ಭಾನುವಾರ, ಏಪ್ರಿಲ್ 27, 2025
HomeSportsCricketVirat Kohli Babar Azam : ಒಂದೇ ತಂಡದಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ, ಪಾಕ್ ನಾಯಕ...

Virat Kohli Babar Azam : ಒಂದೇ ತಂಡದಲ್ಲಿ ಆಡಲಿದ್ದಾರೆ ಕಿಂಗ್ ಕೊಹ್ಲಿ, ಪಾಕ್ ನಾಯಕ ಬಾಬರ್ ಅಜಮ್

- Advertisement -

ಬೆಂಗಳೂರು: ಒಬ್ಬ ಆಧುನಿಕ ಕ್ರಿಕೆಟ್’ನ ಬ್ಯಾಟಿಂಗ್ ದಿಗ್ಗಜ ವಿರಾಟ್ ಕೊಹ್ಲಿ (Virat Kohli), ಮತ್ತೊಬ್ಬ ಸದ್ಯದ ಶ್ರೇಷ್ಠ ಬ್ಯಾಟ್ಸ್’ಮನ್ ಬಾಬರ್ ಅಜಮ್ (Babar Azam). ಭಾರತ ಮತ್ತು ಪಾಕಿಸ್ತಾನದ ಈ ಬ್ಯಾಟಿಂಗ್ ಮಾಸ್ಟರ್’ಗಳು ಒಂದೇ ತಂಡದಲ್ಲಿ ಕಾಣಿಸಿಕೊಂಡರೆ ಹೇಗಿರತ್ತೆ ಹೇಳಿ ? ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನ ತಂಡದ ಹಾಲಿ ನಾಯಕ ಬಾಬರ್ ಅಜಮ್ ಮುಂದಿನ ವರ್ಷ ಒಂದೇ ತಂಡದ ಪರ ಆಡುವ ಸಾಧ್ಯತೆಗಳಿವೆ. ಕಳೆದ ಭಾನುವಾರ ದುಬೈನಲ್ಲಿ ನಡೆದಿದ್ದ ಏಷ್ಯಾ ಕಪ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಮತ್ತು ಬಾಬರ್ ಮುಖಾಮುಖಿಯಾಗಿದ್ದರು. ಆ ಹೈವೋಲ್ಟೇಜ್ ಪಂದ್ಯದಲ್ಲಿ ಕೊಹ್ಲಿ 35 ರನ್ ಗಳಿಸಿದ್ರೆ, ಬಾಬರ್ ಅಜಮ್ ಕೇವಲ 10 ರನ್ ಗಳಿಸಿ ಔಟಾಗಿದ್ದರು.

ಭಾರತ ಮತ್ತು ಪಾಕಿಸ್ತಾನ ತಂಡಗಳ ಮಧ್ಯೆ ಇತ್ತೀಚಿನ ದಿನಗಳಲ್ಲಿ ಯಾವುದೇ ದ್ವಿಪಕ್ಷೀಯ ಸರಣಿಗಳು ನಡೆಯುತ್ತಿಲ್ಲ. ಕೇವಲ ಐಸಿಸಿ ಟೂರ್ನಿಗಳಲ್ಲಿ ಮಾತ್ರ ಸಾಂಪ್ರದಾಯಿಕ ಎದುರಾಳಿಗಳು ಮುಖಾಮುಖಿಯಾಗುತ್ತಿವೆ. ಆ ಪಂದ್ಯದಳಲ್ಲಿ ಕೊಹ್ಲಿ Vs ಬಾಬರ್ ಪೈಪೋಟಿಯನ್ನು ಕಣ್ತುಂಬಿಕೊಂಡಿರುವ ಕ್ರಿಕೆಟ್ ಪ್ರಿಯರಿಗೆ ಈ ಇಬ್ಬರೂ ಆಟಗಾರರು ಒಂದೇ ತಂಡದ ಪರ ಆಡುವ ಅವಕಾಶವೂ ಲಭ್ಯವಾಗುವ ಸಾಧ್ಯತೆಯಿದೆ.

