IPL 2024 : ಇಂಡಿಯನ್ ಪ್ರೀಮಿಯರ್ ಲೀಗ್‌ನ (ಐಪಿಎಲ್) ಆರಂಭಕ್ಕೆ ಕೆಲವೇ ತಿಂಗಳುಗಳು ಬಾಕಿ ಉಳಿದಿದೆ. ಮಿನಿ ಹರಾಜು ಮುಗಿದಿದ್ದು, ತಂಡಗಳು ಬಲಾಢ್ಯ ಆಟಗಾರರನ್ನೇ ತೆಕ್ಕೆಗೆ ಹಾಕಿಕೊಂಡಿವೆ. ಅದ್ರಲ್ಲೂ ಈ ಬಾರಿ ಹರಾಜಿನಲ್ಲಿ ದಾಖಲೆಯ ಮೊತ್ತಕ್ಕೆ ಆಟಗಾರರು ಮಾರಾಟವಾಗಿದ್ದಾರೆ. ಆದರೆ ಈ ಬಾರಿ ಈ ಮೂವರು ಖ್ಯಾತ ಆಟಗಾರರ ಐಪಿಎಲ್ ಮಿಸ್ ಮಾಡಿಕೊಳ್ಳಲಿದ್ದಾರೆ. ಹಾಗಾದ್ರೆ ಆಟಗಾರರು ಯಾರು ಅನ್ನೋ ಸ್ಟೋರಿ ಇಲ್ಲಿದೆ.

Image Credit to Original Source
ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್
ವಿಶ್ವದ ಸರ್ವಶ್ರೇಷ್ಟ ಆಟಗಾರರ ಸಾಲಿನಲ್ಲಿರುವ ಸ್ಟೀವ್ ಸ್ಮಿತ್ ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಾಕಷ್ಟು ದಾಖಲೆಗಳನ್ನು ಹೊಂದಿದ್ದಾರೆ. ಅಲ್ಲದೇ ಐಪಿಎಲ್‌ನಲ್ಲಿಯೂ ಹಲವು ತಂಡಗಳನ್ನು ಪ್ರತಿನಿಧಿಸಿದ್ದಾರೆ. ರಾಜಸ್ಥಾನ ರಾಯಲ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ಪರ ಆಡಿದ್ದಾರೆ. ಟಿ೨೦ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದರೂ ಕೂಡ ಐಪಿಎಲ್ 2024 ರ ಹರಾಜಿನಲ್ಲಿ ಸ್ಮಿತ್ ಮಾರಾಟವಾಗಿಲ್ಲ.
ಇದನ್ನೂ ಓದಿ : ವಿರಾಟ್ ಕೊಹ್ಲಿ, ಮೊಹಮ್ಮದ್ ಸಿರಾಜ್ ಅಲ್ಲ : ಆರ್‌ಸಿಬಿಯನ್ನು ಈ ಬಾರಿ ಚಾಂಪಿಯನ್ ಮಾಡ್ತಾರೆ ಈ 3 ಆಟಗಾರರು
ಸ್ಟೀವ್ ಸ್ಮಿತ್ ಸದ್ಯ ಕಳಪೆ ಫಾರ್ಮ್ ಹೊಂದಿದ್ದಾರೆ. ಇದೇ ಕಾರಣಕ್ಕೆ ಯಾವ ತಂಡಗಳು ಅವರನ್ನು ಈ ಬಾರಿಯ ಐಪಿಎಲ್‌ನಲ್ಲಿ ಖರೀದಿ ಮಾಡಿಲ್ಲ. 2 ಕೋಟಿ ರೂ. ಮೂಲಬೆಲೆ ನಿಗದಿ ಮಾಡಿದ್ದರೂ ಕೂಡ ಹರಾಜಿನಲ್ಲಿ ಯಾವುದೇ ತಂಡಗಳು ಕೂಡ ಅವರನ್ನು ಖರೀದಿ ಮಾಡಲು ಉತ್ಸುಕತೆಯನ್ನು ತೋರಲಿಲ್ಲ. ಐಪಿಎಲ್ ವೃತ್ತಿಜೀವನದಲ್ಲಿ 103 ಪಂದ್ಯಗಳಲ್ಲಿ 2485 ರನ್ ಗಳಿಸಿದ ಹೊರತಾಗಿಯೂ ಅವರು ಐಪಿಎಲ್ 2024 ರಲ್ಲಿ ಕಾಣಿಸಿಕೊಳ್ಳುವುದಿಲ್ಲ.

