Smriti Mandhana: ಒಂದು ರನ್’ಗೆ 2,28,187 ಲಕ್ಷ; 3.40 ಕೋಟಿಗೆ ಸ್ಮೃತಿ ಮಂಧನ ಗಳಿಸಿದ ರನ್ ಎಷ್ಟು ಗೊತ್ತಾ?

ಬೆಂಗಳೂರು: (Smriti Mandhana) ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ (Women’s Premier League 2023) ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ (Royal Challengers Women) 4ನೇ ಸ್ಥಾನಕ್ಕೆ ತೃಪ್ತಿ ಪಟ್ಟು ಪ್ಲೇ ಆಫ್ ಹಂತಕ್ಕೇರಲು ವಿಫಲವಾಗಿದೆ. ಟೂರ್ನಿ ಆರಂಭಕ್ಕೂ ಮುನ್ನ ಚಾಂಪಿಯನ್ ಪಟ್ಟಕ್ಕೇರುವ ಹಾಟ್ ಫೇವರಿಟ್ ತಂಡವಾಗಿದ್ದ ಆರ್’ಸಿಬಿ, 4ನೇ ಸ್ಥಾನಕ್ಕೆ ಕುಸಿಯಲು ಕಾರಣ ನಾಯಕಿ ಸ್ಮೃತಿ ಮಂಧನ ಅವರ ದಯನೀಯ ವೈಫಲ್ಯ.

WPL ಆಟಗಾರ್ತಿಯರ ಹರಾಜಿನಲ್ಲಿ ಟೀಮ್ ಇಂಡಿಯಾ ಸೂಪರ್ ಸ್ಟಾರ್ ಸ್ಮೃತಿ ಮಂಧನ (Smriti Mandhana) ಅವರನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫ್ರಾಂಚೈಸಿ ಬರೋಬ್ಬರಿ 3.40 ಕೋಟಿ ರೂ. ಮೊತ್ತಕ್ಕೆ ಖರೀದಿಸಿತ್ತು. ಈ ಮೂಲಕ ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಸ್ಮೃತಿ ಮಂಧನ ಅತ್ಯಂತ ದುಬಾರಿ ಆಟಗಾರ್ತಿ ಎಂಬ ದಾಖಲೆ ಬರೆದಿದ್ದರು. ಆದರೆ ಚೊಚ್ಚಲ ಆವೃತ್ತಿಯ WPLನಲ್ಲಿ ಸ್ಮೃತಿ ಮಂಧನ ನಿರೀಕ್ಷೆಗೆ ತಕ್ಕಂತೆ ಆಟವಾಡುವಲ್ಲಿ ಎಡವಿ ಭಾರೀ ವೈಫಲ್ಯ ಎದುರಿಸಿದ್ದಾರೆ. ಆಡಿರುವ 8 ಪಂದ್ಯಗಳಿಂದ ಎಡಗೈ ಬ್ಯಾಟರ್ ಮಂಧನ ಗಳಿಸಿರುವ ಒಟ್ಟು ರನ್ ಕೇವಲ 149.

WPL-2023 ಟೂರ್ನಿಯಲ್ಲಿ ಸ್ಮೃತಿ ಮಂಧನ ಸಾಧನೆ
ಪಂದ್ಯ: 08
ರನ್: 149
ಸರಾಸರಿ: 18.62
ಸ್ಟ್ರೈಕ್’ರೇಟ್: 111.19
ಗರಿಷ್ಠ: 37

ರಾಯಲ್ ಚಾಲೆಂಜರ್ಸ್ ಪರ ಆಡಲು ಸ್ಮೃತಿ ಮಂಧನ ಈ ವರ್ಷ 3.40 ಕೋಟಿ ರೂ. ಪಡೆದಿದ್ದಾರೆ. ಆದ್ೆ WPLನ ದುಬಾರಿ ಆಟಗಾರ್ತಿ ಖ್ಯಾತಿಯ ಮಂಧನ (Smriti Mandhana) ಗಳಿಸಿರುವುದು ಕೇವಲ 149 ರನ್. ಅಂದ್ರೆ ಪ್ರತೀ ಒಂದು ರನ್’ಗೆ ಮಂಧನ 2,28,187 ಲಕ್ಷ ಪಡೆದಂತಾಗಿದೆ. ನಾಯಕಿ ಮಂಧನ ಅವರ ವೈಫಲ್ಯದಿಂದಾಗಿ ರಾಯಲ್ ಚಾಲೆಂಜರ್ಸ್ ತಂಡ WPL ಟೂರ್ನಿಯಲ್ಲಿ ಆಡಿರುವ ಒಟ್ಟು 8 ಪಂದ್ಯಗಳಲ್ಲಿ 6 ಸೋಲು ಕಂಡಿದ್ದು, ಕೇವಲ 2 ಗೆಲುವುಗಳನ್ನಷ್ಟೇ ದಾಖಲಿಸಿದೆ.

ಇದನ್ನೂ ಓದಿ : RCB Women: ಸೋಲಿನೊಂದಿಗೆ ಅಂತ್ಯವಾಯ್ತು ಆರ್‌ಸಿಬಿ ವನಿತೆಯರ WPL ಅಭಿಯಾನ

ಇದನ್ನೂ ಓದಿ : India Vs Australia 3rd ODI : ಆಸ್ಟ್ರೇಲಿಯಾ ವಿರುದ್ಧದ “ಫೈನಲ್” ಪಂದ್ಯಕ್ಕೆ ಹೀಗಿದೆ ಟೀಮ್ ಇಂಡಿಯಾ ಪ್ಲೇಯಿಂಗ್ XI, ಸೂರ್ಯನಿಗೆ ಇದೇ ಲಾಸ್ಟ್ ಚಾನ್ಸ್

ಇದನ್ನೂ ಓದಿ : MS Dhoni: ಚೆನ್ನೈನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಪಂದ್ಯ ವೀಕ್ಷಿಸಲಿದ್ದಾರೆ ಎಂ.ಎಸ್‌ ಧೋನಿ


ಸತತ ಐದು ಸೋಲುಗಳ ನಂತರ ಸತತ ಎರಡು ಗೆಲುವು ದಾಖಲಿಸಿದ್ದ ಆರ್’ಸಿಬಿ, ಮಂಗಳವಾರ ನಡೆದ ಮುಂಬೈ ಇಂಡಿಯನ್ಸ್ ವಿರುದ್ಧದ ಕೊನೆಯ ಲೀಗ್ ಪಂದ್ಯದಲ್ಲೂ ಸೋಲು ಕಂಡಿದ್ದು, ಒಟ್ಟು 4 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೆ ತೃಪ್ತಿಪಟ್ಟಿತು. 8 ಪಂದ್ಯಗಳಲ್ಲಿ 2 ಗೆಲುವು, 6 ಸೋಲು ಕಂಡಿರುವ ಗುಜರಾತ್ ಜೈಂಟ್ಸ್, ರನ್’ರೇಟ್’ನಲ್ಲಿ ಆರ್’ಸಿಬಿಗಿಂತ ಹಿಂದಿರುವ ಕಾರಣ ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.

Smriti Mandhana: 2,28,187 lakhs for one run; Do you know how many runs Smriti Mandhan scored for 3.40 crores?

Comments are closed.