ಸೋಮವಾರ, ಏಪ್ರಿಲ್ 28, 2025
HomeSportsCricketSmriti Mandhana Record : ಸ್ಮೃತಿ ಮಂಧಾನ@3000: ಮಿಥಾಲಿ ರಾಜ್ ದಾಖಲೆ ಪುಡಿಗಟ್ಟಿದ ಕ್ರಿಕೆಟ್ ಮೈದಾನದ...

Smriti Mandhana Record : ಸ್ಮೃತಿ ಮಂಧಾನ@3000: ಮಿಥಾಲಿ ರಾಜ್ ದಾಖಲೆ ಪುಡಿಗಟ್ಟಿದ ಕ್ರಿಕೆಟ್ ಮೈದಾನದ ಮೋಹಕ ತಾರೆ

- Advertisement -

ಕ್ಯಾಂಟರ್’ಬರಿ: Smriti Mandhana Record: ಕ್ರಿಕೆಟ್ ಜಗತ್ತಿನ ಮೋಹಕ ತಾರೆ ಖ್ಯಾತಿಯ ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಬ್ಯಾಟರ್ ಸ್ಮೃತಿ ಮಂಧಾನ ಏಕದಿನ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಅತೀ ವೇಗವಾಗಿ 3 ಸಾವಿರ ರನ್ ಪೂರ್ತಿಗೊಳಿಸಿದ ಭಾರತದ ಆಟಗಾರ್ತಿ ಎಂಬ ದಾಖಲೆ ನಿರ್ಮಿಸಿದ್ದಾರೆ. ಇಂಗ್ಲೆಂಡ್ ವಿರುದ್ಧ ಸೇಂಟ್ ಲಾರೆನ್ಸ್ ಮೈದಾನದಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಮಂಧಾನ ಈ ದಾಖಲೆ ಬರೆದರು. ತಮ್ಮ 76ನೇ ಏಕದಿನ ಇನ್ನಿಂಗ್ಸ್’ನಲ್ಲಿ 3 ಸಾವಿರ ರನ್ ಗಡಿ ದಾಟುವ ಮೂಲಕ ಭಾರತ ತಂಡದ ಮಾಜಿ ನಾಯಕಿ ಮಿಥಾಲಿ ರಾಜ್ (Mithali Raj Record) ಅವರ ದಾಖಲೆಯನ್ನು ಸ್ಮೃತಿ ಮಂಧಾನ ಪುಡಿಗಟ್ಟಿದರು. ದಿಗ್ಗಜ ಬ್ಯಾಟರ್ ಮಿಥಾಲಿ ರಾಜ್ 88ನೇ ಏಕದಿನ ಇನ್ನಿಂಗ್ಸ್’ನಲ್ಲಿ 3,000 ರನ್’ಗಳ ಗಡಿ ದಾಟಿದ್ದರು.

