Ganguly to contest CAB president post: ಬಿಸಿಸಿಐನಿಂದ ಔಟ್, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ಸ್ಥಾನಕ್ಕೆ ಸೌರವ್ ಗಂಗೂಲಿ ಸ್ಪರ್ಧೆ

ಕೋಲ್ಕತಾ: ಬಿಸಿಸಿಐನಿಂದ ಹೊರ ಬಿದ್ದಿರುವ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಸೌರವ್ ಗಂಗೂಲಿ (Sourav Ganguly CAB president ) ಮುಂಬರುವ ಬಂಗಾಳ ಕ್ರಿಕೆಟ್ ಸಂಸ್ಥೆಯ (Cricket Association of Bengal – CAB) ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಲಿದ್ದಾರೆ. “CAB ಚುನಾವಣೆಯಲ್ಲಿ ನಾನು ಸ್ಪರ್ಧಿಸುತ್ತಿದ್ದು, ಅಕ್ಟೋಬರ್ 22ರಂದು ನಾಮಪತ್ರ ಸಲ್ಲಿಸಲಿದ್ದೇನೆ. CABನಲ್ಲಿ ನಾನು ಐದು ವರ್ಷಗಳ ಕಾಲ ಇದ್ದೆ, ಲೋಧಾ ನಿಯಮಗಳ ಪ್ರಕಾರ ನಾನು ಇನ್ನೂ 4 ವರ್ಷಗಳ ಕಾಲ CABನಲ್ಲಿ ಮುಂದುವರಿಯಬಹುದು” ಎಂದು ಸೌರವ್ ಗಂಗೂಲಿ ಹೇಳಿದ್ದಾರೆ.

2019ರಲ್ಲಿ ಬಿಸಿಸಿಐ (BCCI) ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಸೌರವ್ ಗಂಗೂಲಿ, ಮತ್ತೊಂದು ಅವಧಿಗೆ ಶ್ರೀಮಂತ ಕ್ರಿಕೆಟ್ ಮಂಡಳಿಯಲ್ಲಿ ಮುಂದುವರಿಯಲು ಬಯಸಿದ್ದರು. ಆದರೆ ಕಾರ್ಯದರ್ಶಿ ಜಯ್ ಶಾ (Jay Shah) ಸೇರಿದಂತೆ ಬಿಸಿಸಿಐ ಪದಾಧಿಕಾರಿಗಳಿಗೆ ಗಂಗೂಲಿ ಮತ್ತೆ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವುದು ಇಷ್ಟವಿರಲಿಲ್ಲ. ಬಿಸಿಸಿಐ ಅಧ್ಯಕ್ಷ ಸ್ಥಾನದ ಬದಲಾಗಿ ಗಂಗೂಲಿಗೆ ಐಪಿಎಲ್ ಮುಖ್ಯಸ್ಥನ ಸ್ಥಾನವನ್ನು ನೀಡುವ ಆಫರ್ ನೀಡಲಾಗಿತ್ತು. ಆದರೆ ಇದನ್ನು ಗಂಗೂಲಿ ಒಪ್ಪಿಕೊಂಡಿಲ್ಲ. ಇದರೊಂದಿಗೆ ಗಂಗೂಲಿ ಬಿಸಿಸಿಐನಿಂದ ಸಂಪೂರ್ಣವಾಗಿ ಹೊರ ಬಿದ್ದಿದ್ದಾರೆ.

ಗಂಗೂಲಿ ಅವರ ಸ್ಥಾನದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷ ರೋಜನ್ ಬಿನ್ನಿ (Roger Binny), ಬಿಸಿಸಿಐ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಲಿದ್ದಾರೆ. ಅಧ್ಯಕ್ಷ ಸ್ಥಾನಕ್ಕೆ ಬಿನ್ನಿ ಮಾತ್ರ ನಾಮಪತ್ರ ಸಲ್ಲಿಸಿರುವ ಕಾರಣ, ಅಕ್ಟೋಬರ್ 18ರಂದು ಮುಂಬೈನಲ್ಲಿ ನಡೆಯಲಿರುವ ಬಿಸಿಸಿಐ ವಾರ್ಷಿಕ ಮಹಾಸಭೆಯ ನಂತರ ಬಿನ್ನಿ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗುತ್ತದೆ. ಹಾಲಿ ಕಾರ್ಯದರ್ಶಿ ಜಯ್ ಶಾ ಮತ್ತೊಂದು ಅವಧಿಗೆ ತಮ್ಮ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

ಬಿಸಿಸಿಐ ಅಧ್ಯಕ್ಷರಾಗುವ ಮೊದಲು ಸೌರವ್ ಗಂಗೂಲಿ ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಬಿಸಿಸಿಐನಲ್ಲಿ ಮುಂದುವರಿಯಲು ಬಯಸಿದ್ದ ಗಂಗೂಲಿಯವರಿಗೆ ಇತರ ಪದಾಧಿಕಾರಿಗಳ ಬೆಂಬಲ ಸಿಕ್ಕಿಲ್ಲ. ಬಿಸಿಸಿಐ ಅಧ್ಯಕ್ಷ ಸ್ಥಾನದ ಬದಲು ಬಂಗಾಳದ ಹುಲಿ ಐಪಿಎಲ್ ಮುಖ್ಯಸ್ಥನ ಸ್ಥಾನದ ಆಫರ್ ನೀಡಲಾಗಿತ್ತು. ಆದರೆ ಅದನ್ನು ಗಂಗೂಲಿ ತಿರಸ್ಕರಿಸಿದ್ದಾರೆ. ಬಿಸಿಸಿಐನಿಂದ ಹೊರ ಬಿದ್ದಿರುವ ಗಂಗೂಲಿ ಮತ್ತೆ ತಮ್ಮ ತವರು ಕ್ರಿಕೆಟ್ ಸಂಸ್ಥೆಗೆ ಮರಳಿದ್ದು, ಬಂಗಾಳ ಕ್ರಿಕೆಟ್ ಸಂಸ್ಥೆಯ ಅಧ್ಯಕ್ಷರಾಗಿ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಇದನ್ನೂ ಓದಿ : T20 World Cup Warm-up Match : ಟಿ20 ವಿಶ್ವಕಪ್’ನಲ್ಲಿ ನಾಳೆ ಭಾರತ Vs ಆಸ್ಟ್ರೇಲಿಯಾ ಅಭ್ಯಾಸ ಪಂದ್ಯ, ಮ್ಯಾಚ್ ಟೈಮಿಂಗ್ಸ್, Live telecast ಮಾಹಿತಿಗೆ ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ : Virat Kohli Rohit Sharma : ರೋಹಿತ್ ಅಭಿಮಾನಿಯನ್ನು ಕೊಂದ ವಿರಾಟ್ ಫ್ಯಾನ್, ಕೊಹ್ಲಿಯನ್ನು ಅರೆಸ್ಟ್ ಮಾಡಲು ಆಗ್ರಹ

Sourav Ganguly contest Cricket Association of Bengal CAB president post

Comments are closed.