Rohit Best T20 Captain: ಟಿ20 ನಾಯಕತ್ವ: ಬೆಸ್ಟ್ ವಿನ್ %ನಲ್ಲಿ ಹಿಟ್ ಮ್ಯಾನ್ ರೋಹಿತ್ ಈಗ ಜಗತ್ತಿಗೇ ನಂ.1 ಕ್ಯಾಪ್ಟನ್

ಲಂಡನ್: ಟೀಮ್ ಇಂಡಿಯಾ ಕ್ಯಾಪ್ಟನ್ ರೋಹಿತ್ ಶರ್ಮಾ (India Cricket Team Captain Rohit Sharma) ಈಗ ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್”ನಲ್ಲಿ ಜಗತ್ತಿಗೇ ನಂ.1 ನಾಯಕ. ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲೆರಡೂ ಪಂದ್ಯಗಳನ್ನು ಗೆಲ್ಲುವ ಮೂಲಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್’ನ ಯಶಸ್ವಿ ನಾಯಕನೆಂಬ (Rohit Best T20 Captain) ಗೌರವವನ್ನು ತಮ್ಮದಾಗಿಸಿಕೊಂಡಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್’ನಲ್ಲಿ ರೋಹಿತ್ ಶರ್ಮಾ 30 ಪಂದ್ಯಗಳಲ್ಲಿ ಭಾರತ ತಂಡವನ್ನು ಮುನ್ನಡೆಸಿದ್ದು, 26 ಗೆಲುವು ಹಾಗೂ 4 ಸೋಲು ಕಂಡಿದ್ದಾರೆ. ಗೆಲುವಿನ ಪರ್ಸಂಟೇಜ್ 86.7%. ಇದು ಅಂತಾರಾಷ್ಟ್ರೀಯ ಟಿ20ಯಲ್ಲಿ ನಾಯಕನೊಬ್ಬನ ಅತೀ ಹೆಚ್ಚಿನ ವಿನ್ನಿಂಗ್ ಪರ್ಸಂಟೇಜ್. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯವನ್ನು ಕೋವಿಡ್ ಕಾರಣದಿಂದ ತಪ್ಪಿಸಿಕೊಂಡಿದ್ದ ರೋಹಿತ್ ಶರ್ಮಾ, ಟಿ20 ಸರಣಿಗೆ ತಂಡಕ್ಕೆ ಮರಳಿದ ತಂಡದ ನಾಯಕತ್ವ ವಹಿಸಿದ್ದರು. ರೋಹಿತ್ ನಾಯಕತ್ವದಲ್ಲಿ ಇಂಗ್ಲೆಂಡ್ ವಿರುದ್ಧ ಸೌಥಾಂಪ್ಟನ್ ಮೈದಾನದಲ್ಲಿ ನಡೆದ ಮೊದಲ ಟಿ20 ಪಂದ್ಯವನ್ನು 50 ರನ್’ಗಳಿಂದ ಗೆದ್ದಿದ್ದ ಟೀಮ್ ಇಂಡಿಯಾ, ಶನಿವಾರ ಎಡ್ಜ್’ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ 2ನೇ ಪಂದ್ಯದಲ್ಲಿ 49 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಆ ಮೂಲಕ 3 ಪಂದ್ಯಗಳ ಸರಣಿಯನ್ನು (India Vs England T20 Series) ಇನ್ನೂ ಒಂದು ಪಂದ್ಯ ಬಾಕಿ ಇರುತ್ತಲೇ ಕೈವಶ ಮಾಡಿಕೊಂಡಿತ್ತು.

ಇಂಗ್ಲೆಂಡ್ ವಿರುದ್ಧ ಸತತ 2 ಟಿ20 ಗೆಲುವುಗಳ ಮೂಲಕ ರೋಹಿತ್ ಶರ್ಮಾ ಅತೀ ಹೆಚ್ಚು ವಿನ್ನಿಂಗ್ ಪರ್ಸಂಟೇಜ್ ಹೊಂದಿರುವ ನಾಯಕನೆನಿಸಿದ್ದಾರೆ.
ಅಂತಾರಾಷ್ಟ್ರೀಯ ಟಿ20 ನಾಯಕನಾಗಿ ಬೆಸ್ಟ್ ವಿನ್ % (ಕನಿಷ್ಠ 20 ಪಂದ್ಯಗಳು)
ನಾಯಕ ಪಂದ್ಯ ಗೆಲುವು ಸೋಲು ವಿನ್%
ರೋಹಿತ್ ಶರ್ಮಾ (ಭಾರತ) 30 26 04 86.7
ಅಸ್ಘರ್ ಅಫ್ಘಾನ್ (ಅಫ್ಘಾನಿಸ್ತಾನ) 52 42 10 80.8
ಸರ್ಫರಾಜ್ ಅಹ್ಮದ್ (ಪಾಕಿಸ್ತಾನ) 37 29 08 78.4
ಗ್ರೇಮ್ ಸ್ಮಿತ್ (ದಕ್ಷಿಣ ಆಫ್ರಿಕಾ) 27 18 09 66.7
ಶೋಯೆಬ್ ಮಲಿಕ್ (ಪಾಕಿಸ್ತಾನ) 20 13 07 65.0