ಹಾಗಾದ್ರೆ ಭಾರತದ ವಿರಾಟ್ ಕೊಹ್ಲಿ ಮತ್ತು ಪಾಕಿಸ್ತಾನದ ಬಾಬರ್ ಅಜಮ್ ಒಂದೇ ತಂಡದ ಪರ ಆಡಲು ಹೇಗೆ ಸಾಧ್ಯ? ಖಂಡಿತಾ ಸಾಧ್ಯ. ಇದಕ್ಕೆ ವೇದಿಕೆಯಾಗಲಿರುವುದು ಆಫ್ರೋ-ಏಷ್ಯಾ ಕಪ್ ಟೂರ್ನಿ (Afro-Asia Cup). ಏಷ್ಯಾ XI ಹಾಗೂ ಆಫ್ರಿಕಾ XI ತಂಡಗಳ ಮಧ್ಯೆ ಆಫ್ರೋ-ಏಷ್ಯಾ ಕಪ್ ಟೂರ್ನಿ ನಡೆಯಲು ಆಯೋಜಕರು ಸಿದ್ಧತೆ ನಡೆಸಿದ್ದಾರೆ. 2005 ಮತ್ತು 2007ರಲ್ಲಿ ಈ ಟೂರ್ನಿ ನಡೆದ ನಂತರ ಆಫ್ರೋ-ಏಷ್ಯಾ ಕಪ್ ನಡೆದಿಲ್ಲ. ಈಗ ಮತ್ತೆ ಟೂರ್ನಿಗೆ ಚಾಲನೆ ನೀಡಲು ಆಯೋಜಕರು ನಿರ್ಧರಿಸಿದ್ದು, ಪಂದ್ಯಗಳು 2023ರ ಜೂನ್ ಅಥವಾ ಜುಲೈ ತಿಂಗಳಲ್ಲಿ ನಡೆಯುವ ಸಾಧ್ಯತೆಗಳಿವೆ.

ಒಂದು ವೇಳೆ ಆಫ್ರೋ-ಏಷ್ಯಾ ಕಪ್ ಟೂರ್ನಿ ನಡೆದರೆ ಭಾರತ ಮತ್ತು ಪಾಕಿಸ್ತಾನ ತಂಡಗಳ ಪ್ರಮುಖ ಆಟಗಾರರು ಏಷ್ಯಾ XIನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಆದರೆ ಇದು ಇನ್ನೂ ಖಚಿತವಾಗಿಲ್ಲ. ಆದರೆ ಆ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ ಎಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್’ನ (Asian Cricket Council – ACC) ಕಮರ್ಷಿಯಲ್ ಮತ್ತು ಈವೆಂಟ್ ಮುಖ್ಯಸ್ಥ ಪ್ರಭಾಕರನ್ ಧನರಾಜ್ ಹೇಳಿದ್ದಾರೆ.

“ನಮಗೆ ಭಾರತ ಮತ್ತು ಪಾಕಿಸ್ತಾನ ಕ್ರಿಕೆಟ್ ಮಂಡಳಿಗಳಿಂದ ಈವರೆಗೆ ಯಾವುದೇ ಖಚಿತತೆ ಲಭ್ಯವಾಗಿಲ್ಲ. ಆದರೆ ಪ್ಲಾನ್ ಸಿದ್ಧವಾಗುತ್ತಿದ್ದು, ಅದನ್ನು ಸಂಬಂಧಪಟ್ಟ ಕ್ರಿಕೆಟ್ ಮಂಡಳಿಗಳಿಗೆ ಸಲ್ಲಿಸಲಿದ್ದೇವೆ. ಭಾರತ ಮತ್ತು ಪಾಕಿಸ್ತಾನದ ಬೆಸ್ಟ್ ಆಟಗಾರರು ಟೂರ್ನಿಯಲ್ಲಿ ಆಡುವಂತೆ ಮಾಡುವುದೇ ನಮ್ಮ ಗುರಿ” ಎಂದು ಪ್ರಭಾಕರ್ ಧನರಾಜ್ ಹೇಳಿದ್ದಾರೆ.

ಇದನ್ನೂ ಓದಿ : Naseem Shah age Fraud: 2018ರಲ್ಲಿ 17 ವರ್ಷ, 2022ರಲ್ಲಿ 19 ವರ್ಷ, ಪಾಕ್ ವೇಗಿಯ ವಯಸ್ಸಿನ ಕಳ್ಳಾಟವನ್ನು ಬಯಲಿಗೆಳೆದ ಪಾಕ್ ಪತ್ರಕರ್ತ

ಇದನ್ನೂ ಓದಿ : Suryakumar Yadav success : ಮಿಸ್ಟರ್ 360 ಸೂರ್ಯನ ಯಶಸ್ಸಿನ ಹಿಂದೆ ರಬ್ಬರ್ ಬಾಲ್ ಮಹಿಮೆ

Virat Kohli Babar Azam to play for same Team

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular