ಮಂಗಳವಾರ, ಏಪ್ರಿಲ್ 29, 2025
HomeSportsCricketMatch Winner Hardik Pandya: 2018ರಲ್ಲಿ ಸ್ಟ್ರೆಚರ್, 2022ರಲ್ಲಿ ಫಿನಿಷರ್, ಮ್ಯಾಚ್ ವಿನ್ನರ್ ; ಭಲೇ...

Match Winner Hardik Pandya: 2018ರಲ್ಲಿ ಸ್ಟ್ರೆಚರ್, 2022ರಲ್ಲಿ ಫಿನಿಷರ್, ಮ್ಯಾಚ್ ವಿನ್ನರ್ ; ಭಲೇ ಹಾರ್ದಿಕ್ ಪಾಂಡ್ಯ

- Advertisement -

ದುಬೈ: (Match Winner Hardik Pandya) ಪಾಕಿಸ್ತಾನ ವಿರುದ್ಧದ ಏಷ್ಯಾ ಕಪ್ ಪಂದ್ಯದಲ್ಲಿ ಭಾರತವನ್ನು ಸೋಲಿನ ಸುಳಿಯಿಂದ ಪಾರು ಮಾಡಿ ರೋಚಕ ಗೆಲುವು ತಂದುಕೊಟ್ಟ ಹಾರ್ದಿಕ್ ಪಾಂಡ್ಯ ಈಗ ಟಾಕ್ ಆಫ್ ದಿ ಟೌನ್. ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ (India Vs Pakistan Asia Cup 2022) ಗೆಲ್ಲಲು ಪಾಕ್ ಒಡ್ಡಿದ 147 ರನ್’ಗಳ ಗುರಿ ಬೆನ್ನಟ್ಟಿದ್ದ ಭಾರತ ಒಂದು ಹಂತದಲ್ಲಿ 14.2 ಓವರ್’ಗಳಲ್ಲಿ 89 ರನ್ನಿಗೆ 4 ವಿಕೆಟ್ ಕಳೆದುಕೊಂಡು ಸೋಲಿನತ್ತ ಮುಖ ಮಾಡಿ ನಿಂತಿತ್ತು. ಆಗ ಕ್ರೀಸ್’ಗಳಿಂದ ಪಾಂಡ್ಯ ಕೇವಲ 17 ಎಸೆತಗಳಲ್ಲಿ ಸ್ಫೋಟಕ ಅಜೇಯ 33 ರನ್ ಸಿಡಿಸಿ ಭಾರತಕ್ಕೆ ಅಮೋಘ ಗೆಲುವು ತಂದುಕೊಟ್ಟಿದ್ದರು. ಅದಕ್ಕೂ ಮೊದ್ಲು ಬೌಲಿಂಗ್’ನಲ್ಲೂ ಮಿಂಚಿದ್ದ ಪಾಂಡ್ಯ 25 ರನ್ನಿಗೆ 3 ವಿಕೆಟ್ ಪಡೆದು ಪಾಕಿಸ್ತಾನದ ಬ್ಯಾಟಿಂಗ್ ಕ್ರಮಾಂಕವನ್ನು ಸೀಳಿ ಹಾಕಿದ್ದರು. ಈ ಆಲ್ರೌಂಡ್ ಪ್ರದರ್ಶನಕ್ಕೆ ಪಂದ್ಯಶ್ರೇಷ್ಠ ಪ್ರಶಸ್ತಿ ಹಾರ್ದಿಕ್ ಪಾಂಡ್ಯಗೆ ಒಲಿದು ಬಂದಿತ್ತು.

