24 ಗಂಟೆಯೊಳಗೆ ರಘುಪತಿ ಭಟ್‌ ನಿವೃತ್ತಿ ಘೋಷಿಸಲಿ : ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಆಗ್ರಹ

MLA Sunil Kumar : ಉಡುಪಿ : ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉಡುಪಿಯ ಮಾಜಿ ಬಿಜೆಪಿ ಶಾಸಕ ಕೆ.ರಘುಪತಿ ಭಟ್‌ ಅವರು 24 ಗಂಟೆಯ ಒಳಗಾಗಿ ಚುನಾವಣಾ ಕಣದಿಂದ ನಿವೃತ್ತಿಯನ್ನು ಘೋಷಿಸಬೇಕು

MLA Sunil Kumar : ಉಡುಪಿ : ವಿಧಾನ ಪರಿಷತ್‌ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿರುವ ಉಡುಪಿಯ  ಬಿಜೆಪಿ ಮಾಜಿ ಶಾಸಕ ಕೆ.ರಘುಪತಿ ಭಟ್‌ (K Raghupathi Bhat) ಅವರು 24 ಗಂಟೆಯ ಒಳಗಾಗಿ ಚುನಾವಣಾ ಕಣದಿಂದ ನಿವೃತ್ತಿಯನ್ನು ಘೋಷಿಸಬೇಕು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ, ಕಾರ್ಕಳ ಶಾಸಕ ಸುನಿಲ್‌ ಕುಮಾರ್‌ ಅವರು ಆಗ್ರಹಿಸಿದ್ದಾರೆ,

MLC Election 2024 Raghupathi Bhatt should announce his retirement within 24 hours Karkala MLA Sunil Kumar
Image Credit to Original Source

ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪಕ್ಷದ ಒಳಗೆ ಅನ್ಯಾಯ ನಡೆದರೆ ಅದನ್ನು ನಾವು ಪಕ್ಷದ ಚೌಕಟ್ಟಿನ ಒಳಗೆ ನಿರ್ಧಾರವನ್ನು ಸರಿ ಪಡಿಸುತ್ತೇವೆ. ಎಲ್ಲರೂ ಹೈಕಮಾಂಡ್‌ ನಿರ್ಧಾರಕ್ಕೆ ಬದ್ದರಾಗಿದ್ದೇವೆ. ರಘುಪತಿ ಭಟ್‌ ಅವರು ನಿವೃತ್ತಿ ಘೋಷಣೆಯ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ. ಒಂದೊಮ್ಮೆ ರಘುಪತಿ ಭಟ್‌ ನಿವೃತ್ತಿ ಘೋಷಣೆ ಮಾಡದೇ ಇದ್ರೆ ಅವರ ವಿರುದ್ದ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

MLC Election 2024 Raghupathi Bhatt should announce his retirement within 24 hours Karkala MLA Sunil Kumar
Image Credit to Original Source

ಎನ್‌ಡಿಎಅಭ್ಯರ್ಥಿಗಳ ಗೆಲುವಿಗಾಗಿ ಎಲ್ಲರೂ ಶ್ರಮಿಸುತ್ತಿದ್ದೇವೆ. ಆ ನಿಟ್ಟಿನಲ್ಲಿ ಪಕ್ಷವನ್ನು ತಳಮಟ್ಟದಿಂದಲೇ ಸಂಘಟಿಸುವ ಕಾರ್ಯವನ್ನು ನಾವೆಲ್ಲರೂ ಮಾಡುತ್ತಿದ್ದೇವೆ. ಯಾವುದೇ ಮನಸ್ಥಾಪಗಳಿದ್ದರೂ ಕೂಡ ಅದನ್ನು ಪಕ್ಷದ ಚೌಕಟ್ಟಿನ ಒಳಗೆ ಸರಿಪಡಿಸಲಾಗುತ್ತದೆ. ಈ ನಿಟ್ಟಿನಲ್ಲಿ ರಘುಪತಿ ಭಟ್‌ ಅವರ ನಿರ್ಧಾರದ ನಿರೀಕ್ಷೆಯಲ್ಲಿ ನಾವೆಲ್ಲರೂ ಇದ್ದೇವೆ ಎಂದು ಸುನಿಲ್‌ ಕುಮಾರ್‌ ತಿಳಿಸಿದ್ದಾರೆ.

ಇದನ್ನೂ ಓದಿ : ಪಾಸ್ ಪೋರ್ಟ್ ಅಥಾರಿಟಿ ಕೈಯಲ್ಲಿ ಪ್ರಜ್ವಲ್ ಭವಿಷ್ಯ: ವಿದೇಶದಲ್ಲೇ ಅರೇಸ್ಟ್ ಆಗ್ತಾರಾ ಜೆಡಿಎಸ್ ಸಂಸದ

ರಘುಪತಿ ಭಟ್‌ ಅವರ ಜೊತೆಗಿನ ಮಾತುಕತೆ ಮುಂದುವರಿದಿದೆ. ಅವರು ಪಕ್ಷದ ನಿರ್ಧಾರಕ್ಕೆ ಬದ್ದರಾಗಿ ಇರುತ್ತಾರೆ ಎಂಬ ನಂಬಿಕೆಯಿದೆ. ಪಕ್ಷ ವಿರೋಧ ಚಟುವಟಿಕೆ ಅಥವಾ ಪಕ್ಷಕ್ಕೆ ಮುಜುಗರ ತರುವ ಕಾರ್ಯವನ್ನು ಮಾಡಿದ್ರೆ ಅವರ ವಿರುದ್ದ ಕ್ರಮಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಕೆಯನ್ನು ನೀಡಿದ್ದಾರೆ.

ಇದನ್ನೂ ಓದಿ : ಲೋಕಸಭಾ ಚುನಾವಣೆ : ಎಷ್ಟು ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ? ಜಯಭೇರಿ ಹಿಂದಿರೋ ಲೆಕ್ಕಾಚಾರಗಳೇನು ಗೊತ್ತಾ?!

ವಿಧಾನ ಪರಿಷತ್‌ ಪದವೀಧರ ಕ್ಷೇತ್ರದಿಂದ ಈ ಬಾರಿ ಉಡುಪಿಯ ಮಾಜಿ ಶಾಸಕ ರಘುಪತಿ ಭಟ್‌ ಬಿಜೆಪಿ ಟಿಕೆಟ್‌ ಸಿಗುವ ನಿರೀಕ್ಷೆಯಲ್ಲಿದ್ದರು. ಆದರೆ ಅಂತಿಮ ಹಂತದಲ್ಲಿ ಬಿಜೆಪಿ ಟಿಕೆಟ್‌ ಸಿಗದ ಹಿನ್ನೆಲೆಯಲ್ಲಿ ರಘುಪತಿ ಭಟ್‌ ಅವರು ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ ಇಳಿದಿದ್ದರು. ಈ ನಿಟ್ಟಿನಲ್ಲ ರಘುಪತಿ ಭಟ್‌ ಅವರನ್ನು ಬಿಜೆಪಿ ಹಿರಿಯ ನಾಯಕರು ಮನವೊಲಿಕೆಯ ಕಾರ್ಯವನ್ನು ಮಾಡುತ್ತಿದ್ದಾರೆ. ಆದರೆ ರಘುಪತಿ ಭಟ್‌ ಇದುವರೆಗೂ ಚುನಾವಣಾ ಕಣದಿಂದ ನಿವೃತ್ತಿ ಘೋಷಣೆ ಮಾಡಿಲ್ಲ.

MLC Election 2024 : Raghupathi Bhatt should announce his retirement within 24 hours: Karkala MLA Sunil Kumar

Comments are closed.