Exclusive: ಭಾರತ ಗೆದ್ದ ನಂತರ ಸೂಪರ್ ಸ್ಟಾರ್ ರಜನಿಕಾಂತ್ ಭೇಟಿ ಮಾಡಿದ ಟೀಮ್ ಇಂಡಿಯಾ ಕನ್ನಡಿಗ

ಮುಂಬೈ: ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದಿರುವ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ಪಂದ್ಯದ ವೇಳೆ ವಿಶೇಷ ಅತಿಥಿಯೊಬ್ಬರು ಕ್ರೀಡಾಂಗಣದಲ್ಲಿ (Rajanikant – Raghavendra DVGI) ಕಾಣಿಸಿಕೊಂಡಿದ್ದರು. ಅವರು ಬೇರಾರೂ ಅಲ್ಲ, ಸೂಪರ್ ಸ್ಟಾರ್ ರಜನಿಕಾಂತ್ (Rajanikant). ವಾಂಖೆಡೆ ಕ್ರೀಡಾಂಗಣಕ್ಕೆ ಆಗಮಿಸಿದ್ದ ರಜನಿ, ಭಾರತ ಮತ್ತು ಆಸೀಸ್ ನಡುವಿನ ಪಂದ್ಯವನ್ನು ವೀಕ್ಷಿಸಿದ್ದರು. ಭಾರತ ಪಂದ್ಯ ಗೆದ್ದ ನಂತರ ರಜನಿಕಾಂತ್ ಅವರನ್ನು ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ (Raghavendra DVGI) ಭೇಟಿ ಮಾಡಿದ್ದಾರೆ.

ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯ ರಾಘವೇಂದ್ರ ಡ್ವಿಗಿ ರಜನಿಕಾಂತ್ ಅವರ ದೊಡ್ಡ ಅಭಿಮಾನಿ. ಯಶಸ್ಸಿನ ಹಾದಿಯಲ್ಲಿ ರಜನಿಕಾಂತ್ ಅವರಂತೆ ಆರಂಭದಲ್ಲಿ ಕಷ್ಟದ ದಿನಗಳನ್ನೇ ಎದುರಿಸಿದವರು. ಇದೀಗ ಟೀಮ್ ಇಂಡಿಯಾದ ಬೆನ್ನೆಲುಬಾಗಿರುವ ರಾಘವೇಂದ್ರ, ಕಳೆದ 11 ವರ್ಷಗಳಿಂದ ಭಾರತ ತಂಡದ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಜಗತ್ತಿನ ನಂ.1 ಥ್ರೋಡೌನ್ ಸ್ಪೆಷಲಿಸ್ಟ್ ಆಗಿರುವ ರಾಘವೇಂದ್ರ ಅಭ್ಯಾಸದ ವೇಳೆ ಟೀಮ್ ಇಂಡಿಯಾ ಬ್ಯಾಟ್ಸ್’ಮನ್’ಗಳಿಗೆ ಗುಣಮಟ್ಟದ ಬ್ಯಾಟಿಂಗ್ ತಾಲೀಮು ಸಿಗುವಂತೆ ಮಾಡುತ್ತಿದ್ದಾರೆ. ಮಾಜಿ ನಾಯಕ ವಿರಾಟ್ ಕೊಹ್ಲಿ ಸಹಿತ ತಂಡ ಪ್ರಮುಖ ಬ್ಯಾಟ್ಸ್’ಮನ್’ಗಳ ಯಶಸ್ಸಿನ ಹಿಂದಿನ ಶಕ್ತಿಯಾಗಿ ನಿಂತಿದ್ದಾರೆ. “ನನ್ನ ಯಶಸ್ಸಿನಲ್ಲಿ ರಾಘವೇಂದ್ರ ಅವರ ಪಾತ್ರ ತುಂಬಾ ದೊಡ್ಡದು” ಎಂದು ರನ್ ಮಷಿನ್ ವಿರಾಟ್ ಕೊಹ್ಲಿ ಅವರೇ ಸಾಕಷ್ಟು ಬಾರಿ ಅಂತರಾಷ್ಟ್ರೀಯ ಸುದ್ದಿಗೋಷ್ಠಿ ವೇದಿಕೆಗಳಲ್ಲೇ ಹೇಳಿದ್ದಾರೆ.

