China again Lockdown: H3N2 ವೈರಸ್ ಆತಂಕ : ಚೀನಾದಲ್ಲಿ ಮತ್ತೆ ಲಾಕ್ ಡೌನ್

ಬೀಜಿಂಗ್:‌ (China again Lockdown) ಕಳೆದ ಎರಡು ಮೂರು ವರ್ಷಗಳ ಹಿಂದೆ ಕೊರೊನಾ ಕಾರಣದಿಂದ ಇಡೀ ಪ್ರಪಂಚವೇ ತತ್ತರಿಸಿ ಹೋಗಿತ್ತು. ಅದರಲ್ಲೂ ಚೀನಾ ಸಂಪೂರ್ಣವಾಗಿ ಕೊರೊನಾ ಕಾರಣದಿಂದ ತತ್ತರಿಸಿ ಹೋಗಿತ್ತು. ಕೊರೊನಾ ವೈರಸ್‌ ನಿಂದ ತತ್ತರಿಸಿದ ಚೀನಾ ನಿಧಾನವಾಗಿ ಸುಧಾರಿಸಿಕೊಳ್ಳುತ್ತಿದ್ದು, ಇದೀಗ ಹೊಸ ಮಾದರಿಯಲ್ಲಿ ಜ್ವರ ಕಾಣಿಸಿಕೊಂಡಿದ್ದು, ಕೊರೊನಾ ಮಾದರಿಯಲ್ಲಿ ಲಾಕ್‌ ಡೌನ್‌ ಹೇರಲಾಗುತ್ತಿದೆ ಎಂದು ಬ್ಲೂಮ್‌ ಬರ್ಗ್‌ ವರದಿ ಮಾಡಿದೆ.

ಚೀನಾದ ಆಗ್ನೇಯ ನಗರವಾಗಿರುವ ಕ್ಸಿಯಾನ್‌ ನಲ್ಲಿ ಹೊಸ ಮಾದರಿಯ ಜ್ವರದಿಂದ ಜನರು ತತ್ತರಿಸುತ್ತಿದ್ದು, ಅದರ ಪಾಸಿಟಿವ್‌ ರೇಟ್‌ ಶೇ. 41.6 ರಷ್ಟಿದೆ. ಕಳೆದ ವಾರ ಅದರ ಪ್ರಮಾಣ 25. 1 ರಷ್ಟಿತ್ತು. ಈ ಕಾರಣಕ್ಕೆ ಈ ವಾರ ಪ್ರಕರಣಗಳ ಶೇಕಡಾವಾರು ಪ್ರಕರಣಗಳಲ್ಲಿ ಹೆಚ್ಚಳವಾಗಿದ್ದು, ಈ ಕಾರಣಕ್ಕೆ ಚೀನಾದ ಕಮ್ಯುನಿಷ್ಟ್‌ ಸರಕಾರ ಲಾಕ್‌ ಡೌನ್‌ ಮೊರೆ ಹೋಗಿದೆ. ನಾಲ್ಕು ವರ್ಷಗಳ ಕಾಲ ಚೀನಾದಲ್ಲಿ ಕೊರೊನಾ ಕಾರಣದಿಂದಾಗಿ ಕಠಿಣ ಕ್ರಮಗಳನ್ನು ಕೈಗೊಳ್ಳಲಾಗಿತ್ತು. ಲಾಕ್‌ ಡೌನ್‌ ಹಾಗೂ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಲಾಗಿತ್ತು. ಇನ್ನೇನು ಚೀನಾದಲ್ಲಿ ಕೊರೊನಾ ದಿಂದ ಸುಧಾರಿಸಿಕೊಳ್ಳಬೇಕು ಎನ್ನುವಷ್ಟರಲ್ಲಿ ಮತ್ತೆ ಚೀನಾದಲ್ಲಿ ಹೊಸ ಮಾದರಿಯ ಜ್ವರ ಕಾಣಿಸಿಕೊಂಡಿದೆ.

ಮೂರು ವರ್ಷಗಳ ಹಿಂದೆ ಕ್ಸಿಯಾನ್‌ ನಗರದಲ್ಲಿ ಲಾಕ್‌ ಡೌನ್‌ ಹೇರಲಾಗಿತ್ತು. 1.2 ಕೋಟಿ ಜನಸಂಖ್ಯೆ ಹೊಂದಿರುವ ನಗರ ಪದೇ ಪದೇ ಹೇರಲಾಗುತ್ತಿದ್ದ ಲಾಕ್‌ ಡೌನ್‌ ನಿಂದ ತತ್ತರಿಸಿ ಹೋಗಿತ್ತು. ಸರಕಾರದ ನಿಯಮಗಳ ವಿರುದ್ದ ಪ್ರತಿಭಟನೆಗಳು ನಡೆದಿದ್ದವು. ಆದರೆ ಇದೀಗ ಮತ್ತೆ ಸರಕಾರ ಲಾಕ್‌ ಡೌನ್‌ ಮಾಡಲು ನಿರ್ಧರಿಸಿದ್ದು, ಮಳಿಗೆಗಳು, ಶಾಲಾ ಕಾಲೇಜುಗಳನ್ನು ಬಂದ್‌ ಮಾಡಲಾಗಿದೆ. ಈ ಬಗ್ಗೆಯೂ ಅಲ್ಲಿನ ನಿವಾಸಿಗಳೂ ಆಕ್ಷೇಪ ವ್ಯಕ್ತಪಡಿಸಿದ್ದು, ಲಾಕ್‌ ಡೌನ್‌ ಗಿಂತ ವ್ಯಾಕ್ಸಿನ್‌ ನೀಡುವುದು ಉತ್ತಮ ಎಂದು ಜನರು ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ : Influenza Virus: H3N2 ವೈರಸ್ ಕೊರೊನಾಕ್ಕಿಂತಲು ಜೀವಕ್ಕೆ ಅಪಾಯಕಾರಿಯೇ ? ಈ ಬಗ್ಗೆ ತಜ್ಞರ ಅಭಿಪ್ರಾಯವೇನು

ಇದನ್ನೂ ಓದಿ : H3N2 Influenza Virus: ಹೆಚ್ಚುತ್ತಿರುವ H3N2 ವೈರಸ್‌ : ನಿರ್ಬಂಧ ಹೇರಲಿದ್ಯಾ ರಾಜ್ಯ ಸರಕಾರ?

China again Lockdown: H3N2 virus fear: Lockdown again in China

Comments are closed.