ಅಂತಾರಾಷ್ಟ್ರೀಯ ಟಿ20 ನಾಯಕತ್ವದಲ್ಲಿ 86.7% ವಿನ್ನಿಂಗ್ ಪರ್ಸಂಟೇಜ್ ಹೊಂದಿರುವ ರೋಹಿತ್ ಶರ್ಮಾ ನಂ.1 ಸ್ಥಾನದಲ್ಲಿದ್ರೆ, ಅಫ್ಘಾನಿಸ್ತಾನ ತಂಡದ ಮಾಜಿ ನಾಯಕ ಅಸ್ಫರ್ ಅಫ್ಘಾನ್ 80.8%ನೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಪಾಕಿಸ್ತಾನದ ತಂಡದ ಮಾಜಿ ನಾಯಕ ಸರ್ಫರಾಜ್ ಅಹ್ಮದ್ (78.4%) 3ನೇ ಸ್ಥಾನದಲ್ಲಿದ್ರೆ, ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಗ್ರೇಮ್ ಸ್ಮಿತ್ (66.7%) ಮತ್ತು ಪಾಕಿಸ್ತಾನ ತಂಡದ ಮತ್ತೊಬ್ಬ ಮಾಜಿ ನಾಯಕ ಶೋಯೆಬ್ ಮಲಿಕ್ (65%) ಕ್ರಮವಾಗಿ 4 ಹಾಗೂ 5ನೇ ಸ್ಥಾನಗಳಲ್ಲಿದ್ದಾರೆ.

ವಿರಾಟ್ ಕೊಹ್ಲಿ ಉತ್ತರಾಧಿಕಾರಿಯಾಗಿ ಟೀಮ್ ಇಂಡಿಯಾದ ನಾಯಕತ್ವ ವಹಿಸಿಕೊಂಡಿರುವ ರೋಹಿತ್ ಶರ್ಮಾ ಪೂರ್ಣ ಪ್ರಮಾಣದ ನಾಯಕನಾಗಿ ವಿದೇಶೀ ನೆಲದಲ್ಲಿ ಇದೇ ಮೊದಲ ಬಾರಿ ಭಾರತ ತಂಡವನ್ನು ಮುನ್ನಡೆಸುತ್ತಿದ್ದಾರೆ. ಮೊದಲ ಸರಣಿಯೇ ರೋಹಿತ್ ಶರ್ಮಾ ಪಾಲಿಗೆ ಸ್ಮರಣೀಯವಾಗಿದ್ದು, ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಗೆದ್ದುಕೊಟ್ಟಿದ್ದಾರೆ. ಆ ಮೂಲಕ ಭಾರತ ತಂಡ, ಕ್ರಿಕೆಟ್ ಜನಕರ ವಿರುದ್ಧ 5ನೇ ಟೆಸ್ಟ್ ಪಂದ್ಯದಲ್ಲಿ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಂಡಿದೆ.

ಇದನ್ನೂ ಓದಿ : Pant meets Dhoni: ಕ್ರಿಕೆಟ್ ಜನಕರ ನಾಡಿನಲ್ಲಿ ಮಹಾಗುರು, ಸೂಪರ್ ಹೀರೋನನ್ನು ಭೇಟಿ ಮಾಡಿದ ಶಿಷ್ಯರು

ಇದನ್ನೂ ಓದಿ : ವಿಭಿನ್ನವಾಗಿ ಬಕ್ರೀದ್ ಹಬ್ಬದ ಶುಭಾಶಯ ಹೇಳಿದ ಟೀಮ್ ಇಂಡಿಯಾ ತ್ರಿವಳಿ ವೇಗಿಗಳು

India Cricket Team Captain Rohit Best T20 Captain

Comments are closed.