https://www.bcci.tv/videos/5558829/trivandrum-special-virat-kohli–shubman-gill-introduce-team-indias-throwdown-specialists

ಆಸ್ಟ್ರೇಲಿಯಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ ರಾಹುಲ್ ಆಕರ್ಷಕ ಅಜೇಯ 75 ರನ್ ಗಳಿಸಿ ಭಾರತವನ್ನು ಗೆಲ್ಲಿಸಿದ್ದರು. ಗೆಲುವಿಗೆ ಆಸ್ಟ್ರೇಲಿಯಾ ಒಡ್ಡಿದ 189 ರನ್’ಗಳ ಗುರಿ ಬೆನ್ನಟ್ಟಿದ್ದ ಟೀಮ್ ಇಂಡಿಯಾ, 83 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಗೆ ಸಿಲುಕಿತ್ತು. ಆದರೆ 5ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ರಾಹುಲ್ ತಂಡಕ್ಕೆ ಆಸರೆಯಾಗಿ ನಿಂತಿದ್ದರು. ಮುರಿಯದ 6ನೇ ವಿಕೆಟ್’ಗೆ ಆಲ್ರೌಂಡರ್ ರವೀಂದ್ರ ಜಡೇಜ ಜೊತೆ 123 ಎಸೆತಗಳಲ್ಲಿ 108 ರನ್’ಗಳ ಜೊತೆಯಾಟವಾಡಿದ ರಾಹುಲ್ ಭಾರತಕ್ಕೆ 5 ವಿಕೆಟ್’ಗೆ ಅಮೋಘ ಗೆಲುವು ತಂದುಕೊಟ್ಟಿದ್ದರು.

ಇದನ್ನೂ ಓದಿ : KL Rahul – Venkatesh Prasad : ಅವಮಾನ ಮಾಡಿದವನಿಂದಲೇ ರಾಹುಲ್’ಗೆ ಸನ್ಮಾನ, ಟೀಕಾಕಾರರಿಗೆ ಆಟದಿಂದಲೇ ಉತ್ತರಿಸಿದ ಕನ್ನಡಿಗ

ಇದನ್ನೂ ಓದಿ : Royal Challengers Bangalore : ವಿಲ್ ಜೇಕ್ ಬದಲು ಆರ್’ಸಿಬಿ ಟೀಮ್ ಸೇರಲಿದ್ದಾನೆ ಕಿವೀಸ್’ನ ಸ್ಫೋಟಕ ಆಲ್ರೌಂಡರ್

91 ಎಸೆತಗಳನ್ನೆದುರಿಸಿದ್ದ ರಾಹುಲ್ 7 ಬೌಂಡರಿ ಹಾಗೂ ಒಂದು ಸಿಕ್ಸರ್ ನೆರವಿನಿಂದ ಅಜೇಯ 75 ರನ್ ಗಳಿಸಿದ್ರೆ, ಜವಾಬ್ದಾರಿಯುತ ಆಟವಾಡಿದ್ದ ರವೀಂದ್ರ ಜಡೇಜ 69 ಎಸೆತಗಳಲ್ಲಿ 5 ಬೌಂಡರಿಗಳ ಸಹಿತ ಅಜೇಯ 45 ರನ್ ಬಾರಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದ್ದರು. ಪ್ರಥಮ ಏಕದಿನ ಪಂದ್ಯವನ್ನು 5 ವಿಕೆಟ್’ಗಳಿಂದ ಗೆದ್ದುಕೊಂಡಿರುವ ಟೀಮ್ ಇಂಡಿಯಾ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದ್ದು, ಸರಣಿಯ 2ನೇ ಪಂದ್ಯ ನಾಳೆ ವಿಶಾಖಪಟ್ಟಣದಲ್ಲಿ ನಡೆಯಲಿದೆ.

Rajanikant – Raghavendra DVGI : Superstar Rajinikanth visited Team India Kannadiga after India won

Comments are closed.