ಮಂಗಳವಾರ, ಏಪ್ರಿಲ್ 29, 2025
HomeSportsCricketShut up Virat Kohli : ಕಿಂಗ್ ಕೊಹ್ಲಿಗೆ ಶಟಪ್ ಎಂಬ ಅಭಿಮಾನಿ, ಕಾರಣ ಕೇಳಿದ್ರೆ...

Shut up Virat Kohli : ಕಿಂಗ್ ಕೊಹ್ಲಿಗೆ ಶಟಪ್ ಎಂಬ ಅಭಿಮಾನಿ, ಕಾರಣ ಕೇಳಿದ್ರೆ ಅಚ್ಚರಿ ಪಡ್ತೀರಿ !

- Advertisement -

ಬೆಂಗಳೂರು: Shut up Virat Kohli : ಟೀಮ್ ಇಂಡಿಯಾದ ರನ್ ಮಷಿನ್, ಆಧುನಿಕ ಕ್ರಿಕೆಟ್’ನ ದಿಗ್ಗಜ ಆಟಗಾರ, ವಿಶ್ವದಾಖಲೆಗಳ ಸರದಾರ ವಿರಾಟ್ ಕೊಹ್ಲಿ (Virat Kohli) ಅವರಿಗೆ ಪ್ರಪಂಚದಾದ್ಯಂತ ದೊಡ್ಡ ಸಂಖ್ಯೆಯ ಅಭಿಮಾನಿಗಳಿದ್ದಾರೆ. ವಿರಾಟ್ ಕೊಹ್ಲಿ ಅವರನ್ನು ಪ್ರೀತಿಸುವ ಆರಾಧಿಸುವ ಅಭಿಮಾನಿಗಳ ಸಂಖ್ಯೆ ಅಗಣಿತ. ಅಂತಹ ಅಭಿಮಾನಿಗಳಲ್ಲಿ ಒಬ್ಬ ತಮ್ಮ ಆರಾಧ್ಯ ದೈವ ಕಿಂಗ್ ಕೊಹ್ಲಿಗೆ “ಶಟಪ್” (Shut up) ಅಂದಿದ್ದಾನೆ. “ಶಟಪ್” ಅಂದ್ರೆ “ಬಾಯಿ ಮುಚ್ಚು” ಎಂದರ್ಥ. ಕ್ರಿಕೆಟ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿಗೆ ಅವರದ್ದೇ ಅಭಿಮಾನಿ “ಶಟಪ್” ಅಂದಿರೋದ್ಯಾಕೆ? ಕಾರಣ ಸೂರ್ಯಕುಮಾರ್ ಯಾದವ್.

ಭಾರತದ ಮಿಸ್ಟರ್ 360 ಖ್ಯಾತಿಯ ಸೂರ್ಯಕುಮಾರ್ ಯಾದವ್ ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಯ 2ನೇ ಪಂದ್ಯದಲ್ಲಿ ಸಿಡಿಲಬ್ಬರದ ಶತಕ ಬಾರಿಸಿದ್ದ ನಿಮ್ಗೆ ಗೊತ್ತೇ ಇದೆ. ಮೌಂಟ್ ಮೌಂಗನ್ಯೂಯ್’ನಲ್ಲಿರುವ ಬೇ ಓವಲ್ ಮೈದಾನದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಕೇವಲ 51 ಎಸೆತಗಳಲ್ಲಿ ಅಜೇಯ 111 ರನ್ ಸಿಡಿಸಿದ್ದರು. ಆ ವಿಸ್ಫೋಟಕ ಇನ್ನಿಂಗ್ಸ್’ನಲ್ಲಿ 11 ಬೌಂಡರಿಗಳು ಮತ್ತು 7 ಸಿಡಿಲ ಸಿಕ್ಸರ್’ಗಳಿದ್ದವು. ಸೂರ್ಯಕುಮಾರ್ ಅವರ ಶತಕದ ಸಾಹಸದಿಂದ ನ್ಯೂಜಿಲೆಂಡ್ ತಂಡವನ್ನು 65 ರನ್’ಗಳಿಂದ ಬಗ್ಗು ಬಡಿದ ಭಾರತ, ಸರಣಿಯಲ್ಲಿ ಮುನ್ನಡೆ ಸಾಧಿಸಿತ್ತು.

