ವಿಭಿನ್ನವಾಗಿ ಬಕ್ರೀದ್ ಹಬ್ಬದ ಶುಭಾಶಯ ಹೇಳಿದ ಟೀಮ್ ಇಂಡಿಯಾ ತ್ರಿವಳಿ ವೇಗಿಗಳು


ಲಂಡನ್ : ಜಗತ್ತಿನಾದ್ಯಂತ ಭಾನುವಾರ ಬಕ್ರೀದ್‌ ಹಬ್ಬವನ್ನು ಆಚರಿಸಲಾಗುತ್ತಿದೆ. ಭಾರತದಲ್ಲಿ ಮುಸ್ಲಿಮರು ಬಕ್ರೀದ್‌ ಶುಭಾಶಯಗಳನ್ನು ಹಂಚಿಕೊಂಡು ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಸ್ಲಾಮೀ ಕ್ಯಾಲೆಂಡರ್’ನ ದುಲ್ಹಜ್‌ ತಿಂಗಳ 10ರಂದು, ಅಂದ್ರೆ ಜುಲೈ10ರಂದು ಭಾರತದಲ್ಲಿ ಈದುಲ್‌ ಅಧ್ಹಾ ಅಥವಾ ಬಕ್ರೀದ್‌ ಹಬ್ಬವನ್ನು ಆಚರಿಸಲಾಗುತ್ತದೆ. ಕುರ್ಬಾನಿ ಎಂದೂ ಕರೆಯಲ್ಪಡುವ ಈದುಲ್‌ ಅಧ್ಹಾವನ್ನು ಎಲ್ಲರೂ ಕೂಡಿ ಆಚರಿಸುವುದೇ ಈ ಹಬ್ಬದ ವಿಶೇಷತೆ. ಇಂಗ್ಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಆಟಗಾರರಾದ ಮೊಹಮ್ಮದ್ ಸಿರಾಜ್, ಉಮ್ರಾನ್ ಮಲಿಕ್ ಮತ್ತು ಆವೇಶ್ ಖಾನ್ (Umran malik Avesh khan Mohammed Siraj ) ವಿಭಿನ್ನವಾಗಿ ಬಕ್ರೀದ್ ಶುಭಾಶಯ ಕೋರಿದ್ದಾರೆ.

ಮೂವರೂ ಬರ್ಮಿಂಗ್’ಹ್ಯಾಮ್”ನ ಬೀದಿಯಲ್ಲಿ ನಿಂತು ಫೋಟೋಗೆ ಪೋಸ್ ಕೊಟ್ಟಿದ್ದು, ಆ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿ ಎಲ್ಲರಿಗೂ ಈದ್-ಮುಬಾರಕ್’ನ ಶುಭಾಶಯಗಳು ಎಂದು ಬರೆದಿದ್ದಾರೆ. ಚಿತ್ರದಲ್ಲಿ ಜಮ್ಮು ಎಕ್ಸ್’ಪ್ರೆಸ್ ಉಮ್ರಾನ್ ಮಲಿಕ್ ಬೂದು ಬಣ್ಣದ ಕುರ್ತಾದಲ್ಲಿ ಮಿಂಚುತ್ತಿದ್ರೆ, ಹೈದರಾಬಾದ್”ನ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಬಿಳಿ ಬಣ್ಣದ ಕುರ್ತಾ ಧರಿಸಿದ್ದಾರೆ.

https://www.instagram.com/p/CfyQX-IquCK/?utm_source=ig_web_copy_link

ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡ ಆತಿಥೇಯರ ವಿರುದ್ಧ 3 ಪಂದ್ಯಗಳ ಟಿ20 ಸರಣಿಯನ್ನಾಡುತ್ತಿದೆ. ಮೊದಲೆರಡು ಪಂದ್ಯಗಳನ್ನು ಭಾರೀ ಅಂತರದಲ್ಲಿ ಗೆದ್ದುಕೊಂಡಿರುವ ರೋಹಿತ್ ಶರ್ಮಾ ಬಳಗ, ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಸರಣಿ ಕೈವಶ ಮಾಡಿಕೊಂಡಿದೆ. ಸೌಥಾಂಪ್ಟನ್”ನಲ್ಲಿ ನಡೆದ ಮೊದಲ ಪಂದ್ಯವನ್ನು 50 ರನ್”ಗಳಿಂದ ಗೆದ್ದಿದ್ದ ಭಾರತ, ಎಡ್ಜ್’ಬಾಸ್ಟನ್”ನಲ್ಲಿ ಶನಿವಾರ ನಡೆದ ಪಂದ್ಯವನ್ನು 49 ರನ್”ಗಳಿಂದ ಗೆದ್ದುಕೊಂಡಿತ್ತು.

ಇದನ್ನೂ ಓದಿ : Pant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

ಇದನ್ನೂ ಓದಿ : KSCA Ground Ban : ಪಂದ್ಯ ನಡೆಯುತ್ತಿದ್ದಾಗಲೇ ಸ್ಟಂಪ್‌ಗೆ ಒದ್ದ ಗ್ರೌಂಡ್ ಓನರ್, KSCAನಿಂದ ಗ್ರೌಂಡ್ ಬ್ಯಾನ್

ಇದನ್ನೂ ಓದಿ : ಯುವ ಆಟಗಾರನ ಹಾದಿಗೆ ವಿರಾಟ್ ಅಡ್ಡಗಾಲು, ಈಗೇನ್ಮಾಡ್ತಾರೆ ಟೀಮ್ ಇಂಡಿಯಾ ಹೀರೋ ?

Team India’s triple speedsters Umran malik Avesh khan Mohammed Siraj greeted Bakrid in a different way

Comments are closed.