Suryakumar Yadav Batting : 20ನೇ ಓವರ್‌ನಲ್ಲಿ ಸೂರ್ಯನ ಬೆಂಕಿ-ಬಿರುಗಾಳಿ ಬಿರುಗಾಳಿ ಬ್ಯಾಟಿಂಗ್; 18 ಎಸೆತ, 10 ಸಿಕ್ಸರ್, 72 ರನ್

ಮೆಲ್ಬೋರ್ನ್: Suryakumar Yadav Batting : ಭಾರತ ಕ್ರಿಕೆಟ್ ತಂಡದ ಮಧ್ಯಮ ಕ್ರಮಾಂಕದ ಸ್ಫೋಟಕ ದಾಂಡಿಗ ಸೂರ್ಯಕುಮಾರ್ ಯಾದವ್ ಈಗ ಕ್ರಿಕೆಟ್ ಜಗತ್ತಿನ ಟಾಕ್ ಆಫ್ ದಿ ಟೌನ್. ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ ಐಸಿಸಿ ಟಿ20 ವಿಶ್ವಕಪ್ (T20 World Cup 2022) ಟೂರ್ನಿಯಲ್ಲಿ ಅಬ್ಬರಿಸುತ್ತಿರುವ ಸೂರ್ಯಕುಮಾರ್ ಯಾದವ್, ಭಾರತ ಸೆಮಿಫೈನಲ್ ತಲುಪವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. 4ನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದು ಸಿಡಿಲಬ್ಬರದ ಆಟವಾಡುತ್ತಿರುವ ಸೂರ್ಯ, ಈಗಾಗಲೇ ವಿಶ್ವಕಪ್’ನಲ್ಲಿ ಆಡಿರುವ 5 ಪಂದ್ಯಗಳಲ್ಲಿ ಮೂರು ಅರ್ಧಶತಕಗಳ ಸಹಿತ 225 ರನ್ ಕಲೆ ಹಾಕಿದ್ದಾರೆ. ಪಾಕಿಸ್ತಾನ ವಿರುದ್ಧ 15 ರನ್ ಗಳಿಸಿ ಔಟಾಗಿದ್ದ ಸೂರ್ಯ, ನೆದರ್ಲೆಂಡ್ಸ್ ವಿರುದ್ಧ 25 ಎಸೆತಗಳಲ್ಲಿ ಅಜೇಯ 51, ದಕ್ಷಿಣ ಆಫ್ರಿಕಾ ವಿರುದ್ಧ 40 ಎಸೆತಗಳಲ್ಲಿ 68, ಬಾಂಗ್ಲಾದೇಶ ವಿರುದ್ಧ 16 ಎಸೆತಗಳಲ್ಲಿ 30 ಹಾಗೂ ಭಾನುವಾರ ನಡದ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ 25 ಎಸೆತಗಳಲ್ಲಿ ಅಜೇಯ 61 ರನ್ ಸಿಡಿಸಿದ್ದಾರೆ.

ಮುಖ್ಯವಾಗಿ ಸ್ಲಾಗ್ ಓವರ್’ಗಳಲ್ಲಿ ವಿಧ್ವಂಸಕ ಆಡುವಾಡುತ್ತಿರುವ ಸೂರ್ಯಕುಮಾರ್ ಯಾದವ್, 20ನೇ ಓವರ್’ನಲ್ಲಂತೂ ಅಕ್ಷರಶಃ ಬೆಂಕಿ-ಬಿರುಗಾಳಿಯಂತೆ ಆರ್ಭಟಿಸುತ್ತಿದ್ದಾರೆ. 2021ರಲ್ಲಿ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ ನಂತರ 20ನೇ ಓವರ್’ನಲ್ಲಿ ಒಟ್ಟು 18 ಎಸೆತಗಳನ್ನೆದುರಿಸಿರುವ ಸೂರ್ಯ, 10 ಸಿಕ್ಸರ್, 1 ಬೌಂಡರಿ ನೆರವಿನಿಂದ 72 ರನ್ ಸಿಡಿಸಿದ್ದಾರೆ. ಸ್ಟ್ರೈಕ್’ರೇಟ್ ಭರ್ತಿ 400. ಈ ವೇಳೆ ಒಮ್ಮೆ ಮಾತ್ರ ಔಟಾಗಿರುವ ಸೂರ್ಯಕುಮಾರ್ ಯಾದವ್, ಎದುರಿಸಿರುವ ಡಾಟ್ ಬಾಲ್ ಕೇವಲ 2.