ಕಿವೀಸ್ ನಾಡಿನಲ್ಲಿ ಸೂರ್ಯಕುಮಾರ್ ಯಾದವ್ ಟಿ20 ಶತಕ ಬಾರಿಸುತ್ತಿದ್ದಂತೆ ಕಿಂಗ್ ಕೊಹ್ಲಿ ಟ್ವೀಟ್ ಒಂದನ್ನು ಮಾಡಿದ್ರು. “ಸೂರ್ಯಕುಮಾರ್ ಯಾದವ್ ತಾವೇಕೆ ಜಗತ್ತಿನಲ್ಲೇ ಶ್ರೇಷ್ಠ ಎಂಬುದನ್ನು ತೋರಿಸುತ್ತಿದ್ದಾರೆ. ಪಂದ್ಯದ ನೇರಪ್ರಸಾರವನ್ನು ನೋಡಲಾಗಲಿಲ್ಲ. ಆದರೆ ಇದು ಮತ್ತೊಂದು ವೀಡಿಯೊ ಗೇಮ್ ಇನ್ನಿಂಗ್ಸ್ ಎಂಬುದರ ಬಗ್ಗೆ ನನಗೆ ಖಾತ್ರಿಯಿದೆ” ಎಂದು ವಿರಾಟ್ ಕೊಹ್ಲಿ ಟ್ವೀಟ್ ಮೂಲಕ ಸೂರ್ಯಕುಮಾರ್ ಯಾದವ್ ಅವರನ್ನು ಕೊಂಡಾಡಿದ್ರು.

ವಿರಾಟ್ ಕೊಹ್ಲಿ ಟ್ವೀಟನ್ನು ನೋಡಿದ ಅವರ ಅಭಿಮಾನಿಯೊಬ್ಬ “ಶಟಪ್” ಎಂದಿದ್ದಾನೆ. ಅಷ್ಟಕ್ಕೂ ಕಾರಣವೇನು ಗೊತ್ತಾ? ಆ ಟ್ವೀಟನ್ನು ನೋಡಿದ್ರೆ ನಿಮ್ಗೇ ಗೊತ್ತಾಗತ್ತೆ.

https://twitter.com/anushkaalol/status/1594348936956768256?s=20&t=lalmUNVveeLZ26cud5cd5A

ವಿರಾಟ್ ಕೊಹ್ಲಿ ಅವರಿಗೆ ಅಭಿಮಾನಿಯೊಬ್ಬ ಅಭಿಮಾನ ಪೂರ್ವಕವಾಗಿ “ಶಟಪ್” ಎಂದಿದ್ದಾನೆ. “ಸೂರ್ಯಕುಮಾರ್ ಯಾದವ್ ಅವರನ್ನು ಶ್ರೇಷ್ಠ ಎಂದಿದ್ದೀರಿ. ಆದರೆ ಕ್ರಿಕೆಟ್ ಜಗತ್ತಿನಲ್ಲಿ ನೀವೇ ಶ್ರೇಷ್ಠ, ಹೀಗೆಲ್ಲಾ ಮಾತನಾಡಬೇಡಿ” ಎಂಬುದೇ ಕೊಹ್ಲಿ ಅಭಿಮಾನಿಯ ಟ್ವೀಟ್ ಹಿಂದಿನ ಮರ್ಮ.

ಭಾನುವಾರ ಮೌಂಟ್ ಮೌಂಗನ್ಯುಯ್’ನಲ್ಲಿ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟಿ20 ಪಂದ್ಯವನ್ನು 65 ರನ್’ಗಳಿಂದ ಭರ್ಜರಿಯಾಗಿ ಗೆದ್ದುಕೊಂಡಿದ್ದ ಭಾರತ, ಸರಣಿಯಲ್ಲಿ 1-0 ಮುನ್ನಡೆಯಲ್ಲಿದೆ. ಮಂಗಳವಾರ ನೇಪಿಯರ್’ನಲ್ಲಿ ನಡೆಯುವ 3ನೇ ಪಂದ್ಯವನ್ನೂ ಟೀಮ್ ಇಂಡಿಯಾ ಗೆದ್ದರೆ ಸರಣಿ ಕೈವಶ ಮಾಡಿಕೊಳ್ಳಲಿದೆ. ವೆಲ್ಲಿಂಗ್ಟನ್’ನಲ್ಲಿ ನಡೆಯಬೇಕಿದ್ದ ಮೊದಲ ಪಂದ್ಯ ಮಳೆಯಿಂದ ರದ್ದಾಗಿತ್ತು.

ಇದನ್ನೂ ಓದಿ : India vs New Zeeland T20: ನಾಳೆ 3ನೇ ಟಿ20 ಪಂದ್ಯ, ಭಾರತ ಗೆದ್ದರೆ ಕಿವೀಸ್ ನೆಲದಲ್ಲಿ ಸತತ 2ನೇ ಸರಣಿ ಗೆಲುವು

ಇದನ್ನೂ ಓದಿ : Pro Kabaddi 2022 : ಬೆಂಗಳೂರು ಬುಲ್ಸ್ ವಿರುದ್ಧ ಸೇಡು ತೀರಿಸಿಕೊಂಡ ಪುಣೇರಿ ಪಲ್ಟನ್, ರೋಚಕ ಪಂದ್ಯದಲ್ಲಿ ಗೂಳಿಗೆ ಸೋಲು

Virat Kohli is a fan called shutup, you will be surprised if you ask the reason

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular