Vijay Hazare Trophy: ಕೌಶಿಕ್ , ಕಾವೇರಪ್ಪ ಬೆಂಕಿ ಬೌಲಿಂಗ್; ಕರ್ನಾಟಕಕ್ಕೆ ಹ್ಯಾಟ್ರಿಕ್ ಜಯ

ಕೋಲ್ಕತಾ: (Vijay Hazare Trophy) ವಿಜಯ್ ಹಜಾರೆ ಟ್ರೋಫಿ ಏಕದಿನ ಟೂರ್ನಿಯಲ್ಲಿ ಮಾಜಿ ಚಾಂಪಿಯನ್ ಕರ್ನಾಟಕ ತಂಡ ಹ್ಯಾಟ್ರಿಕ್ ಗೆಲುವು ದಾಖಲಿಸಿದೆ.

ಕೋಲ್ಕತಾದ ಜಾಧವಪುರ್ ಯುನಿವರ್ಸಿಟಿ ಕ್ಯಾಂಪಸ್ ಗ್ರೌಂಡ್’ನಲ್ಲಿ ಮಂಗಳವಾರ ನಡೆದ ತಮ್ಮ 3ನೇ ಲೀಗ್ ಪಂದ್ಯ(Vijay Hazare Trophy)ದಲ್ಲಿ ಮಯಾಂಕ್ ಅಗರ್ವಾಲ್ ನಾಯಕತ್ವದ ಕರ್ನಾಟಕ, ಜಾರ್ಖಂಡ್ ವಿರುದ್ಧ 6 ವಿಕೆಟ್’ಗಳ ಜಯಭೇರಿ ಬಾರಿಸಿತು (Karnataka beat Jharkhand).

ಮೊದಲ ಪಂದ್ಯದಲ್ಲಿ ಮೇಘಾಲಯ ವಿರುದ್ಧ 115 ರನ್’ಗಳಿಂದ ಗೆದ್ದಿದ್ದ ಕರ್ನಾಟಕ, 2ನೇ ಲೀಗ್ ಪಂದ್ಯದಲ್ಲಿ ವಿದರ್ಭ ವಿರುದ್ಧ 66 ರನ್’ಗಳ ಭರ್ಜರಿ ಗೆಲುವು ದಾಖಲಿಸಿತ್ತು. ಇದರೊಂದಿಗೆ ಕರ್ನಾಟಕ ತಂಡ ಎಲೈಟ್ ಗ್ರೂಪ್ ’ಬಿ’ನಲ್ಲಿ ಆಡಿದ ಮೂರೂ ಪಂದ್ಯಗಳನ್ನು ಗೆದ್ದು ಒಟ್ಟು 12 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಜಾರ್ಖಂಡ್ ತಂಡ ಕರ್ನಾಟಕದ ಮಧ್ಯಮ ವೇಗಿಗಳಾದ ವಿ.ಕೌಶಿಕ್ ಮತ್ತು ವಿದ್ವತ್ ಕಾವೇರಪ್ಪ ಅವರ ಮಾರಕ ದಾಳಿಗೆ ತತ್ತರಿಸಿತು. ಜಾರ್ಖಂಡ್ ಪರ ವಿಕೆಟ್ ಕೀಪರ್ ಕುಮಾರ್ ಕುಶಾಗ್ರ 56 ರನ್ ಗಳಿಸಿದ್ದು ಬಿಟ್ಟರೆ ತಂಡದ ಪರ ಸೆಕೆಂಡ್ ಹೈಯೆಸ್ಟ್ ಸ್ಕೋರ್ 11. ಉಳಿದವರೆಲ್ಲರದ್ದೂ ಸಿಂಗಲ್ ಡಿಜಿಟ್.

ಇದನ್ನೂ ಓದಿ : Kieron Pollard Mumbai Indians : ಮುಂಬೈ ಇಂಡಿಯನ್ಸ್ ಬಿಡಲೊಪ್ಪದ ಪೊಲ್ಲಾರ್ಡ್’ಗೆ ಅಂಬಾನಿ ಭರ್ಜರಿ ಗಿಫ್ಟ್

ಕರ್ನಾಟಕ ಪರ ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಬಲಗೈ ಮಧ್ಯಮ ವೇಗಿ ಕೌಶಿ 10 ಓವರ್’ಗಳಲ್ಲಿ ಕೇವಲ 18 ರನ್ನಿತ್ತು 3 ವಿಕೆಟ್ ಪಡೆದರೆ, ವಿದ್ವತ್ ಕಾವೇರಪ್ಪ 17 ರನ್ನಿಗೆ 2 ವಿಕೆಟ್ ಉರುಳಿಸಿದರು. ಯುವ ಆಲ್ರೌಂಡರ್ ಮನೋಜ್ ಭಾಂಡಗೆ 25 ರನ್ನಿಗೆ 2 ವಿಕೆಟ್ ಪಡೆದರೆ, ರೋನಿತ್ ಮೋರೆ ಮತ್ತು ಆಫ್’ಸ್ಪಿನ್ನರ್ ಕೃಷ್ಣಪ್ಪ ಗೌತಮ್ ತಲಾ ಒಂದು ವಿಕೆಟ್ ಕಬಳಿಸಿದರು. ಅಂತಿಮವಾಗಿ ಕರ್ನಾಟಕ ಬೌಲರ್’ಗಳ ಸಂಘಟಿತ ದಾಳಿಗೆ ತತ್ತರಿಸಿದ ಜಾರ್ಖಂಡ್ 40.4 ಓವರ್’ಗಳಲ್ಲಿ ಕೇವಲ 107 ರನ್’ಗಳಿಗ ಆಲೌಟಾಯಿತು.

ಇದನ್ನೂ ಓದಿ : ಐಪಿಎಲ್ ಗೆ ನಿವೃತ್ತಿ ಘೋಷಿಸಿದ ಕೀರನ್ ಪೊಲಾರ್ಡ್ : ಮುಂಬೈ ತಂಡದ ಬ್ಯಾಟಿಂಗ್ ಕೋಚ್ ಆಗಿ ನೇಮಕ

ನಂತರ ಸುಲಭ ಗುರಿ ಬೆನ್ನಟ್ಟಿದ ಕರ್ನಾಟಕ ನಾಯಕ ಮಯಾಂಕ್ ಅಗರ್ವಾಲ್ ಅವರ ಬಿರುಸಿನ ಅರ್ಧಶತಕದ (53 ರನ್, 63 ಎಸೆತ, 7 ಬೌಂಡರಿ, 1 ಸಿಕ್ಸರ್) ನೆರವಿನಿಂದ 26.3 ಓವರ್’ಗಳಲ್ಲಿ 4 ವಿಕೆಟ್ ನಷ್ಟಕ್ಕೆ 108 ರನ್ ಗಳಿಸಿ ಸುಲಭ ಜಯ ದಾಖಲಿಸಿತು.

ಗುರುವಾರ (ನವೆಂಬರ್ 17) ನಡೆಯುವ ತನ್ನ 4ನೇ ಲೀಗ್ ಪಂದ್ಯದಲ್ಲಿ ಕರ್ನಾಟಕ ತಂಡ ದೆಹಲಿ ಸವಾಲನ್ನು ಎದುರಿಸಲಿದೆ.

(Vijay Hazare Trophy) In the Vijay Hazare Trophy ODI tournament, the former champion Karnataka team recorded a hat-trick victory.

Comments are closed.