ಮಂಗಳವಾರ, ಏಪ್ರಿಲ್ 29, 2025
HomeSportsCricketVeda Krishnamurthy Engagement : ವೇದಾ Loves ಅರ್ಜುನ, ಕರ್ನಾಟಕದ ಕ್ರಿಕೆಟಿಗನ ಜೊತೆ ವೇದಾ ಕೃಷ್ಣಮೂರ್ತಿ...

Veda Krishnamurthy Engagement : ವೇದಾ Loves ಅರ್ಜುನ, ಕರ್ನಾಟಕದ ಕ್ರಿಕೆಟಿಗನ ಜೊತೆ ವೇದಾ ಕೃಷ್ಣಮೂರ್ತಿ ನಿಶ್ಚಿತಾರ್ಥ

- Advertisement -

ಬೆಂಗಳೂರು: (Veda Krishnamurthy Engagement ) ಭಾರತ ಮಹಿಳಾ ಕ್ರಿಕೆಟ್ ತಂಡದ ಸ್ಟಾರ್ ಆಟಗಾರ್ತಿ, ಕರ್ನಾಟಕದ ಮಹಿಳಾ ಕ್ರಿಕೆಟ್ ಸೂಪರ್ ಸ್ಟಾರ್ ವೇದಾ ಕೃಷ್ಣಮೂರ್ತಿ, ರಾಜ್ಯ ರಣಜಿ ತಂಡದ ಮಾಜಿ ಆಟಗಾರನ ಜೊತೆ ಸಪ್ತಪದಿ ತುಳಿಯಲಿದ್ದಾರೆ. ವೇದಾ ಕೃಷ್ಣಮೂರ್ತಿ ಅವರನ್ನು ಮದುವೆಯಾಗಲಿರುವ ಹುಡುಗನ ಹೆಸರು ಅರ್ಜುನ್ ಹೊಯ್ಸಳ (Arjun Hoysala).

ವೇದಾ ಕೃಷ್ಣಮೂರ್ತಿ (Veda Krishnamurthy) ಮತ್ತು ಅರ್ಜುನ್ ಹೊಯ್ಸಳ (Arjun Hoysala) ಅವರ ನಿಶ್ಚಿತಾರ್ಥ ಪ್ರಕೃತಿಯ ಮಡಿಲಲ್ಲಿ ನೆರವೇರಿದೆ. ಪ್ರೇಯಸಿಯ ಮುಂದೆ ಮಂಡಿಯೂರಿ ಕೂತ ಅರ್ಜುನ್ ಹೊಯ್ಸಳ ಲವ್ ಪ್ರಪೋಸ್ ಮಾಡಿದ್ದಾರೆ. ಪ್ರಿಯಮತನ ಪ್ರೇಮ ನಿವೇದನೆಗೆ ವೇದಾ ಕೃಷ್ಣಮೂರ್ತಿ ‘ಯೆಸ್’ ಎಂದಿದ್ದಾರೆ. ನಂತರ ಒಬ್ಬರನ್ನೊಬ್ಬರು ಆಲಿಂಗಿಸಿಕೊಂಡಿದ್ದಾರೆ. ನಿಶ್ಚಿತಾರ್ಥದ ಚಿತ್ರಗಳನ್ನು ವೇದಾ ಕೃಷ್ಣಮೂರ್ತಿ ತಮ್ಮ ಇನ್’ಸ್ಟಾಗ್ರಾಂನಲ್ಲಿ ಪ್ರಕಟಿಸಿದ್ದಾರೆ.

29 ವರ್ಷದ ವೇದಾ ಕೃಷ್ಣಮೂರ್ತಿ ಮತ್ತು 32 ವರ್ಷದ ಅಷ್ಟಕ್ಕೂ ಈ ಅರ್ಜುನ್ ಹೊಯ್ಸಳ ಯಾರು?

