ಮಂಗಳವಾರ, ಏಪ್ರಿಲ್ 29, 2025
HomeSportsCricketVirat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ...

Virat Kohli century Gift: ಕೊಹ್ಲಿ ಶತಕ ಬಾರಿಸುವವರೆಗೆ ಮದುವೆಯಾಗದಿರುವ ಶಪಥ, ಅಭಿಮಾನಿಯ ಮದುವೆಗೆ ಶತಕದ ಉಡುಗೊರೆ ಕೊಟ್ಟ ವಿರಾಟ್

- Advertisement -

ಬೆಂಗಳೂರು: Virat Kohli century Gift : ಕ್ರಿಕೆಟಿಗರಿಗೆ ಎಂತೆಂಥಾ ಅಭಿಮಾನಿಗಳಿರ್ತಾರೆ ನೋಡಿ.. ಅದ್ರಲ್ಲೂ ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ (Virat Kohli) ಅವರಿಗಂತೂ ಹುಚ್ಚು ಅಭಿಮಾನಿಗಳಿದ್ದಾರೆ. ಪ್ರಸ್ತುತ ಕ್ರಿಕೆಟ್ ಜಗತ್ತಿನ ಅತೀ ದೊಡ್ಡ ಸೂಪರ್ ಸ್ಟೀರ್ ಆಗಿರುವ ವಿರಾಟ್ ಕೊಹ್ಲಿಯವರಿಗೆ ಕೋಟಿ ಕೋಟಿ ಅಭಿಮಾನಿಗಳಿದ್ದಾರೆ. ಆ ಕೋಟ್ಯಂತರ ಅಭಿಮಾನಿಗಳ ಪೈಕಿ ಅಮಾನ್ ಅಗರ್ವಾಲ್ ಎಂಬಾತ ವಿರಾಟ್ ಕೊಹ್ಲಿ 71ನೇ ಶತಕ ಬಾರಿಸುವವರೆಗೆ ಮದುವೆಯಾಗುವುದಿಲ್ಲ ಎಂದು ಶಪಥ ಮಾಡಿದ್ದರು. ಈ ಕುರಿತ ಪೋಸ್ಟರ್ ಅನ್ನೂ ಕೂಡ ಕ್ರಿಕೆಟ್ ಮೈದಾನದಲ್ಲಿ ಪ್ರದರ್ಶಿಸಿದ್ದರು.

ವಿರಾಟ್ ಕೊಹ್ಲಿ 71ನೇ ಶತಕ ಬಾರಿಸಿದ ನಂತರ ಅಮಾನ್ ಅಗರ್ವಾಲ್ ಮದುವೆಯಾಗಿದ್ದಾರೆ (Virat Kohli century Gift). ವಿಶೇಷ ಅಂದ್ರೆ ವಿರಾಟ್ ಕೊಹ್ಲಿ 74ನೇ ಅಂತರಾಷ್ಟ್ರೀಯ ಶತಕ ಬಾರಿಸಿದ ದಿನವೇ ಅವರ ಅಭಿಮಾನಿ ಅಮಾನ್ ಮದುವೆಯಾಗಿದ್ದಾನೆ.

ಜನವರಿ 15ರಂದು (ಭಾನುವಾರ) ಕೇರಳದ ತಿರುವನಂತಪುರದ ಗ್ರೀನ್ ಫೀಲ್ಡ್ ಮೈದಾನದಲ್ಲಿ ನಡೆದ ಶ್ರೀಲಂಕಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅಮೋಘ ಶತಕ ಬಾರಿಸಿದ್ದರು. ಸಿಡಿಲಬ್ಬರದ ಅಜೇಯ 166 ರನ್ ಸಿಡಿಸಿದ್ದ ಕಿಂಗ್ ಕೊಹ್ಲಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 74ನೇ ಶತಕ ಬಾರಿಸಿದ್ದರು. ಅದೇ ದಿನ ಕೊಹ್ಲಿ ಅಭಿಮಾನಿ ಅಮಾನ್ ತನ್ನ ಗೆಳತಿಯನ್ನು ಮದುವೆಯಾಗಿದ್ದಾನೆ. ಮದುಮಗನ ಪೋಷಾಕಿನಲ್ಲೇ ಕೊಹ್ಲಿ ಶತಕ ಬಾರಿಸಿದ ಕ್ಷಣವನ್ನು ಟಿವಿಯಲ್ಲಿ ಕಣ್ತುಂಬಿಕೊಂಡಿದ್ದಾರೆ.

71ನೇ ಅಂತರಾಷ್ಟ್ರೀಯ ಶತಕಕ್ಕಾಗಿ 3 ವರ್ಷಗಳ ಕಾಲ ಕಾದಿದ್ದ ವಿರಾಟ್ ಕೊಹ್ಲಿ ಕಳೆದ 4 ಏಕದಿನ ಪಂದ್ಯಗಳಲ್ಲಿ 3 ಶತಕ ಸಿಡಿಸಿದ್ದಾರೆ. ಶ್ರೀಲಂಕಾ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ 2 ಶತಕ ಬಾರಿಸಿದ್ದ ವಿರಾಟ್ ಕೊಹ್ಲಿ, ಇಂದಿನಿಂದ ಆರಂಭವಾಗಲಿರುವ ನ್ಯೂಜಿಲೆಂಡ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲೂ ಅಬ್ಬರಿಸುವ ನಿರೀಕ್ಷೆಯಲ್ಲಿದ್ದಾರೆ.

ಇದನ್ನೂ ಓದಿ : ಹೈದರಾಬಾದ್’ನಲ್ಲಿ RRR ಸ್ಟಾರ್ NTR ಭೇಟಿ ಮಾಡಿದ ಟೀಮ್ ಇಂಡಿಯಾ ಸ್ಟಾರ್ಸ್

ಇದನ್ನೂ ಓದಿ : KL Rahul in No.5 : ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್‌ಗೆ 5ನೇ ಕ್ರಮಾಂಕ ಸೂಕ್ತವೇ? ಅಂಕಿ ಅಂಶಗಳು ಏನು ಹೇಳುತ್ತವೆ?

English News Click Here

Virat Kohli scores century not to marry until, Virat gifted a century for a fan’s wedding

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular