Sophie Devine : ಮಹಿಳಾ ಪ್ರೀಮಿಯರ್ ಲೀಗ್’ನಲ್ಲಿ ಒಂದೇ ಒಂದು ರನ್ನಿಂದ ಶತಕ ಮಿಸ್ ಮಾಡಿಕೊಂಡ RCB ಸ್ಟಾರ್

ಮುಂಬೈ : ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore Women’s) ತಂಡದ ಪರ ಆಡುತ್ತಿರುವ ನ್ಯೂಜಿಲೆಂಡ್ ಆಲ್ರೌಂಡರ್ (Sophie Devine) ಸೋಫಿ ಡಿವೈನ್, ಮಹಿಳ್ ಪ್ರೀಮಿಯರ್ ಲೀಗ್ (Women’s Premier league – WPL) ಟೂರ್ನಿಯಲ್ಲಿ ಕೇವಲ ಒಂದೇ ಒಂದು ರನ್ನಿಂದ ಐತಿಹಾಸಿಕ ಶತಕವನ್ನು ತಪ್ಪಿಸಿಕೊಂಡಿದ್ದಾರೆ.

ಮುಂಬೈನ ಬ್ರೆಬೋರ್ನ್ ಕ್ರೀಡಾಂಗಣದಲ್ಲಿ ನಡೆದ WPL ಪಂದ್ಯದಲ್ಲಿ ಸೋಫಿ ಡಿವೈನ್ ಗುಜರಾತ್ ಜೈಂಟ್ಸ್ ವಿರುದ್ಧ 36 ಎಸೆತಗಳಲ್ಲಿ ಅಮೋಘ 99 ರನ್ ಬಾರಿಸಿದರು. ಜೈಂಟ್ಸ್ ದಾಳಿಯನ್ನು ಚಿಂದಿ ಉಡಾಯಿಸಿದ ಡಿವೈನ್, ಕೇವಲ ಎಸೆತಗಳಲ್ಲಿ ಶತಕ ಪೂರ್ತಿಗೊಳಿಸಿದರು. 20 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಸೋಫಿ ಡಿವೈನ್ ಮುಂದಿನ 49 ರನ್’ಗಳನ್ನು ಕೇವಲ 16 ಎಸೆತಗಳಲ್ಲಿ ಗಳಿಸಿದ್ದು ವಿಶೇಷ. ಆದರೆ 35 ಎಸೆತಗಳಲ್ಲಿ 99 ರನ್ ಗಳಿಸಿದ್ದಾಗ ದೊಡ್ಡ ಹೊಡೆತ ಬಾರಿಸಲು ಹೋಗಿ ಮಿಡಾಫ್’ನಲ್ಲಿ ಕ್ಯಾಚಿತ್ತು ಕೂದಲೆಳೆಯ ಅಂತರದಲ್ಲಿ ಶತಕ ವಂಚಿತರಾದರು.

ಸಿಡಿಲಬ್ಬರದ ಆಟವಾಡಿದ ಬಲಗೈ ಬ್ಯಾಟರ್ ಸೋಫಿ ಡಿವೈನ್ 9 ಬೌಂಡರಿ ಹಾಗೂ 8 ಸಿಡಿಲ ಸಿಕ್ಸರ್’ಗಳನ್ನು ಬಾರಿಸಿದರು. ಅವರು ಗಳಿಸಿದ 99 ರನ್’ಗಳಲ್ಲಿ 84 ರನ್’ಗಳು ಕೇವಲ 17 ಎಸೆತಗಳಲ್ಲಿ ಬೌಂಡರಿ – ಸಿಕ್ಸರ್ ಮೂಲಕವೇ ಬಂದದ್ದು ಸೋಫಿ ಡಿವೈನ್ ಆರ್ಭಟಕ್ಕೆ ಸಾಕ್ಷಿ.

ಸೋಫಿ ಡಿವೈನ್ ಅವರ ಸಿಡಿಲಬ್ಬರದ ಬ್ಯಾಟಿಂಗ್ ಬಲದಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ತನ್ನ 7ನೇ ಲೀಗ್ ಪಂದ್ಯದಲ್ಲಿ ಗುಜರಾತ್ ಜೈಂಟ್ಸ್ ವಿರುದ್ಧ 8 ವಿಕೆಟ್’ಗಳ ಭರ್ಜರಿ ಗೆಲುವು ದಾಖಲಿಸಿತು. ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಗುಜರಾತ್ ನಿಗದಿತ 20 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 188 ರನ್’ಗಳ ಬೃಹತ್ ಮೊತ್ತ ಕಲೆ ಹಾಕಿತು. ಈ ಗುರಿ ಬೆನ್ನಟ್ಟಿದ ಆರ್ಸಿಬಿ ತಂಡ 15.3 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 189 ರನ್ ಗಳಿಸಿ ಭರ್ಜರಿ ಗೆಲುವು ದಾಖಲಿಸಿತು. ಮೊದಲ ಐದೂ ಲೀಗ್ ಪಂದ್ಯಗಳನ್ನು ಸೋತಿದ್ದ ರಾಯಲ್ ಚಾಲೆಂಜರ್ಸ್, ಸತತ 2 ಗೆಲುವುಗಳೊಂದಿಗೆ ಪ್ಲೇ ಆಫ್ ಕನಸನ್ನು ಜೀವಂತವಾಗಿರಿಸಿಕೊಂಡಿದೆ.

ಇದನ್ನೂ ಓದಿ : KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

ಇದನ್ನೂ ಓದಿ : KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

ಇದನ್ನೂ ಓದಿ : Royal Challengers Bangalore : ವಿಲ್ ಜೇಕ್ ಬದಲು ಆರ್’ಸಿಬಿ ಟೀಮ್ ಸೇರಲಿದ್ದಾನೆ ಕಿವೀಸ್’ನ ಸ್ಫೋಟಕ ಆಲ್ರೌಂಡರ್

Sophie Devine: RCB star who missed a century by a single run in the Women’s Premier League

Comments are closed.