Virat Kohli test century : 1205 ದಿನಗಳ ನಂತರ ಟೆಸ್ಟ್ ಸೆಂಚುರಿ, ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ 75ನೇ ಶತಕ; ಕಿಂಗ್ ಕೊಹ್ಲಿ ಈಸ್ ಬ್ಯಾಕ್

ಅಹ್ಮದಾಬಾದ್: ಟೆಸ್ಟ್ ಕ್ರಿಕೆಟ್’ನಲ್ಲಿ ಕಳೆದ ಮೂರೂವರೆ ವರ್ಷಗಳಿಂದ ಶತಕದ ಬರ ಎದುರಿಸುತ್ತಿದ್ದ ಟೀಮ್ ಇಂಡಿಯಾದ ರನ್ ಮಷಿನ್ ವಿರಾಟ್ ಕೊಹ್ಲಿ ಕೊನೆಗೂ ಶತಕದ ಬರವನ್ನು (Virat Kohli test century) ನೀಗಿಸಿಕೊಂಡಿದ್ದಾರೆ. ಅಹ್ಮದಾಬಾದ್’ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪ್ರವಾಸಿ ಆಸ್ಟ್ರೇಲಿಯಾ ವಿರುದ್ಧದ ಬಾರ್ಡರ್-ಗವಾಸ್ಕರ್ ಸರಣಿಯ (India Vs Australia Border – Gavaskar test series) 4ನೇ ಟೆಸ್ಟ್ ಪಂದ್ಯದ 4ನೇ ದಿನ ಕೊಹ್ಲಿ ಅಮೋಘ ಶತಕ ಬಾರಿಸಿದರು.

3ನೇ ದಿನದಂತ್ಯಕ್ಕೆ ಅಜೇಯ 59 ರನ್ ಗಳಿಸಿದ್ದ ವಿರಾಟ್ ಕೊಹ್ಲಿ, 4ನೇ ದಿನ ತಮ್ಮ ಹಳೇ ಖದರ್ ತೋರಿಸಿ ಟೆಸ್ಟ್ ಕ್ರಿಕೆಟ್’ನಲ್ಲಿ 28ನೇ ಹಾಗೂ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಒಟ್ಟಾರೆ 75ನೇ ಶತಕ ಸಿಡಿಸಿದರು.

ಇದು ಟೆಸ್ಟ್ ಕ್ರಿಕೆಟ್’ನಲ್ಲಿ ವಿರಾಟ್ ಕೊಹ್ಲಿ ಮೂರೂವರೆ ವರ್ಷಗಳ ನಂತರ ಬಾರಿಸಿದ ಮೊದಲ ಶತಕ. 2019ರ ನವೆಂಬರ್’ನಲ್ಲಿ ಕೋಲ್ಕತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆದಿದ್ದ ಬಾಂಗ್ಲಾದೇಶ ವಿರುದ್ಧದ ಡೇ-ನೈಟ್ ಟೆಸ್ಟ್ ಪಂದ್ಯದಲ್ಲಿ ಕಿಂಗ್ ಕೊಹ್ಲಿ 27ನೇ ಟೆಸ್ಟ್ ಶತಕ ಬಾರಿಸಿದ್ದರು. ನಂತರದ 41 ಟೆಸ್ಟ್ ಇನ್ನಿಂಗ್ಸ್’ಗಳಲ್ಲಿ ಕೊಹ್ಲಿ ಬ್ಯಾಟ್’ನಿಂದ ಶತಕ ಸಿಡಿದಿರಲಿಲ್ಲ. ಆ ಶತಕದ ಬರವನ್ನು ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ನೀಗಿಸಿಕೊಂಡಿದ್ದಾರೆ. ಇದು ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ರನ್ ಮಷಿನ್ ವಿರಾಟ್ ಕೊಹ್ಲಿ ಬಾರಿಸಿದ 16ನೇ ಶತಕ. ಟೆಸ್ಟ್, ಏಕದಿನ ಹಾಗೂ ಟಿ20 ಸೇರಿ ಅಂತರಾಷ್ಟ್ರೀಯ ಕ್ರಿಕೆಟ್’ನಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡಿದ ಒಟ್ಟು 104 ಇನ್ನಿಂಗ್ಸ್’ಗಳಲ್ಲಿ ವಿರಾಟ್ ಕೊಹ್ಲಿ 16 ಶತಕ ಹಾಗೂ 23 ಅರ್ಧಶತಕಗಳನ್ನು ಬಾರಿಸಿದ್ದಾರೆ.

ಇದನ್ನೂ ಓದಿ : ಅಂತರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಅಮೋಘ ದಾಖಲೆ ಬರೆದ ರೋ’ಹಿಟ್‌’ಮ್ಯಾನ್

ಇದನ್ನೂ ಓದಿ : ಆರ್‌ಸಿಬಿ ಜೊತೆ “ವಿರಾಟ” ಪಯಣಕ್ಕೆ 15 ವರ್ಷ, ಕಿಂಗ್ ಕೊಹ್ಲಿ ಜೊತೆಗಿನ ಭಾವನಾತ್ಮಕ ಬಾಂಧವ್ಯಕ್ಕೆ ರಾಯಲ್ ಚಾಲೆಂಜರ್ಸ್ ಭಾವುಕ ಸಂದೇಶ

ಇದನ್ನೂ ಓದಿ : KL Rahul : ವಿಶ್ವ ಟೆಸ್ಟ್ ಚಾಂಪಿಯನ್’ಷಿಪ್ ಫೈನಲ್‌ನಲ್ಲಿ ಕನ್ನಡಿಗನನ್ನು ಆಡಿಸಲು ಸೂಪರ್ ಪ್ಲಾನ್, ಕೆ.ಎಲ್ ರಾಹುಲ್ ಆಡೋದು ಪಕ್ಕಾ!

Virat Kohli test century : Test century after 1205 days, 75th century in international cricket; King Kohli is back

Comments are closed.