್ಮಾ: 208* (ಶ್ರೀಲಂಕಾ ವಿರುದ್ಧ, 2017)
ಶುಭಮನ್ ಗಿಲ್: 208 (ನ್ಯೂಜಿಲೆಂಡ್ ವಿರುದ್ಧ, 2023)
ಸಚಿನ್ ತೆಂಡೂಲ್ಕರ್: 200* (ದಕ್ಷಿಣ ಆಫ್ರಿಕಾ ವಿರುದ್ಧ, 2010)

ಇದನ್ನೂ ಓದಿ : ಮದುವೆಯ ಬೆನ್ನಲ್ಲೇ ಕ್ರಿಕೆಟ್ ಮೈದಾನಕ್ಕೆ ವೇದಾ ಕೃಷ್ಣಮೂರ್ತಿ, ಕರ್ನಾಟಕ ತಂಡಕ್ಕೆ ವೇದಾ ನಾಯಕಿ

ಇದನ್ನೂ ಓದಿ ; Virat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ ಉಡುಗೊರೆ ಕೊಟ್ಟ ವಿರಾಟ್

English News Click here

Shubman Gill double century India vs New zealand

Comments are closed.