Suicide Case : ಶಿವಮೊಗ್ಗದ ಖ್ಯಾತ ವೈದ್ಯರ ಸೊಸೆ ನೇಣಿಗೆ ಶರಣು

ಶಿವಮೊಗ್ಗ : ಖ್ಯಾತ ವೈದ್ಯರೊಬ್ಬರ ಸೊಸೆ ನೇಣು ಬಿಗಿದುಕೊಂಡು ಆತ್ಮಹತ್ಯೆ(Shimoga Suicide Case) ಮಾಡಿಕೊಂಡಿರುವ ಘಟನೆ ಶಿವಮೊಗ್ಗದ ಅಶ್ವಥ್ ನಗರದಲ್ಲಿ ನಡೆದಿದೆ. ನವ್ಯಶ್ರೀ ಎಂಬವರೇ ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಐದು ತಿಂಗಳ ಹಿಂದೆ ಖ್ಯಾತ ವೈದ್ಯರಾಗಿರುವ ಜಯಶ್ರೀ ಅವರ ಮಗ ಆಕಾಶ್ ಎಂಬವರ ಜೊತೆಗೆ ನವ್ಯಶ್ರೀ ವಿವಾಹ ನಡೆದಿತ್ತು. ರಾತ್ರಿ ಕಾರ್ ಶೆಡ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದೀಗ ಮಗಳ ಸಾವಿಗೆ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ.

ಶಿವಮೊಗ್ಗದ ಅಶ್ವಥ್‌ ನಗರದಲ್ಲಿ ವಾಸವಾಗಿದ್ದ ನವ್ಯಶ್ರೀ ನಿನ್ನೆ ತುಳಸಿ ಪೂಜೆಗಾಗಿ ನೆರೆಹೊರೆಯವರ ಮನೆಗಳಿಗೆ ತೆರಳಿದ್ದರು. ಅರಿಶಿನ ಕುಂಕುಮ ಪಡೆದು ಬಂದ ಬಳಿಕವೂ ನವ್ಯಶ್ರೀ ಖುಷಿ ಖುಷಿಯಾಗಿಯೇ ಇದ್ದರು. ಆದರೆ ರಾತ್ರಿ ಮನೆಯ ಕಾರ್ ಶಡ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖ್ಯಾತ ವೈದ್ಯರ ಸೊಸೆಯ ಆತ್ಮಹತ್ಯೆಗೆ ಸಂಬಂಧಿಸಿದಂತೆ ಆಕೆಯ ಕುಟುಂಬಸ್ಥರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೇ ವಿನೋಬಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶವದ ಮರಣೋತ್ತರ ಕಾರ್ಯ ಮುಗಿಸಿರುವ ಪೊಲೀಸರು ನವಶ್ರೀ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರ ಮಾಡಿದ್ದಾರೆ.

ಅಷ್ಟಕ್ಕೂ ನಡೆದಿದ್ದೇನು ?
ನಿನ್ನೆ ಸಂಜೆ ಸುಮಾರು 7.20ಕ್ಕೆ ನವ್ಯ ತನ್ನ ತಾಯಿಯೊಂದಿಗೆ ಪೋನ್‌ನಲ್ಲಿ ಚೆನ್ನಾಗಿ ಮಾತನಾಡಿದ್ದರು. ನಂತರ ತಾನು ರಿಲ್ಸ್‌ ಮಾಡಿರುವ ವಿಡಿಯೋವನ್ನು ಸಹೋದರನಿಗೆ ಕಳುಹಿಸಿದ್ದರು. ಸಹೋದರ ಈ ಬಗ್ಗೆ ಮಾತನಾಡಲು ನವ್ಯಶ್ರೀ ಕರೆ ಮಾಡಿದ್ರೆ ಆಕೆ ಕರೆ ಸ್ವೀಕಾರ ಮಾಡಿರಲಿಲ್ಲ. ಅಲ್ಲದೇ ನವ್ಯಶ್ರೀ ಅತ್ತೆಗೆ ಕರೆ ಮಾಡಿದಾಗ ಆಕೆ ಮೊಬೈಲ್ ಮನೆಯಲ್ಲಿಯೇ ಬಿಟ್ಟು ತೆರಳಿದ್ದಾಳೆ ಎಂದು ತಿಳಿಸಿದ್ದರು. ಪತಿ ಆಕಾಶ್ ಮದುವೆಗೆ ತೆರಳಿದ್ದು, ಮನೆಗೆ ಮರಳುವಾಗ 11 ಗಂಟೆಯಾಗಿತ್ತು. ಪತ್ನಿ ನವ್ಯ ಕಾಣಿಸದೇ ಇದ್ದಾಗ ಮನೆಯವರೆಲ್ಲರೂ ಹುಡುಕಾಟವನ್ನು ನಡೆಸಿದ್ದರು.

ಇದನ್ನೂ ಓದಿ : A terrible accident : ಮಂಗಳೂರಲ್ಲಿ ಲಾರಿ ಬೈಕ್ ನಡುವೆ ಭೀಕರ ಅಪಘಾತ : 2 ಸಾವು, ಇಬ್ಬರು ಗಂಭೀರ

ಇದನ್ನೂ ಓದಿ : Bandemath swamiji suicide case : ಬಂಡೇಮಠ ಸ್ವಾಮೀಜಿ ಆತ್ಮಹತ್ಯೆ ಪ್ರಕರಣ: ವಿಡಿಯೋ ರೆಕಾರ್ಡ್ ಮಾಡಿದ ಮೊಬೈಲ್ ಪತ್ತೆ

ಇದನ್ನೂ ಓದಿ : Retired officer murdered : ಇಂಟಲಿಜೆನ್ಸ್‌ ಬ್ಯೂರೊದ ನಿವೃತ್ತ ಅಧಿಕಾರಿ ಕೊಲೆ ; ಕಾರು ಗುದ್ದಿಸಿ ಹಂತಕರು ಎಸ್ಕೇಪ್‌

ಇನ್ನೊಂದೆಡೆಯಲ್ಲಿ ಮಗಳು ನಾಪತ್ತೆಯಾಗಿರುವ ವಿಚಾರ ತಿಳಿಯುತ್ತಿದ್ದರಂತೆಯೇ ನವ್ಯಶ್ರೀ ಪೋಷಕರು ಕೂಡ ಶಿವಮೊಗ್ಗಕ್ಕೆ ಬಂದಿದ್ದಾರೆ. ಎಲ್ಲರೂ ಕೂಡ ಒಟ್ಟಾಗಿ ಹುಡುಕಾಟವನ್ನು ಆರಂಭಿಸಿದ್ದರು. ಕೊನೆಗೆ ಕಾರ್ ಶೆಡ್ ನಲ್ಲಿ ಲೈಟ್ ಉರಿಯುತ್ತಿತ್ತು. ಕಾರ್ ಶೆಡ್ ಗೆ ಬೀಗ ಹಾಕಿದ್ದರಿಂದಾಗಿ ಕಿಟಕಿಯ ಮೂಲಕ ನೋಡಿದಾಗ ನವ್ಯಶ್ರೀ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದು ಬಂದಿದೆ. ಕೂಡಲೇ ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದು, ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆಯನ್ನು ನಡೆಸಿದ್ದಾರೆ. ಆದರೆ ನವ್ಯಶ್ರೀ ಸಾವಿನ ಬಗ್ಗೆ ಯಾವುದೇ ಡೆತ್ ನೋಟ್ ಪತ್ತೆಯಾಗಿಲ್ಲ.

Suicide Case :The daughter-in-law of a famous doctor of Shimoga was hanged

Comments are closed.