Image Credit to Original Source
ಬಾಂಗ್ಲಾದೇಶ ತಂಡದ ಶಕೀಬ್ ಅಲ್ ಹಸನ್
ಬಾಂಗ್ಲಾದೇಶ ಕ್ರಿಕೆಟ್ ತಂಡದ ಖ್ಯಾತ ಆಟಗಾರ ಶಕೀಬ್ ಅಲ್ ಹಸನ್ ಟಿ೨೦ ಕ್ರಿಕೆಟ್‌ನಲ್ಲಿ ಸಾಧನೆಯನ್ನು ಮಾಡಿದ್ದಾರೆ. ಬ್ಯಾಟಿಂಗ್, ಬೌಲಿಂಗ್‌ನಲ್ಲಿ ಕಮಾಲ್ ಮಾಡಿದ್ದಾರೆ. ಬಾಂಗ್ಲಾದೇಶ ತಂಡದ ಅತ್ಯುತ್ತಮ ಆಲ್‌ರೌಂಡರ್ ಎನಿಸಿಕೊಂಡಿರುವ ಶಕೀಬ್ ಅಲ್ ಹಸನ್ ಮುಂದಿನ ಐಪಿಎಲ್‌ನಲ್ಲಿ ಪಾಲ್ಗೊಳ್ಳುತ್ತಿಲ್ಲ.
ಸದ್ಯ ಶಕೀಬ್ ಅಲ್ ಹಸನ್ ದೇಶದ ಪರ ಆಡುವತ್ತ ಗಮನ ಹರಿಸಿದ್ದಾರೆ. ಇದೇ ಕಾರಣದಿಂದಾಗಿಯೇ ಅವರು ಈ ಬಾರಿಯ ಹರಾಜಿನಲ್ಲಿ ತಮ್ಮನ್ನು ನೋಂದಾಯಿಸಿಕೊಂಡಿಲ್ಲ. ಹಲವು ವರ್ಷಗಳ ಕಾಲ ಶಕೀಬ್ ಅಲ್ ಹಸನ್ ಕೋಲ್ಕತ್ತಾ ನೈಟ್ ರೈಡರ್ಸ್ ತಂಡದ ಭಾಗವಾಗಿದ್ದರು. ಬೌಲಿಂಗ್, ಬ್ಯಾಟಿಂಕ್ ಮೂಲಕ ತಂಡಕ್ಕೆ ಆಲ್‌ರೌಂಡರ್ ಆಟದ ಪ್ರದರ್ಶನ ನೀಡುತ್ತಿದ್ದರು.
ಇದನ್ನೂ ಓದಿ : ಐಪಿಎಲ್‌ಗೂ ಮುನ್ನ ಆರ್‌ಸಿಬಿ ತಂಡದ ಖ್ಯಾತ ಆಟಗಾರ ಗ್ಲೆನ್ ಮ್ಯಾಕ್ಸ್‌ವೆಲ್‌ಗೆ ಅನಾರೋಗ್ಯ : ಸರಣಿಯಿಂದ ಔಟ್
ಶಕೀಬ್ ಅಲ್ ಹಸನ್ ಇದುವರೆಗೆ 71 ಪಂದ್ಯಗಳಲ್ಲಿ 793 ರನ್ ಗಳಿಸುವ ಮೂಲಕ ಅದ್ಭುತ ಐಪಿಎಲ್ ವೃತ್ತಿಜೀವನವನ್ನು ಹೊಂದಿದ್ದಾರೆ. ಅಲ್ಲದೇ 63 ವಿಕೆಟ್‌ಗಳನ್ನು ಪಡೆದಿದ್ದಾರೆ. ಐಪಿಎಲ್ 2024 ರಿಂದ ಹೊರಗುಳಿಯುವುದರ ಹಿಂದಿನ ಅವರ ಉದ್ದೇಶವನ್ನು ಪ್ರಶ್ನಿಸಬಹುದು ರಂಗ್‌ಪುರ ರೈಡರ್ಸ್‌ನ ಶಾಕಿಬ್ ಅಲ್ ಹಸನ್ ಕಣ್ಣಿನ ಸಮಸ್ಯೆಯೊಂದಿಗೆ ಉಳಿದಿರುವ ಮೊದಲ ಹಂತದ ಬಿಪಿಎಲ್ ಪಂದ್ಯಗಳನ್ನು ಕಳೆದುಕೊಳ್ಳಲಿದ್ದಾರೆ.

Image Credit to Original Source
ನ್ಯೂಜಿಲೆಂಡ್ ತಂಡದ ಜೇಮ್ಸ್ ನೀಶಮ್
ನ್ಯೂಜಿಲೆಂಡ್ ತಂಡದ ಖ್ಯಾತ ಕ್ರಿಕೆಟಿಗ ಜೇಮ್ಸ್ ನೀಶಮ್ ಐಪಿಎಲ್ 2024ನಲ್ಲಿ ಯಾವ ತಂಡವನ್ನೂ ಕೂಡಿಕೊಂಡಿಲ್ಲ. ನೀಶಮ್ ಒಬ್ಬ ಯುಟಿಲಿಟಿ ಕ್ರಿಕೆಟಿಗನಾಗಿದ್ದಾರೆ. ಆಲ್‌ರೌಂಡರ್ ಜೇಮ್ಸ್ ನಿಶಮ್ ಕೇವಲ 12 ಐಪಿಎಲ್ ಪಂದ್ಯಗಳನ್ನು ಆಡಿದ್ದು,IPL ವೃತ್ತಿಜೀವನದಲ್ಲಿ, ನೀಶಮ್ 61 ರನ್ ಗಳಿಸಿ 8 ವಿಕೆಟ್ ಪಡೆದುಕೊಂಡಿದ್ದಾರೆ. ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಉತ್ತಮ ದಾಖಲೆಯನ್ನು ಹೊಂದಿದ್ದರೂ ಕೂಡ ಐಪಿಎಲ್‌ನಲ್ಲಿ ಅವರ ಕಳಪೆ ನಿರ್ವಹಣೆ ಮುಂದಿನ ಬಾರಿಯ ಐಪಿಎಲ್‌ನಿಂದ ದೂರ ಉಳಿಯುವಂತಾಗಿದೆ.
ಇದನ್ನೂ ಓದಿ : ಭಾರತ – ಇಂಗ್ಲೆಂಡ್ ಟೆಸ್ಟ್ ಪಂದ್ಯ ; ಕನ್ನಡಿಗ ಕೆಎಲ್ ರಾಹುಲ್ ಹೊಸ ದಾಖಲೆ
These 3 famous players will miss IPL 2024 steve smith, shakib al hasan and james neesham