ಶುಭಮನ್‌ ಗಿಲ್‌ ಇನ್‌, ಇಶಾನ್‌ ಕಿಶನ್‌ ಔಟ್‌, ಆದ್ರೆ ಭಾರತ – ಪಾಕಿಸ್ತಾನ ಪಂದ್ಯ ನಡೆಯೋದೇ ಅನುಮಾನ !

ವಿಶ್ವಕಪ್‌ 2023 (World Cup 2023) ನಾಳೆ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಪಂದ್ಯ ನಡೆಯಲಿದೆ. ಅಹಮದಾಬಾದ್‌ನಲ್ಲಿ (Ahamedabad) ನಡೆಯಲಿರುವ ಪಂದ್ಯಕ್ಕೆ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ತಂಡಕ್ಕೆ ವಾಪಾಸಾಗಿದ್ದಾರೆ.

ವಿಶ್ವಕಪ್‌ 2023 (World Cup 2023) ನಾಳೆ ಭಾರತ ಹಾಗೂ ಪಾಕಿಸ್ತಾನ (India vs Pakistan) ತಂಡಗಳ ನಡುವೆ ಪಂದ್ಯ ನಡೆಯಲಿದೆ. ಅಹಮದಾಬಾದ್‌ನಲ್ಲಿ (Ahamedabad) ನಡೆಯಲಿರುವ ಪಂದ್ಯಕ್ಕೆ ಭಾರತ ಕ್ರಿಕೆಟ್‌ ತಂಡದ ಆರಂಭಿಕ ಆಟಗಾರ ಶುಭಮನ್‌ ಗಿಲ್‌ (Shubman Gill) ತಂಡಕ್ಕೆ ವಾಪಾಸಾಗಿದ್ದಾರೆ. ಈ ನಡುವಲ್ಲೇ ಇಶಾನ್‌ ಕಿಶನ್‌ (Ishan Kishan) ತಂಡದಿಂದ ಹೊರಬಿದ್ದಿದ್ದಾರೆ.

ಡೆಂಗ್ಯೂ ಕಾರಣದಿಂದಾಗಿ ವಿಶ್ವಕಪ್‌ನ ಎರಡು ಪಂದ್ಯಗಳನ್ನು ಮಿಸ್‌ ಮಾಡಿರುವ ಶುಭಮನ್‌ ಗಿಲ್‌ ಟೀಂ ಇಂಡಿಯಾ ಸೇರಿಕೊಂಡಿದ್ದಾರೆ. ಈಗಾಗಲೇ ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣ ಬೆಳೆಸಿರುವ ಶುಭಮನ್‌ ಗಿಲ್‌ ಈಗಾಗಲೇ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ.

World Cup 2023 Shubman Gill in Ishan Kishan out India-Pakistan match is doubtful
image Credit to Original Source

ಆಸ್ಟ್ರೇಲಿಯಾ ವಿರುದ್ದದ ಕೊನೆಯ ಪಂದ್ಯದಲ್ಲಿ ಡೆಂಗ್ಯೂ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಶುಭಮನ್‌ ಗಿಲ್‌ ಆಡಿರಲಿಲ್ಲ. ಜೊತೆಗೆ ಅನಾರೋಗ್ಯದ ಕಾರಣದಿಂದಲೇ ಗಿಲ್‌ ವಿಶ್ವಕಪ್‌ನ ಎರಡು ಪಂದ್ಯಗಳನ್ನು ಮಿಸ್‌ ಮಾಡಿಕೊಂಡಿದ್ದರು. ಆಸ್ಟ್ರೇಲಿಯಾ ವಿರುದ್ದದ ಮೊದಲ ಪಂದ್ಯದ ವೇಳೆ ಅವರು ಆಸ್ಪತ್ರೆಗೆ ದಾಖಲಾಗಿದ್ದರು.

ಇದನ್ನೂ ಓದಿ : ವಿಶ್ವಕಪ್‌ ಭಾರತ Vs ಪಾಕಿಸ್ತಾನ ಪಂದ್ಯ: ಕೇಸರಿ ಜರ್ಸಿಯಲ್ಲಿ ಕಣಕ್ಕಿಳಿಯುತ್ತಾ ಭಾರತ, ಬಿಸಿಸಿಐ ಹೇಳಿದ್ದೇನು ?

ಆದ್ರೆ ಇದೀಗ ಭಾರತ ವಿರುದ್ದ ಎರಡು ಪಂದ್ಯಗಳ ಬಳಿಕ ಶುಭಮನ್‌ ಗಿಲ್‌ ಚೇತರಿಸಿಕೊಂಡಿದ್ದಾರೆ. ನಿನ್ನೆಯಿಂದಲೇ ನೆಟ್ಸ್‌ನಲ್ಲಿ ಅವರು ಬೆವರು ಹರಿಸುತ್ತಿದ್ದಾರೆ. ಸದ್ಯಕ್ಕೆ ಲಭ್ಯವಾಗಿರುವ ಮಾಹಿತಿಯ ಪ್ರಕಾರ ಶುಭಮನ್‌ ಗಿಲ್‌ ನಾಳೆ ಆರಂಭಿಕರಾಗಿ ಕಣಕ್ಕೆ ಇಳಿಯುವ ಸಾಧ್ಯತೆಯಿದೆ.

ಏಕದಿನ ರಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರುತ್ತಾರಾ ಶುಭಮನ್‌ ಗಿಲ್‌ ? 

ಐಸಿಸಿ ರಾಂಕಿಂಗ್‌ ಪಟ್ಟಿಯಲ್ಲಿ ಶುಭಮನ್‌ ಗಿಲ್‌ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ರಾಂಕಿಂಗ್‌ನಲ್ಲಿ ಇದ್ದಾರೆ. ಪಾಕಿಸ್ತಾನ ತಂಡದ ನಾಯಕ ಬಾಬರ್‌ ಅಜಂ ಅಗ್ರಸ್ಥಾನದಲ್ಲಿಯೇ ಮುಂದುವರಿದಿದ್ದಾರೆ. ವಿಶ್ವಕಪ್‌ನಲ್ಲಿ ಶುಭಮನ್‌ ಗಿಲ್‌ ಉತ್ತಮ ಆಟದ ಪ್ರದರ್ಶನ ನೀಡಿದ್ರೆ ಅಗ್ರಸ್ಥಾನಕ್ಕೇರುವ ಅವಕಾಶವೂ ಇದೆ.

ಏಷ್ಯಾಕಪ್‌ ಹಾಗೂ ಆಸ್ಟ್ರೇಲಿಯಾ ವಿರುದ್ದದ ಸರಣಿಯಲ್ಲಿಯೂ ಶುಭಮನ್‌ ಗಿಲ್‌ ಉತ್ತಮ ಪ್ರದರ್ಶನ ನೀಡಿದ್ದಾರೆ. ಅದೇ ಫಾರ್ಮ್‌ನ್ನು ಇದೀಗ ವಿಶ್ವಕಪ್‌ ನಲ್ಲಿಯೂ ಮುಂದುವರಿಸುವ ಸಾಧ್ಯತೆಯಿದೆ. ಇದೇ ಕಾರಣದಿಂದಲೇ ಅಭಿಮಾನಿಗಳು ಶುಭಮನ್‌ ಗಿಲ್‌ ಆಟವನ್ನು ನೋಡಲು ಕಾತರರಾಗಿದ್ದಾರೆ.

