Team India’s 2023-27 FTP Cycle : 2023ರಿಂದ 2027ರವರೆಗೆ ಟೀಮ್ ಇಂಡಿಯಾ ಆಡಲಿರುವ ಸರಣಿಗಳ ಕಂಪ್ಲೀಟ್ ಡೀಟೇಲ್ಸ್

ಬೆಂಗಳೂರು: (Indian Cricket Team Tours) ಭಾರತ ಕ್ರಿಕೆಟ್ ತಂಡ ಇನ್ನು ಐದು ವರ್ಷ ಫುಲ್ ಬ್ಯುಸಿ. ಮುಂದಿನ ಐದು ವರ್ಷಗಳಲ್ಲಿ ಟೀಮ್ ಇಂಡಿಯಾ ಯಾವೆಲ್ಲಾ ಸರಣಿಗಳನ್ನು ಆಡಲಿದೆ ಎಂಬುದರ ಮಾಹಿತಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ( International Cricket Council – ICC) ಪ್ರಕಟಿಸಿದೆ. 2023ರಿಂದ 2027 ಅವಧಿಯಲ್ಲಿ ಭಾರತ ತಂಡ ಒಟ್ಟು 141 ಅಂತಾರಾಷ್ಟ್ರೀಯ ಪಂದ್ಯಗಳನ್ನಾಡಲಿದೆ. 30 ವರ್ಷಗಳಲ್ಲಿ ಇದೇ ಮೊದಲ ಬಾರಿ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು 2025ರಿಂದ 2027ರ ಅವಧಿಯಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯ 2 ಸರಣಿಗಳನ್ನಾಡಲಿವೆ. ಇದೇ ವೇಳೆ ಇಂಗ್ಲೆಂಡ್ ವಿರುದ್ಧವೂ ಭಾರತ ತಂಡ 2024 ಮತ್ತು 2025ರಲ್ಲಿ ತಲಾ ಐದು ಪಂದ್ಯಗಳ 2 ಟೆಸ್ಟ್ ಸರಣಿಗಳನ್ನಾಡಲಿದೆ (Men’s Future Tours Programme – FTP)

ಮುಂದಿನ ಐದು ವರ್ಷಗಳಲ್ಲಿ ಭಾರತ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಯಾವುದೇ ದ್ವಿಪಕ್ಷೀಯ ಸರಣಿಗಳನ್ನಾಡುತ್ತಿಲ್ಲ.

2022ರಿಂದ 2027ರವರೆಗೆ ಭಾರತ ತಂಡ ಆಡಲಿರುವ ಸರಣಿಗಳು:

