Vijay Hazare Trophy : ಕೌಶಿಕ್ ಭರ್ಜರಿ ಬೌಲಿಂಗ್, ಕರ್ನಾಟಕಕ್ಕೆ 5ನೇ ಜಯ; ನಾಕೌಟ್ ಹಂತದಲ್ಲಿ ಸ್ಥಾನ ಫಿಕ್ಸ್

ಕೋಲ್ಕತಾ: Vijay Hazare Trophy Karnataka win : ಎರಡು ಬಾರಿಯ ಚಾಂಪಿಯನ್ಸ್ ಕರ್ನಾಟಕ ತಂಡ ಪ್ರಸಕ್ತ ಸಾಲಿನ ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ 5ನೇ ಗೆಲುವಿನೊಂದಿಗೆ ನಾಕೌಟ್ ಹಂತದಲ್ಲಿ ಸ್ಥಾನ ಖಚಿತ ಪಡಿಸಿಕೊಂಡಿದೆ. ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಸೋಮವಾರ ನಡೆದ ಎಲೈಟ್ ಗ್ರೂಪ್ ‘ಬಿ’ ಹಂತದ ತನ್ನ 6ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ, ಸಿಕ್ಕಿಂ ವಿರುದ್ಧ 6 ವಿಕೆಟ್’ಗಳ ಸುಲಭ ಜಯ ದಾಖಲಿಸಿತು. ಕಳೆದ ಪಂದ್ಯದಲ್ಲಿ ಅಸ್ಸಾಂ ವಿರುದ್ಧ ಆಘಾತಕಾರಿ ಸೋಲುಂಡಿದ್ದ ಮಯಾಂಕ್ ಅಗರ್ವಾಲ್ ಬಳಗ, ಕ್ರಿಕೆಟ್ ಶಿಶು ಸಿಕ್ಕಿಂ ವಿರುದ್ಧ ಏಕಪಕ್ಷೀಯ ಗೆಲುವು ಪಡೆಯಿತು.

ಟಾಸ್ ಗೆದ್ದ ಕರ್ನಾಟಕ ತಂಡದ ನಾಯಕ ಮಯಾಂಕ್ ಅಗರ್ವಾಲ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಮಯಾಂಕ್ ನಿರ್ಧಾರವನ್ನು ಸಮರ್ಥಿಸುವ ರೀತಿಯಲ್ಲಿ ಬೌಲಿಂಗ್ ದಾಳಿ ಸಂಘಟಿಸಿದ ಕರ್ನಾಟಕದ ಬೌಲರ್’ಗಳು ಸಿಕ್ಕಿಂ ತಂಡವನ್ನು ಅಲ್ಪ ಮೊತ್ತಕ್ಕೆ ಕಟ್ಟಿ ಹಾಕಿದರು. ಅಂತಿಮವಾಗಿ ಸಿಕ್ಕಿಂ 46.2 ಓವರ್’ಗಳಲ್ಲಿ 117 ರನ್’ಗಳಿಗೆ ಆಲೌಟಾಯಿತು. ಕರ್ನಾಟಕ ಪರ ಮಧ್ಯಮ ವೇಗಿ ವಿ.ಕೌಶಿಕ್ 16 ರನ್ನಿಗೆ 3 ವಿಕೆಟ್ ಪಡೆದು ಟೂರ್ನಿಯಲ್ಲಿ ತಮ್ಮ ವಿಕೆಟ್ ಗಳಿಕೆಯನ್ನು 14ಕ್ಕೆ ಏರಿಸಿಕೊಂಡರು. ಆಲ್ರೌಂಡರ್’ಗಳಾದ ಶ್ರೇಯಸ್ ಗೋಪಾಲ್ (3/37) ಮತ್ತು ಕೃಷ್ಣಪ್ಪ ಗೌತಮ್ (3/24) ತಲಾ ಮೂರು ವಿಕೆಟ್ ಕಬಳಿಸಿದರು.

ನಂತರ ಸುಲಭ ಗುರಿ ಬೆನ್ನಟ್ಟಿದ್ದ ಕರ್ನಾಟಕ ಪರ ನಾಯಕ ಮಯಾಂಕ್ ಅಗರ್ವಾಲ್ ಜೊತೆ ಮಾಜಿ ನಾಯಕ ಮನೀಶ್ ಪಾಂಡೆ ಇನ್ನಿಂಗ್ಸ್ ಆರಂಭಿಸಿದರು. ಆದರೆ ಮನೀಶ್ ಕೇವಲ 4 ರನ್ನಿಗೆ ಔಟಾದ್ರೆ, ಮೂರನೇ ಕ್ರಮಾಂಕದಲ್ಲಿ ಕ್ರೀಸ್’ಗಿಳಿದ ಕೃಷ್ಣಪ್ಪ ಗೌತಮ್ ಎದುರಿಸಿದ ಮೊದಲ ಎಸೆತದಲ್ಲೇ ಸೊನ್ನೆ ಸುತ್ತಿದರು. 4ನೇ ಕ್ರಮಾಂಕದಲ್ಲಿ ಮನೋಜ್ ಭಾಂಡಗೆ (6) ಮತ್ತು 5ನೇ ಕ್ರಮಾಂಕದಲ್ಲಿ ಉಪನಾಯಕ ರವಿಕುಮಾರ್ ಸಮರ್ಥ್ (4) ಕೂಡ ಔಟಾದಾಗ ಕರ್ನಾಟಕ ತಂಡದ ಮೊತ್ತ ಕೇವಲ 37. ಆದರೆ ಮುರಿಯದ 5ನೇ ವಿಕೆಟ್’ಗೆ ನಾಯಕ ಮಯಾಂಕ್ ಜೊತೆಗೂಡಿದ ಯುವ ಬ್ಯಾಟ್ಸ್’ಮನ್ ನಿಕಿನ್ ಜೋಸ್ 84 ರನ್ ಸೇರಿಸಿ ತಂಡವನ್ನು 24.4ನೇ ಓವರ್’ನಲ್ಲಿ ಗೆಲುವಿನ ದಡ ಸೇರಿಸಿದರು. ಮಯಾಂಕ್ ಅಗರ್ವಾಲ್ 57 ಎಸೆತಗಳಲ್ಲಿ ಅಜೇಯ 54 ರನ್ ಬಾರಿಸಿದ್ರೆ, ನಿಕಿನ್ ಜೋಸ್ 52 ಎಸೆತಗಳಲ್ಲಿ ಅಜೇಯ 46 ರನ್ ಗಳಿಸಿದರು. ಬುಧವಾರ (ನವೆಂಬರ್ 23) ನಡೆಯುವ ತನ್ನ ಅಂತಿಮ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ರಾಜಸ್ಥಾನ ಸವಾಲನ್ನು ಎದುರಿಸಲಿದೆ.

ಇದನ್ನೂ ಓದಿ : Shut up Virat Kohli : ಕಿಂಗ್ ಕೊಹ್ಲಿಗೆ ಶಟಪ್ ಎಂಬ ಅಭಿಮಾನಿ, ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ !

ಇದನ್ನೂ ಓದಿ : Narayan Jagadeesan: ಏಕದಿನ ಕ್ರಿಕೆಟ್‌ನಲ್ಲಿ 277 ರನ್ ಚಚ್ಚಿ ವಿಶ್ವದಾಖಲೆ ಬರೆದ ತಮಿಳುನಾಡಿನ ಜಗದೀಶನ್

Vijay Hazare Trophy: Kaushik best bowling 5th win for Karnataka Fix the position in the knockout phase

Comments are closed.