World Cup 2023 Shubman Gill in Ishan Kishan out India-Pakistan match is doubtful
Image Credit to Original Source

ಒಂದೊಮ್ಮೆ ಶುಭಮನ್‌ ಗಿಲ್‌ ಆಡುವ ಬಳಗದಲ್ಲಿ ಕಾಣಿಸಿಕೊಂಡ್ರೆ ಆರಂಭಿಕ ಆಟಗಾರ ಇಶಾನ್‌ ಕಿಶಾನ್‌ ಆಡುವ ಬಳಗದಿಂದ ಹೊರಗೆ ಉಳಿಯಲಿದ್ದಾರೆ. ಇಶಾನ್‌ ಕಿಶಾನ್‌ ಈಗಾಗಲೇ ವಿಶ್ವಕಪ್‌ನ ಮೊದಲ ಎರಡು ಪಂದ್ಯಗಳಲ್ಲಿ ಆರಂಭಿಕ ಆಟಗಾರನಾಗಿ ಕಣಕ್ಕೆ ಇಳಿದಿದ್ದರು. ಆದರೆ ಆಸ್ಟ್ರೇಲಿಯಾ ವಿರುದ್ದದ ಪಂದ್ಯದಲ್ಲಿ ಅವರು ಶೂನ್ಯಕ್ಕೆ ಔಟಾಗಿದ್ದಾರೆ.

ಇದನ್ನೂ ಓದಿ : ಭಾರತ – ಪಾಕಿಸ್ತಾನ ಪಂದ್ಯಕ್ಕೆ ಶುಭಮನ್‌ ಗಿಲ್‌ : ಆರೋಗ್ಯದ ಬಗ್ಗೆ ಸಿಕ್ತು ಬಿಗ್‌ ಅಪ್ಡೇಟ್ಸ್‌

ಆದರೆ ಅಫ್ಘಾನಿಸ್ತಾನ ವಿರುದ್ದದ ಪಂದ್ಯದಲ್ಲಿ ಇಶಾನ್‌ ಕಿಶಾನ್‌ 47 ರನ್‌ ಸಿಡಿಸಿದ್ದರು. ಆದರೆ ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾಗಿದ್ದ ರೋಹಿತ್‌ ಶರ್ಮಾ ಭರ್ಜರಿ ಶತಕ ಸಿಡಿಸುವ ಮೂಲಕ ಭಾರತಕ್ಕೆ ಗೆಲುವನ್ನು ತಂದುಕೊಟ್ಟಿದ್ದರು. ರೋಹಿತ್‌ ಶರ್ಮಾ ಹಾಗೂ ಶುಭಮನ್‌ ಗಿಲ್‌ ಜೋಡಿ ಉತ್ತಮ ಜೊತೆಯಾಟವನ್ನು ನೀಡುತ್ತಿದೆ.

ಪಾಕಿಸ್ತಾನ ವಿರುದ್ದ ಪಂದ್ಯದಲ್ಲಿ ಶುಭಮನ್‌ ಗಿಲ್‌ ಕಣಕ್ಕೆ ಇಳಿದ್ರೆ ಭಾರತಕ್ಕೆ ಆನೆ ಬಲ ಬಂದಂತೆ ಆಗಲಿದೆ. ಆದರೆ ಶುಭಮನ್‌ ಗಿಲ್‌ ಅಭ್ಯಾಸ ನಡೆಸಿದ್ದರೂ ಕೂಡ ಅವರು ಫಿಟ್ನೆಸ್‌ ಪರೀಕ್ಷೆಯಲ್ಲಿ ಪಾಸ್‌ ಆಗಬೇಕಾಗಿದೆ. ಬಿಸಿಸಿಐ ವೈದ್ಯರು ನೀಡುವ ವರದಿಯ ಆಧಾರದ ಮೇಲೆ ಅವರು ನಾಳಿನ ಪಂದ್ಯದ ಲಭ್ಯತೆ ತಿಳಿಯಲಿದೆ

World Cup 2023 Shubman Gill in Ishan Kishan out India-Pakistan match is doubtful
Image Credit to Original Source

ವಿಶ್ವಕಪ್‌ 2023 : ಭಾರತ- ಪಾಕಿಸ್ತಾನ ಪಂದ್ಯವೇ ಅನುಮಾನ !

ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಾಳೆ ಭಾರತ ತಂಡ ಪಾಕಿಸ್ತಾನದ ವಿರುದ್ದ ಪಂದ್ಯವನ್ನು ಆಡಲಿದೆ. ಭಾರತ ಹಾಗೂ ಪಾಕಿಸ್ತಾನ ತಂಡಗಳು ಆಡಿರುವ ಎರಡೂ ಪಂದ್ಯಗಳಲ್ಲಿ ಗೆಲುವು ಕಂಡಿವೆ. ಆದರೆ ಇದುವರೆಗೂ ಪಾಕಿಸ್ತಾನ ತಂಡ ಭಾರತ ತಂಡದ ವಿರುದ್ದ ಗೆಲುವನ್ನೇ ಕಂಡಿಲ್ಲ.

ಹಲವು ವರ್ಷಗಳ ಬಳಿಕ ಭಾರತ ಹಾಗೂ ಪಾಕಿಸ್ತಾನ ತಂಡಗಳು ಭಾರತದ ನೆಲದಲ್ಲಿ ಪಂದ್ಯವನ್ನು ಆಡುತ್ತಿವೆ. ಸಾಂಪ್ರದಾಯಿಕ ಎದುರಾಳಿಗಳ ಪಂದ್ಯವನ್ನು ನೋಡಲು ವಿಶ್ವವೇ ಕಾತರವಾಗಿದೆ. ಎರಡೂ ತಂಡಗಳು ಈಗಾಗಲೇ ಕಠಿಣ ಅಭ್ಯಾಸವನ್ನೂ ನಡೆಸಿವೆ. ಜೊತೆಗೆ ಪಂದ್ಯದ ಟಿಕೆಟ್‌ ಈಗಾಗಲೇ ಸೋಲ್ಡ್‌ ಔಟ್‌ ಆಗಿದೆ.

ಇದನ್ನೂ ಓದಿ : ಐಪಿಎಲ್‌ 2024 : ಆರ್‌ಸಿಬಿ ತಂಡ ಸೇರ್ತಾರಾ ರಚಿನ್‌ ರವೀಂದ್ರ

ವಸತಿಗೃಹ, ಬಸ್‌, ರೈಲ್ವೆ, ವಿಮಾನದ ಟಿಕೆಟ್‌ಗಳು ಕೂಡ ಲಭ್ಯವಿಲ್ಲ. ಪ್ರೇಕ್ಷಕರು ಪಂದ್ಯ ವೀಕ್ಷಣೆಗೆ ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಪಾಕಿಸ್ತಾನ ಹಾಗೂ ಭಾರತದ ಪಂದ್ಯಕ್ಕೆ ಮಳೆರಾಯ ಅಡ್ಡಿಯಾಗುವ ಸಾಧ್ಯತೆಯಿದೆ. ಈ ಕುರಿತು ಹವಮಾನ ಇಲಾಖೆ ವರದಿಯನ್ನು ನೀಡಿದೆ.

ಅಕ್ಟೋಬರ್‌ 14 ಮತ್ತು 15 ರಂದು ಅಹಮದಾಬಾದ್‌ನಲ್ಲಿ ಮಳೆಯಾಗುವ ಸಾಧ್ಯತೆಯ ಕುರಿತು ಹವಾಮಾನ ಇಲಾಖೆ ಈಗಾಗಲೇ ಮಾಹಿತಿಯನ್ನು ನೀಡಿದೆ. ಆದರೆ ಅಕ್ಟೋಬರ್‌ 15 ರ ನಂತರ ಮಳೆ ಬಿಡುವು ನೀಡುವುದಾಗಿ ತಿಳಿಸಿದೆ.  ಭಾರತ ಪಾಕ್‌ ಪಂದ್ಯಕ್ಕೆ ಮಳೆಯ ಅಡ್ಡಿಯ ಆತಂಕ ಇದೀಗ ಕೋಟ್ಯಾಂತರ ಅಭಿಮಾನಿಗಳನ್ನು ಕಾಡುತ್ತಿದೆ.

World Cup 2023 Shubman Gill in, Ishan Kishan out, India-Pakistan match is doubtful !

Comments are closed.