ಕೇವಲ ನಾಲ್ಕು ವರ್ಷಗಳ ಹಿಂದೆ ಇದೇ ದುಬೈ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧ ಏಷ್ಯಾ ಕಪ್ ಪಂದ್ಯವಾಡುತ್ತಿದ್ದಾಗ ಹಾರ್ದಿಕ್ ಪಾಂಡ್ಯ ತೀವ್ರ ಬೆನ್ನು ನೋವಿಗೊಳಗಾಗಿದ್ದರು. ನಡೆಯಲೂ ಸಾಧ್ಯವಾಗದಷ್ಟು ನೋವು ಹಾರ್ದಿಕ್ ಪಾಂಡ್ಯರನ್ನು ಕಾಡಿತ್ತು. ನಂತರ ಪಾಂಡ್ಯ ಅವರನ್ನು ಸ್ಟ್ರೆಚರ್ ಮೂಲಕ ಮೈದಾನದಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು.

ನಂತರ ಶಸ್ತ್ರಚಿಕಿತ್ಸೆಗಳೊಗಾಗಿದ್ದ ಹಾರ್ದಿಕ್ ಪಾಂಡ್ಯ, ಕ್ರಿಕೆಟ್ ವೃತ್ತಿಜೀವನದಲ್ಲಿ ಅತ್ಯಂತ ಕಠಿಣ ದಿನಗಳನ್ನು ಎದುರಿಸಿದ್ದು. ಇದೀಗ ಅದೇ ಕ್ರೀಡಾಂಗಣದಲ್ಲಿ ಪಾಕಿಸ್ತಾನ ವಿರುದ್ಧ ಅದ್ಭುತ ಆಲ್ರೌಂಡ್ ಪ್ರದರ್ಶನ ತೋರುವ ಮೂಲಕ ಭಾರತವನ್ನು ಗೆಲ್ಲಿಸಿರುವ ಹಾರ್ದಿಕ್ ಪಾಂಡ್ಯಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

https://twitter.com/trolee_/status/1563953735835197441?s=20&t=o9cQ3elB6M-Z-Fh97m2_rA

ಪಾಕಿಸ್ತಾನ ವಿರುದ್ಧದ ಹೈವೋಲ್ಟೇಜ್ ಪಂದ್ಯದಲ್ಲಿ ಗೆಲ್ಲುವ ಕೊನೆಯ 3 ಎಸೆತಗಳಲ್ಲಿ 6 ರನ್’ಗಳ ಅವಶ್ಯಕತೆಯಿದ್ದಾಗ ಭರ್ಜರಿ ಸಿಕ್ಸರ್ ಬಾರಿಸಿದ್ದ ಪಾಂಡ್ಯ ಟೀಮ್ ಇಂಡಿಯಾಗೆ ರೋಚಕ ಜಯ ತಂದುಕೊಟ್ಟಿದ್ದರು. ಆ ಮೂಲಕ ಕಳೆದ ವರ್ಷ ಇದೇ ಕ್ರೀಡಾಂಗಣದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಭಾರತ ಸೇಡು ತೀರಿಸಿಕೊಂಡಿತ್ತು. ಏಷ್ಯಾ ಕಪ್ ಟೂರ್ನಿಯಲ್ಲಿ ಬುಧವಾರ ನಡೆಯುವ ತನ್ನ 2ನೇ ಲೀಗ್ ಪಂದ್ಯದಲ್ಲಿ ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡ, ಕ್ರಿಕೆಟ್ ಶಿಶು ಹಾಂಕಾಂಗ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ : Rishabh Pant Vs Urvashi Rautela: ಡಗೌಟ್’ನಲ್ಲಿ ರಿಷಭ್ ಪಂತ್,ಪ್ರೇಕ್ಷಕರ ಗ್ಯಾಲರಿಯಲ್ಲಿ ಊರ್ವಶಿ ರೌಟೇಲ, ವಿಕೆಟ್ ಕೀಪರ್ ಫುಲ್ ಟ್ರೋಲ್

ಇದನ್ನೂ ಓದಿ : Ind vs Pak : ಏಷ್ಯಾ ಕಪ್‌ : ಪಾಕಿಸ್ತಾನ ವಿರುದ್ದ ಭಾರತಕ್ಕೆ 5 ವಿಕೆಟ್‌ ಗೆಲುವು

Stretcher in 2018 Finisher in 2022 Match Winner Hardik Pandya

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular