ಮುಂಬೈ: ಮಹಿಳಾ ಪ್ರೀಮಿಯರ್ ಲೀಗ್ (WPL 2023) ಚೊಚ್ಚಲ ಸರಣಿಯಲ್ಲಿ ಟೀಂ ಇಂಡಿಯಾ ನಾಯಕಿ ಹರ್ಮನ್ ಪ್ರೀತ್ ಕೌರ್ ನೇತೃತ್ವದ ಮುಂಬೈ ಇಂಡಿಯನ್ಸ್ ತಂಡ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಮಣಿಸುವ ಮೂಲಕ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ 20 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿತ್ತು. ಫೈನಲ್ ಪಂದ್ಯದಲ್ಲಿ ಬ್ಯಾಟಿಂಗ್ ಹಾಗೂ ಶಿಸ್ತಿನ ಬೌಲಿಂಗ್ ದಾಳಿ ನಡೆಸಿದ ಮುಂಬೈ ಇಂಡಿಯನ್ಸ್ ತಂಡವು ಚಾಂಪಿಯನ್ ಆಗಿ ಹೊರಹೊಮ್ಮಿದೆ. ಕೊನೆಯ 12 ಎಸೆತಗಳಲ್ಲಿ ಮುಂಬೈಗೆ 21 ರನ್‌ಗಳ ಅಗತ್ಯವಿತ್ತು. ಈ ವೇಳೆ ಅಮೇಲಿಯ ಕೇರ್ 19ನೇ ಓವರ್‌ನಲ್ಲಿ ಭರ್ಜರಿ 3 ಬೌಂಡರಿ ಬಾರಿಸಿ ತಂಡಕ್ಕೆ ಸುಲಭ ಗೆಲುವು ತಂದುಕೊಟ್ರು.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ ಗುರಿಯನ್ನು ಬೆನ್ನತ್ತಲು ಹೊರಟ ಮುಂಬೈ ಇಂಡಿಯನ್ದ್ ತಂಡ ನಿಧಾನಗತಿಯ ಆಟಕ್ಕೆ ಮುಂದಾಯ್ತು. ಆರಂಭಿಕರಾದ ಹೇಲಿ ಮ್ಯಾಥಿವ್ಸ್ 13 ರನ್, ಯಸ್ತಿಕಾ ಭಾಟಿಯಾ 4 ರನ್ ಗಳಿಸಿ ಪೆವಿಲಿಯನ್ ಸೇರಿಕೊಂಡರು. ನಂತರ ಕ್ರೀಸ್ ಗೆ ಬಂದ. ನಾಟ್ ಸ್ಕಿವರ್ ಬ್ರಂಟ್, ಹರ್ಮನ್ ಪ್ರೀತ್ ಕೌರ್ ತಾಳ್ಮೆಯ ಆಟವಾಡಿದರು. ಈ ಜೋಡಿ 74 ಎಸೆತಗಳಲ್ಲಿ ಈ ಜೋಡಿ 72 ರನ್ ಗಳಿಸುವ ಮೂಲಕ ಗೆಲುವಿನ ಆಸೆ ಮೂಡಿಸಿದ್ರು. ಆದರೆ 37 ರನ್ (39 ಎಸೆತ 5 ಬೌಂಡರಿ) ಗಳಿಸಿ ಆಟವಾಡುತ್ತಿದ್ದ ಹರ್ಮನ್‌ಪ್ರೀತ್ ಕೌರ್ ರನೌಟ್‌ಗೆ ಬಲಿಯಾದ್ರು.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಡೆಲ್ಲಿ ಕ್ಯಾಪಿಟಲ್ಸ್ ತಂಡ ಆರಂಭಿಕ ಆಘಾತ ಅನುಭವಿಸಿದೆ. ಭರವಸೆಯ ಆಮಭಿಕ ಆಟಗಾರ್ತಿ ಶಫಾಲಿ ವರ್ಮಾ ಆರಂಭದಿಂದಲೇ ಸ್ಪೋಟಕ ಆಟಕ್ಜೆ ಮುಂದಾದ್ರು, 4 ಎಸೆತಗಳಲ್ಲಿ 11 ರನ್ ಗಳಿಸಿ ಔಟಾಗುವ ಮೂಲಕ ನಿರಾಸೆ ಅನುಭವಿಸಿದರು. ಅಲಿಸ್ಸಾ ಕ್ಯಾಪ್ಸಿ ಕೂಡ ಮೊದಲ ಎಸೆತದಲ್ಲೇ ಇಸ್ಸಿ ವಾಂಗ್‌ಗೆ ವಿಕೆಟ್ ಒಪ್ಪಿಸಿದರು. ಅಲ್ಲದೇ ಜೆಮಿಮಾ ರೊಡ್ರಿಗಸ್ ಕೂಡ ಹೆಚ್ಚು ಹೊತ್ತು ಕ್ರೀಸ್‌ನಲ್ಲಿ ನಿಲ್ಲಲಿಲ್ಲ, 8 ಎಸೆತಗಳಲ್ಲಿ 9 ರನ್ ಗಳಿಸಿ ಕ್ಯಾಚ್ ನೀಡಿದರು. ಮೆಗ್ ಲ್ಯಾನಿಂಗ್ ಮತ್ತು ಮಾರಿಜಾನ್ನೆ ಕಪ್ ಜೋಡಿ 21 ಎಸೆತಗಳಲ್ಲಿ 18 ರನ್ ಗಳಿಸಿ ಔಟಾದರು. 29 ಎಸೆತಗಳಲ್ಲಿ 35 ರನ್ ಗಳಿಸಿ ಉತ್ತಮವಾಗಿ ಆಡುತ್ತಿದ್ದ ನಾಯಕಿ ಮೆಗ್ ಲ್ಯಾನಿಂಗ್ ಬೇಡದ ರನ್ ಕದಿಯಲು ಹೋಗಿ ರನೌಟ್‌ಗೆ ಬಲಿಯಾದರು. ಜೆಸ್ ಜೊನಾಸ್ಸೆನ್ 11 ಎಸೆತಗಳಲ್ಲಿ 2 ರನ್ ಗಳಿಸಿ ನಿರಾಸೆ ಮೂಡಿಸಿದರು. ಅರುಂಧತಿ ರಾಯ್ ಶೂನ್ಯಕ್ಕೆ ಔಟಾದರು. ಡೆಲ್ಲಿ ತಂಡದ ಆಟಗಾರ್ತಿಯ ಬ್ಯಾಟಿಂಗ್ ವೈಫಲ್ಯದ ನಡುವಲ್ಲೇ 20 ಓವರ್ ಗಳಲ್ಲಿ ತಂಡ 131 ರನ್ ಗಳಿಸಿತ್ತು. ಮುಂಬೈ ಪರ ಹೇಲಿ ಮ್ಯಾಥ್ಯೂಸ್ 4 ಓವರ್ ಗಳಲ್ಲಿ ಕೇವಲ 5 ರನ್ ನೀಡಿ 3 ವಿಕೆಟ್ ಪಡೆದುಕೊಂಡು ಮುಂಬೈಗೆ ಶಾಕ್ ಕೊಟ್ರು.
WPL 2023: The champion is Mumbai Indians