ಮಹಿಳಾ ಏಕದಿನ ಕ್ರಿಕೆಟ್: ಭಾರತ ಪರ ವೇಗದ 3000 ರನ್

ಸ್ಮೃತಿ ಮಂಧಾನ: 76 ಇನ್ನಿಂಗ್ಸ್
ಮಿಥಾಲಿ ರಾಜ್: 88 ಇನ್ನಿಂಗ್ಸ್

ಭಾರತ ಪರ ಮಹಿಳಾ ಏಕದಿನ ಕ್ರಿಕೆಟ್’ನಲ್ಲಿ ವೇಗವಾಗಿ 3000 ರನ್ ಗಳಿಸಿದ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿರುವ ಸ್ಮೃತಿ ಮಂಧಾನ, ಒಟ್ಟಾರೆ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಲಿನಲ್ಲಿ 3ನೇ ಸ್ಥಾನದಲ್ಲಿದ್ದಾರೆ. ಅತೀ ವೇಗವಾಗಿ 3 ಸಾವಿರ ಏಕದಿನ ರನ್ ಪೂರ್ತಿಗೊಳಿಸಿದ ದಾಖಲೆ ಆಸ್ಟ್ರೇಲಿಯಾದ ಬೆಲಿಂಡಾ ಕ್ಲಾರ್ಕ್ ಅವರ ಹೆಸರಲ್ಲಿದೆ ಕ್ಲಾರ್ಕ್ ಕೇವಲ 62 ಇನ್ನಿಂಗ್ಸ್’ನಲ್ಲಿ ಈ ಸಾಧನೆ ಮಾಡಿದ್ದರೆ, 64 ಇನ್ನಿಂಗ್ಸ್’ಗಳಲ್ಲಿ 3000 ಸಾವಿರ ಏಕದಿನ ರನ್ ಪೂರ್ತಿಗೊಳಿಸಿರುವ ಆಸ್ಟ್ರೇಲಿಯಾ ತಂಡದ ಹಾಲಿ ನಾಯಕಿ ಮೆಗ್ ಲ್ಯಾನಿಂಗ್ 2ನೇ ಸ್ಥಾನದಲ್ಲಿದ್ದಾರೆ.

ಮಹಿಳಾ ಏಕದಿನ ಕ್ರಿಕೆಟ್: ವೇಗದ 3000 ರನ್

ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ): 62 ಇನ್ನಿಂಗ್ಸ್
ಮೆಗ್ ಲ್ಯಾನಿಂಗ್ (ಆಸ್ಟ್ರೇಲಿಯಾ): 64 ಇನ್ನಿಂಗ್ಸ್
ಸ್ಮೃತಿ ಮಂಧಾನ (ಭಾರತ): 76 ಇನ್ನಿಂಗ್ಸ್

ಮಹಿಳಾ ಏಕದಿನ ಕ್ರಿಕೆಟ್: ಭಾರತ ಪರ ಅತೀ ಹೆಚ್ಚು ರನ್ (ಟಾಪ್-5)

7,805: ಮಿಥಾಲಿ ರಾಜ್ (211 ಇನ್ನಿಂಗ್ಸ್, 7 ಶತಕ, 50.68 ಸರಸಾರಿ)
3,318: ಹರ್ಮನ್’ಪ್ರೀತ್ ಕೌರ್ (104 ಇನ್ನಿಂಗ್ಸ್, 5 ಶತಕ, 38.58 ಸರಸಾರಿ)
3023: ಸ್ಮತಿ ಮಂಧಾನ (76 ಇನ್ನಿಂಗ್ಸ್, 5 ಶತಕ, 43.18 ಸರಸಾರಿ)
2,856: ಅಂಜುಮ್ ಚೋಪ್ರಾ(112 ಇನ್ನಿಂಗ್ಸ್, 01 ಶತಕ, 31.38 ಸರಸಾರಿ)
2,299: ಪೂನಂ ರಾವತ್(73 ಇನ್ನಿಂಗ್ಸ್, 3 ಶತಕ, 34.83 ಸರಸಾರಿ)

ಇದನ್ನೂ ಓದಿ : Womens Asia Cup 2022 : ಮಹಿಳಾ ಏಷ್ಯಾ ಕಪ್ ಟಿ20 ಟೂರ್ನಿಗೆ ಟೀಮ್ ಇಂಡಿಯಾ ಪ್ರಕಟ… ತಂಡದಲ್ಲಿ ಓರ್ವ ಕನ್ನಡತಿ

ಇದನ್ನೂ ಓದಿ : India Vs Pak Jersey Fight : ಟಿ20 ವಿಶ್ವಕಪ್: “ಕಲ್ಲಂಗಡಿ Vs ಹಾರ್ಪಿಕ್” ; ಭಾರತ Vs ಪಾಕ್ ಜರ್ಸಿ ಜಟಾಪಟಿ ; ಏನಿದು ಹೊಸ ರಗಳೆ ?

Smriti Mandhana Record Mithali Raj’s Record Crushing Cricket Star Fastest 3000 runs in Women’s Cricket

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular