World Sight Day 2022 : ನಿಮ್ಮ ಕಣ್ಣಿನ ದೃಷ್ಟಿಯ ಬಗ್ಗೆ ಕಾಳಜಿವಹಿಸಿ; ಕಣ್ಣಿನ ಕಾಯಿಲೆಗಳನ್ನು ತಡೆಯುವ ಆಹಾರಗಳು

ಇಂದು ವಿಶ್ವ ದೃಷ್ಟಿ ದಿನ (World Sight Day 2022). ಪ್ರತಿ ವರ್ಷ ಅಕ್ಟೋಬರ್‌ ತಿಂಗಳ ಎರಡನೇ ಗುರುವಾರದಿಂದು ವಿಶ್ವ ದೃಷ್ಟಿ ದಿನವನ್ನು ಆಚರಿಸಲಾಗುತ್ತದೆ. ಕಣ್ಣಿನ ಆರೋಗ್ಯ (Eye Health) ಮತ್ತು ಕಣ್ಣಿಗೆ ಸಂಬಂಧಿಸಿದ ಕಾಯಿಲೆಗಳ (Eyes Related Issues) ಬಗ್ಗೆ ಜನರಿಗೆ ಅರಿವು ಮೂಡಿಸುವುದೇ ಇದರ ಉದ್ದೇಶ. ಕಣ್ಣು (Eye) ಮನುಷ್ಯನಿಗೆ ಅತ್ಯಂತ ಮಹತ್ವದ ಅಂಗ. ಇದು ಪಂಚೇದ್ರಿಯಗಳಲ್ಲಿ ಒಂದು. ಕಣ್ಣಿಗೆ ಸಂಬಂಧಿಸಿದಂತೆ ಹಲವಾರು ಕಾಯಿಲೆಗಳಿವೆ. ಸಮೀಪ ಮತ್ತು ದೂರದೃಷ್ಟಿ ದೋಷ, ಕಣ್ಣಿನ ಪೊರೆ, ಮಂದ ದೃಷ್ಟಿ, ಒಣ ಕಣ್ಣುಗಳು, ಮತ್ತು ಟ್ರಾಕೋಮಾದಂತಹ ಸಮಸ್ಯೆಗಳು ಸಾಮಾನ್ಯ ಕಣ್ಣಿನ ಕಾಯಿಲೆಗಳು ಜನರಲ್ಲಿ ಕಂಡುಬರುತ್ತವೆ. ಸ್ಕ್ರೀನಿಂಗ್‌ ಟೈಮ್‌ ಕಡಿಮೆ ಮಾಡುವುದು, ಕಣ್ಣಿನ ವ್ಯಾಯಾಮ, ಕಣ್ಣಿನ ಆರೋಗ್ಯ ಕಾಪಾಡುವ ಆಹಾರಗಳನ್ನು ಸೇವಿಸುವುದು ಮತ್ತು ಆರಂಭದಲ್ಲೆ ಕಾಯಿಲೆಗಳನ್ನು ಪತ್ತೆಹಚ್ಚುವುದರಿಂದ ದೃಷ್ಟಿಯನ್ನು ಕಾಪಾಡಿಕೊಳ್ಳಬಹುದು.

ಕಣ್ಣಿನ ಆರೋಗ್ಯ ಕಾಪಾಡುವ 5 ಸೂಪರ್‌ ಆಹಾರಗಳು :

ಇದನ್ನೂ ಓದಿ : Eye Health in Work From Home: ವರ್ಕ್ ಫ್ರಮ್ ಹೋಮ್‌ನಲ್ಲಿ ಕಣ್ಣಿನ ಕಾಳಜಿ ಮಾಡಲು ಹೀಗೆ ಮಾಡಿ

ಹಸಿರು ತರಕಾರಿಗಳು :
ಹಸಿರು ತರಕಾರಿಗಳಲ್ಲಿ ಪೋಷಕಾಂಶಗಳು ಅಧಿಕವಾಗಿರುತ್ತದೆ. ಅದರಲ್ಲೂ ಪಾಲಕ್‌ ಕಣ್ಣಿಗೆ ಉತ್ತಮವಾಗಿದೆ. ಪಾಲಕ್‌ನಲ್ಲಿರುವ ವಿಟಮಿನ್‌ ಸಿ, ಲ್ಯುಟೆನ್‌ ಮತ್ತು ಬೀಟಾ ಕೆರೊಟಿನ್‌ಗಳು ಕಣ್ಣಿನ ದೃಷ್ಟಿ ದೊಷಗಳು ಬರದಂತೆ ತಡೆಯಬಲ್ಲದು.