T20I: 20ನೇ ಓವರ್’ನಲ್ಲಿ ಸೂರ್ಯಕುಮಾರ್ ಯಾದವ್

ರನ್ : 72, ಎಸೆತ: 18, ಸ್ಟ್ರೈಕ್’ರೇಟ್: 400, ಸಿಕ್ಸರ್: 10, ಬೌಂಡರಿ: 01, ಡಾಟ್ ಬಾಲ್: 02, ಔಟ್: 01

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಮಿಸ್ಟರ್ 360 ಡಿಗ್ರಿ ಎಬಿ ಡಿ ವಿಲಿಯರ್ಸ್ ಆಟವನ್ನು ನೆನಪಿಸುತ್ತಿದ್ದಾರೆ. ಮೈದಾನದ ಮೂಲೆ ಮೂಲೆಗೂ ಚೆಂಡನ್ನು ಬಡಿದಟ್ಟುವ ಮೂಲಕ ಭಾರತದ ಎಬಿಡಿ ಎಂದೇ ಕರೆಸಿಕೊಂಡದ್ದಾರೆ. ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಫೈನ್ ಲೆಗ್ ವಿಭಾಗದಲ್ಲಿ ಸೂರ್ಯಕುಮಾರ್ ಯಾದವ್ ಬಾರಿಸಿದ ಸಿಕ್ಸರ್’ಗಳನ್ನು ಕಂಡು ದಕ್ಷಿಣ ಆಫ್ರಿಕಾದ ಮಿಸ್ಟರ್ 360 ಎಬಿ ಡಿವಿಲಿಯರ್ಸ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಟಿ20 ವಿಶ್ವಕಪ್ ಟೂರ್ನಿಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದಾರೆ. ಜಿಂಬಾಬ್ವೆ ವಿರುದ್ಧದ ಅಂತಿಮ ಲೀಗ್ ಪಂದ್ಯದಲ್ಲಿ 35 ರನ್ ಗಳಿಸಿದ್ದಾಗ 2022ರಲ್ಲಿ ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಸಾವಿರ ಟಿ20 ರನ್’ಗಳ ಗಡಿ ತಲುಪಿದರು.

T20I: 2022ರಲ್ಲಿ ಅತೀ ಹೆಚ್ಚು ರನ್ (ಟಾಪ್-5) (Most T20I runs in 2022)

1026: ಸೂರ್ಯಕುಮಾರ್ ಯಾದವ್ (ಭಾರತ); 28 ಇನ್ನಿಂಗ್ಸ್
924: ಮೊಹಮ್ಮದ್ ರಿಜ್ವಾನ್ (ಪಾಕಿಸ್ತಾನ); 23 ಇನ್ನಿಂಗ್ಸ್
735: ಸಿಕಂದರ್ ರಾಜಾ (ಜಿಂಬಾಬ್ವೆ); 23 ಇನ್ನಿಂಗ್ಸ್
731: ವಿರಾಟ್ ಕೊಹ್ಲಿ (ಭಾರತ); 19 ಇನ್ನಿಂಗ್ಸ್
713: ಪತುನ್ ನಿಸ್ಸಾಂಕ (ಶ್ರೀಲಂಕಾ); 24 ಇನ್ನಿಂಗ್ಸ್

2021ರ ಮಾರ್ಚ್ 14ರಂದು ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಸೂರ್ಯಕುಮಾರ್ ಯಾದವ್ ಕೇವಲ ಒಂದೂವರೆ ವರ್ಷದಲ್ಲಿ ಜಗತ್ತಿನ ನಂ.1 ಟಿ20 ಬ್ಯಾಟ್ಸ್’ಮನ್ ಎನಿಸಿಕೊಂಡಿದ್ದಾರೆ. ಐಸಿಸಿ ಟಿ20 ಬ್ಯಾಟಿಂಗ್ rankingನಲ್ಲಿ 863 ರೇಟಿಂಗ್ ಪಾಯಿಂಟ್’ಗಳೊಂದಿಗೆ ಸೂರ್ಯಕುಮಾರ್ ಯಾದವ್ ಮೊದಲ ಸ್ಥಾನದಲ್ಲಿದ್ದರೆ, ಪಾಕಿಸ್ತಾನದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಮೊಹಮ್ಮದ್ ರಿಜ್ವಾನ್ 842 ರೇಟಿಂಗ್ ಪಾಯಿಂಟ್’ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇದುವರೆಗೆ ಭಾರತ ಪರ 38 ಟಿ20 ಪಂದ್ಯಗಳನ್ನು ಆಡಿರುವ 32 ವರ್ಷದ ಸೂರ್ಯಕುಮಾರ್ ಯಾದವ್ ಒಂದು ಶತಕ, ಹಾಗೂ 12 ಅರ್ಧಶತಕಗಳ ಸಹಿತ 1,270 ರನ್ ಕಲೆ ಹಾಕಿದ್ದಾರೆ.

ಇದನ್ನೂ ಓದಿ : Suryakumar 1000 runs : 550 ಎಸೆತಗಳಲ್ಲಿ 1026 ರನ್, T20Iನಲ್ಲಿ ಒಂದೇ ವರ್ಷ ಸಾವಿರ ರನ್ ಸರದಾರನಾದ ಸೂರ್ಯ

ಇದನ್ನೂ ಓದಿ : Pak Vs Kiwis : ಸೆಮೀಸ್‌ನಲ್ಲಿ ಭಾರತಕ್ಕೆ ಇಂಗ್ಲೆಂಡ್ ಎದುರಾಳಿ, ಪಾಕ್ Vs ಕೀವಿಸ್ ಮಧ್ಯೆ ಮತ್ತೊಂದು ಸೆಮಿಫೈನಲ್

Suryakumar Yadav Batting 18 ball 10 six 72 runs t20 World Cup 2022

Comments are closed.