ಆಗಸ್ಟ್ 2022: ಜಿಂಬಾಬ್ವೆ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ (ಜಿಂಬಾಬ್ವೆಯಲ್ಲಿ)
ಸೆಪ್ಟೆಂಬರ್ 2022: ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ (ಭಾರತದಲ್ಲಿ)
ಸೆಪ್ಟೆಂಬರ್-ಅಕ್ಟೋಬರ್ 2022: ದಕ್ಷಿಣ ಆಫ್ರಿಕಾ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ನವೆಂಬರ್ 2022: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ನ್ಯೂಜಿಲೆಂಡ್’ನಲ್ಲಿ)
ಡಿಸೆಂಬರ್ 2022: ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ (ಬಾಂಗ್ಲಾದೇಶದಲ್ಲಿ)
ಜನವರಿ 2023: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಜನವರಿ 2023: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಫೆಬ್ರವರಿ 2023: ಆಸ್ಟ್ರೇಲಿಯಾ ವಿರುದ್ಧ 4 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ (ಭಾರತದಲ್ಲಿ)
ಜುಲೈ 2023: ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್, 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ವೆಸ್ಟ್ ಇಂಡೀಸ್’ನಲ್ಲಿ)
ಸೆಪ್ಟೆಂಬರ್ 2023: ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಸರಣಿ (ಭಾರತದಲ್ಲಿ)
ನವೆಂಬರ್ 2023: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಡಿಸೆಂಬರ್ 2023: ದಕ್ಷಿಣ ಆಪ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್, 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ದಕ್ಷಿಣ ಆಫ್ರಿಕಾದಲ್ಲಿ)
ಜನವರಿ 2024: ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ (ಭಾರತದಲ್ಲಿ)
ಜುಲೈ 2024: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಶ್ರೀಲಂಕಾದಲ್ಲಿ)
ಸೆಪ್ಟೆಂಬರ್ 2024: ಬಾಂಗ್ಲಾದೇಶ ವಿರುದ್ಧ 2 ಪಂದ್ಯಗಳ ಟೆಸ್ಟ್ ಹಾಗೂ 3 ಪಂದ್ಯಗಳ ಏಕದಿನ ಸರಣಿ (ಭಾರತದಲ್ಲಿ)
ಅಕ್ಟೋಬರ್ 2024: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಟೆಸ್ಟ್ ಸರಣಿ (ಭಾರತದಲ್ಲಿ)
ನವೆಂಬರ್ 2024: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ (ಆಸ್ಟ್ರೇಲಿಯಾದಲ್ಲಿ)
ಜನವರಿ 2025: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಜೂನ್ 2025: ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ (ಇಂಗ್ಲೆಂಡ್’ನಲ್ಲಿ)
ಆಗಸ್ಟ್ 2025: ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಬಾಂಗ್ಲಾದೇಶದಲ್ಲಿ)
ಆಕ್ಟೋಬರ್ 2025: ವೆಸ್ಟ್ ಇಂಡೀಸ್ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ (ಭಾರತದಲ್ಲಿ)
ಆಕ್ಟೋಬರ್-ನವೆಂಬರ್ 2025: ಆಸ್ಟ್ರೇಲಿಯಾ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಆಸ್ಟ್ರೇಲಿಯಾದಲ್ಲಿ)
ನವೆಂಬರ್ 2025: ದಕ್ಷಿಣ ಆಫ್ರಿಕಾ ವಿರುದ್ಧ 2 ಪಂದ್ಯಗಳ ಟೆಸ್ಟ್, 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಜನವರಿ 2026: ನ್ಯೂಜಿಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಜೂನ್ 2026: ಅಫ್ಘಾನಿಸ್ತಾನ ವಿರುದ್ಧ 1 ಟೆಸ್ಟ್ ಪಂದ್ಯ, 3 ಪಂದ್ಯಗಳ ಏಕದಿನ ಸರಣಿ (ಭಾರತದಲ್ಲಿ)
ಜುಲೈ 2026: ಇಂಗ್ಲೆಂಡ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಇಂಗ್ಲೆಂಡ್’ನಲ್ಲಿ)
ಆಗಸ್ಟ್ 2026: ಶ್ರೀಲಂಕಾ ವಿರುದ್ಧ 2 ಪಂದ್ಯಗಳ ಟೆಸ್ಟ್ ಸರಣಿ (ಶ್ರೀಲಂಕಾದಲ್ಲಿ)
ಸೆಪ್ಟೆಂಬರ್ 2026: ಅಫ್ಘಾನಿಸ್ತಾನ ವಿರುದ್ಧ 3 ಪಂದ್ಯಗಳ ಟಿ20 ಸರಣಿ (ತಟಸ್ಥ ತಾಣದಲ್ಲಿ)
ಅಕ್ಟೋಬರ್ 2026: ವೆಸ್ಟ್ ಇಂಡೀಸ್ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಅಕ್ಟೋಬರ್-ನವೆಂಬರ್ 2026: ನ್ಯೂಜಿಲೆಂಡ್ ವಿರುದ್ಧ 2 ಪಂದ್ಯಗಳ ಟೆಸ್ಟ್, 3 ಪಂದ್ಯಗಳ ಏಕದಿನ ಹಾಗೂ 5 ಪಂದ್ಯಗಳ ಟಿ20 ಸರಣಿ (ನ್ಯೂಜಿಲೆಂಡ್)
ಡಿಸೆಂಬರ್ 2026: ಶ್ರೀಲಂಕಾ ವಿರುದ್ಧ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ (ಭಾರತದಲ್ಲಿ)
ಜನವರಿ 2027: ಆಸ್ಟ್ರೇಲಿಯಾ ವಿರುದ್ಧ 5 ಪಂದ್ಯಗಳ ಟೆಸ್ಟ್ ಸರಣಿ (ಭಾರತದಲ್ಲಿ).

ಇದನ್ನೂ ಓದಿ : KL Rahul advice his young Fan: “ಶಾಲೆಗೆ ಹೋಗು, ಉಳಿದದ್ದೆಲ್ಲಾ ಆಮೇಲೆ..” ಆಟೋಗ್ರಾಫ್ ಕೇಳಲು ಬಂದ ಅಭಿಮಾನಿಗೆ ರಾಹುಲ್ ಬುದ್ಧಿಮಾತು

ಇದನ್ನೂ ಓದಿ : Ravindra Jadeja will join RCB : IPL 2023ನಲ್ಲಿ ಆರ್‌ಸಿಬಿ ಪರ ಆಡ್ತಾರಾ ರವೀಂದ್ರ ಜಡೇಜಾ

Team India’s 2023-27 FTP Cycle Future Indian Cricket Team Tours Program announced

Comments are closed.