ಬೆಲ್‌ ಪೆಪ್ಪರ್‌ (ಕ್ಯಾಪ್ಸಕಮ್‌) :
ವಿಟಮಿನ್‌ ಎ ಮತ್ತು ವಿಟಮಿನ್‌ ಸಿ ಪೋಷಕಾಂಶಗಳನ್ನು ಹೊಂದಿರುವ ಬೆಲ್‌ ಪೆಪ್ಪರ್‌ ಕಣ್ಣಿನ ಆರೋಗ್ಯಕ್ಕೆ ಉಪಯುಕ್ತವಾಗಿದೆ. ಕಣ್ಣಿನ ಸಾಮಾನ್ಯ ಕಾಯಿಲೆಯಾದ ಮ್ಯಾಕ್ಯುಲರ್‌ ಡಿಜನರೇಶನ್‌ ಅನ್ನು ತೆಡೆಯುತ್ತದೆ.

ನೆಲ್ಲಿಕಾಯಿ :
ನೆಲ್ಲಿಕಾಯಿ ಅಥವಾ ಆಮ್ಲಾದಲ್ಲಿ ವಿಟಮಿನ್‌ ಸಿ ಅಧಿಕವಾಗಿದ್ದು, ಕೂದಲಿಗಷ್ಟೇ ಅಲ್ಲ ಕಣ್ಣಿನ ಆರೋಗ್ಯ ಕಾಪಾಡುವುದಕ್ಕೂ ಉತ್ತಮವಾಗಿದೆ. ಇದು ಕಾರ್ನಿಯಾದಲ್ಲಿರುವ ಕೊಲಜನ್‌ ಅಂಗಾಂಶಗಳನ್ನು ಬಲಪಡಿಸುತ್ತದೆ.

ಬಾದಾಮಿ :
ಬಾದಾಮಿ ಪೋಷಕಾಂಶಗಳ ಆಗರ. ಅದಕ್ಕಾಗಿಯೇ ವೈದ್ಯರು ಬಾದಾಮಿಯನ್ನು ಪ್ರತಿದಿನ ಸೇವಿಸಲು ಹೇಳುತ್ತಾರೆ. ಇದರಲ್ಲಿ ವಿಟಮಿನ್‌ ಬಿ2 ಹೇರಳವಾಗಿರುತ್ತದೆ. ಇದು ಕೊಲಜನ್‌ ರಚನೆಯನ್ನು ಉತ್ತೇಜಿಸುತ್ತದೆ ಮತ್ತು ಕಣ್ಣಿನ ಪೊರೆ ತಡೆಯಲು ಸಹಾಯ ಮಾಡುತ್ತದೆ.

ಬೀಟ್‌ರೂಟ್‌ :
ಚಳಿಗಾಲದಲ್ಲಿ ಬೀಟ್‌ರೂಟ್‌ ಹೆಚ್ಚಾಗಿ ದೊರಕುತ್ತದೆ. ಇದು ಕಣ್ಣಿನ ಆರೋಗ್ಯ ಕಾಪಾಡಬಲ್ಲದು. ಇದು ದೇಹದಲ್ಲಿ ರಕ್ತದ ಪ್ರಮಾಣವನ್ನು ಸಹ ಹೆಚ್ಚಿಸುತ್ತದೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ : Red Eyes : ಕಣ್ಣು ಕೆಂಪಾಗಿ ನೋವಾಗುತ್ತಿದೆಯೇ; ಅದಕ್ಕೆ ಈ 5 ಕಾರಣಗಳಿರಬಹುದು; ಎಚ್ಚರ

(World Sight Day 2022 protect your eyes from common diseases)

Comments are closed.