ಅರ್ಜುನ್ 2016ರಲ್ಲಿ ಕರ್ನಾಟಕ ಪರ ರಣಜಿ ಟ್ರೋಫಿಗೆ ಪದಾರ್ಪಣೆ ಮಾಡಿದ್ದರು. ಮಹಾರಾಷ್ಟ್ರ ವಿರುದ್ಧ ಮೊಹಾಲಿಯಲ್ಲಿ ನಡೆದ ಪಂದ್ಯದಲ್ಲಿ ಕರ್ನಾಟಕದ ಇನ್ನಿಂಗ್ಸ್ ಆರಂಭಿಸಿದ್ದ ಎಡಗೈ ಬ್ಯಾಟ್ಸ್’ಮನ್ ಅರ್ಜುನ್ ಹೊಯ್ಸಳ ಶೂನ್ಯಕ್ಕೆ ಔಟಾಗಿದ್ದರು. 2ನೇ ಇನ್ನಿಂಗ್ಸ್’ನಲ್ಲಿ ಅರ್ಜುನ್’ಗೆ ಇನ್ನಿಂಗ್ಸ್ ಆರಂಭಿಸುವ ಅವಕಾಶ ಸಿಕ್ಕಿರಲಿಲ್ಲ. ಕರ್ನಾಟಕ ಪ್ರೀಮಿಯರ್ ಲೀಗ್’ನಲ್ಲಿ ಅರ್ಜುನ್ ಹೊಯ್ಸಳ ಬೆಳಗಾವಿ ಪ್ಯಾಂಥರ್ಸ್, ಮೈಸೂರು ವಾರಿಯರ್ಸ್ ಹಾಗೂ ಶಿವಮೊಗ್ಗ ಲಯನ್ಸ್ ತಂಡಗಳ ಪರ ಆಡಿದ್ದಾರೆ.

ಇನ್ನು ವೇದಾ ಕೃಷ್ಣಮೂರ್ತಿ ಬಗ್ಗೆ ಎಲ್ಲರಿಗೂ ಗೊತ್ತೇ ಇದೇ. 18ನೇ ವಯಸ್ಸಿಗೆ ಭಾರತ ಮಹಿಳಾ ತಂಡಕ್ಕೆ ಪದಾರ್ಪಣೆ ಮಾಡಿದ್ದ ಚಿಕ್ಕಮಗಳೂರಿನ ಕಡೂರಿನ ಹುಡುಗಿ ವೇದಾ ಭಾರತ ಪರ 48 ಏಕದಿನ ಪಂದ್ಯಗಳನ್ನಾಡಿದ್ದು 8 ಅರ್ಧಶತಕಗಳ ಸಹಿತ 829 ರನ್ ಗಳಿಸಿದ್ದಾರೆ. ಭಾರತ ಪರ 76 ಟಿ20 ಪಂದ್ಯಗಳನ್ನೂ ಆಡಿರುವ ವೇದಾ ಕೃಷ್ಣಮೂರ್ತಿ ಎರಡು ಅರ್ಧಶತಕಗಳೊಂದಿಗೆ 875 ರನ್ ಕಲೆ ಹಾಕಿದ್ದಾರೆ. ಮಧ್ಯಮ ಕ್ರಮಾಂಕದ ಸ್ಫೋಟಕ ಬ್ಯಾಟರ್ ಆಗಿರುವ ವೇದಾ, 2017ರ ಐಸಿಸಿ ಮಹಿಳಾ ವಿಶ್ವಕಪ್ ಟೂರ್ನಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಕೇವಲ 45 ಎಸೆತಗಳಲ್ಲಿ ಸ್ಫೋಟಕ 70 ರನ್ ಬಾರಿಸಿದ್ದರು. ಸದ್ಯ ಭಾರತ ತಂಡದಿಂದ ಹೊರ ಬಿದ್ದಿರುವ ವೇದಾ ಕರ್ನಾಟಕ ಪರ ಆಡುತ್ತಿದ್ದು, ಕ್ರಿಕೆಟ್ ಕಾಮೆಂಟೇಟರ್ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ : ICC T20 World Cup India Squad : ಸೆಪ್ಟೆಂಬರ್ 16ಕ್ಕೆ ಟೀಮ್ ಇಂಡಿಯಾ ಆಯ್ಕೆ, ವರ್ಲ್ಡ್ ಕಪ್‌ನಲ್ಲಿ ಆಡಲಿರುವ 15 ಮಂದಿ ಆಟಗಾರರು ಇವರೇ..!

ಇದನ್ನೂ ಓದಿ : Exclusive : ಐಸಿಸಿ ಟಿ20 ವಿಶ್ವಕಪ್: ಜಸ್‌ಪ್ರೀತ್ ಬುಮ್ರಾ, ಹರ್ಷಲ್ ಪಟೇಲ್ ಫಿಟ್‌ನೆಸ್ ರಿಪೋರ್ಟ್ ಔಟ್

Veda Krishnamurthy Engagement with Karnataka Cricketer Arjun Hoysala

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular