Virat Kohli New Record : ಐಪಿಎಲ್‌ನಲ್ಲಿ ಯಾರೂ ಮಾಡಲಾಗದ ದಾಖಲೆ ಬರೆದ “ಕಿಂಗ್” ವಿರಾಟ್ ಕೊಹ್ಲಿ

ಮೊಹಾಲಿ: ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli New Record) ಐಪಿಎಲ್ ಇತಿಹಾಸದಲ್ಲೇ ಯಾರೂ ಮಾಡಲಾಗದ ದಾಖಲೆ ಬರೆದಿದ್ದಾರೆ. ಮೊಹಾಲಿಯಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದಲ್ಲಿ ಕಿಂಗ್ ಕೊಹ್ಲಿ, ಅಮೋಘ 59 ರನ್ ಬಾರಿಸಿದರು. 47 ಎಸೆತಗಳನ್ನೆದುರಿಸಿದ ವಿರಾಟ್ ಕೊಹ್ಲಿ, ಅರ್ಧಶತಕದೊಂದಿಗೆ ಅಬ್ಬರಿಸಿದರು. ಫಾಫ್ ಡುಪ್ಲೆಸಿಸ್ 56 ಎಸೆತಗಳಲ್ಲಿ 5 ಸಿಕ್ಸರ್’ಗಳ ನೆರವಿನಿಂದ 84 ರನ್ ಬಾರಿಸಿ ಆರ್’ಸಿಬಿ ಗೆಲುವಿಗೆ ಕಾರಣರಾದರು.

ಗೆಲ್ಲಲು ಆರ್’ಸಿಬಿ ಒಡ್ಡಿದ 175 ರನ್’ಗಳ ಗುರಿ ಬೆನ್ನಟ್ಟಿದ ಪಂಜಾಬ್ ಕಿಂಗ್ಸ್, ವೇಗಿ ಮೊಹಮ್ಮದ್ ಸಿರಾಜ್ ದಾಳಿಗೆ ತತ್ತರಿಸಿ 18.2 ಓವರ್’ಗಳಲ್ಲಿ 150 ರನ್’ಗಳಿಗೆ ಆಲೌಟಾಯಿತು. ಅಮೋಘ ಬೌಲಿಂಗ್ ದಾಳಿ ಸಂಘಟಿಸಿದ ಸಿರಾಜ್ 4 ಓವರ್’ಗಳಲ್ಲಿ 21 ರನ್ನಿತ್ತು 4 ವಿಕೆಟ್ ಕಬಳಿಸಿದರು. ಈ ಪಂದ್ಯದಲ್ಲಿ ಫಾಫ್ ಡುಪ್ಲೆಸಿಸ್ ಬದಲು ಆರ್’ಸಿಬಿ ನಾಯಕತ್ವ ವಹಿಸಿದ ವಿರಾಟ್ ಕೊಹ್ಲಿ, ಐಪಿಎಲ್’ನಲ್ಲಿ 100ನೇ ಬಾರಿ 30+ ರನ್ ಕಲೆ ಹಾಕಿದ ಸಾಧನೆ ಮಾಡಿದರು. ಐಪಿಎಲ್ ಇತಿಹಾಸದಲ್ಲೇ ಈ ಸಾಧನೆ ಮಾಡದ ಮೊದಲ ಹಾಗೂ ಏಕೈಕ ಆಟಗಾರ ವಿರಾಟ್ ಕೊಹ್ಲಿ

ಐಪಿಎಲ್‌ನಲ್ಲಿ ವಿರಾಟ್‌ ಕೊಹ್ಲಿ ಹೊಸ ದಾಖಲೆ (Virat Kohli New Record ) :

2008ರಿಂದಲೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡುತ್ತಿರುವ ವಿರಾಟ್ ಕೊಹ್ಲಿ (Virat Kohli New Record) , 229 ಪಂದ್ಯಗಳನ್ನಾಡಿದ್ದು, 129.63ರ ಸ್ಟ್ರೈಕ್’ರೇಟ್’ನಲ್ಲಿ 36.71ರ ಸರಾಸರಿ ಯಲ್ಲಿ 5 ಶತಕ ಹಾಗೂ 48 ಅರ್ಧಶತಕಗಳ ಸಹಿತ 6903 ರನ್ ಕಲೆ ಹಾಕಿದ್ದಾರೆ. ಇದರಲ್ಲಿ 100 ಬಾರಿ 30+ ರನ್ ಕಲೆ ಹಾಕಿದ್ದಾರೆ. ಐಪಿಎಲ್’ನಲ್ಲಿ 7 ಸಾವಿರ ರನ್ ಗಳಿಸಿದ ಮೊದಲ ಆಟಗಾರನೆಂಬ ದಾಖಲೆ ಬರೆಯಲು ವಿರಾಟ್ ಕೊಹ್ಲಿ ಅವರಿಗೆ ಬೇಕಿರುವುದಿನ್ನು ಕೇವಲ 97 ರನ್.

ಪ್ರಸಕ್ತ ಸಾಲಿನ ಐಪಿಎಲ್’ನಲ್ಲಿ ಅಬ್ಬರಿಸುತ್ತಿರುವ ಕಿಂಗ್ ಕೊಹ್ಲಿ, ಆಡಿರುವ 6 ಪಂದ್ಯಗಳಲ್ಲಿ 4 ಅರ್ಧಶತಕಗಳನ್ನು ಬಾರಿಸಿದ್ದಾರೆ. ಮುಂಬೈ ಇಂಡಿಯನ್ಸ್ ವಿರುದ್ಧ ಅಜೇಯ 82 ರನ್ ಬಾರಿಸಿದ್ದ ಕೊಹ್ಲಿ, ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 61 ರನ್, ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 50 ರನ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ 59 ರನ್ ಗಳಿಸಿದ್ದಾರೆ.

ಇದನ್ನೂ ಓದಿ : Kohli RCB love : ಕಿಂಗ್ ಕೊಹ್ಲಿ ಗಾಳ ಹಾಕಿತ್ತು ಆ ಫ್ರಾಂಚೈಸಿ, No ಅಂದಿದ್ದರು ವಿರಾಟ್, ಕೊಹ್ಲಿಗೆ ಆರ್‌ಸಿಬಿ ಮೇಲಿರುವ ಅಭಿಮಾನ ಎಂಥದ್ದು ಗೊತ್ತಾ?

ಇದನ್ನೂ ಓದಿ : MS Dhoni – Ravichandran Ashwin : “ಟ್ರ್ಯಾಕ್ಟರ್” ಓಡಿಸುತ್ತಿದ್ದ ಧೋನಿ ಸಿಕ್ಸರ್ ಬಾರಿಸುತ್ತಿರುವುದನ್ನು ನೋಡಿ ದಂಗಾದ ಅಶ್ವಿನ್

Comments are closed.