Prithvi Shaw : “ನೀನು ಎಲ್ಲವನ್ನೂ ನೋಡುತ್ತಿರುವೆ ಸಾಯಿ ಬಾಬಾ”, ಭಾರತ ತಂಡದಲ್ಲಿ ಸ್ಥಾನ ಸಿಗದಿದ್ದಕ್ಕೆ ಬಾಬಾಗೆ ಮೊರೆ ಇಟ್ಟ ಪೃಥ್ವಿ ಶಾ

ಬೆಂಗಳೂರು: ಮುಂಬರುವ ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಗಳಿಗೆ ಭಾರತ ತಂಡವನ್ನು ಪ್ರಕಟಿಸಲಾಗಿದ್ದು, ಮುಂಬೈನ ಯುವ ಆರಂಭಿಕ ಬ್ಯಾಟ್ಸ್’ಮನ್ ಪೃಥ್ವಿ ಶಾ(Prithvi Shaw) ಅವರಿಗೆ ಮತ್ತೆ ನಿರಾಸೆ ಎದುರಾಗಿದೆ.

ನ್ಯೂಜಿಲೆಂಡ್ ಹಾಗೂ ಬಾಂಗ್ಲಾದೇಶ ವಿರುದ್ಧದ ಸರಣಿಗಳಿಗೆ ಒಟ್ಟು ನಾಲ್ಕು ತಂಡಗಳನ್ನು ಪ್ರಕಟಿಸಲಾಗಿದ್ದು, ಯಾವ ತಂಡದಲ್ಲೂ ಪೃಥ್ವಿ ಶಾಗೆ ಸ್ಥಾನ ಸಿಕ್ಕಿಲ್ಲ. ಟೀಮ್ ಇಂಡಿಯಾದಲ್ಲಿ ಸ್ಥಾನ ಸಿಗದಿರುವ ನೋವನ್ನು ಪೃಥ್ವಿ ಶಾ ಇನ್’ಸ್ಟಾಗ್ರಾಂ ಪೋಸ್ಟ್ ಮೂಲಕ ತೋಡಿಕೊಂಡಿದ್ದಾರೆ. “ನೀವು ಎಲ್ಲವನ್ನೂ ನೋಡುತ್ತಿದ್ದೀರಿ ಎಂದು ಭಾವಿಸುತ್ತೇನೆ ಸಾಯಿ ಬಾಬಾ” ಎಂದು ಪೃಥ್ವಿ ಶಾ ಇನ್’ಸ್ಟಾಗ್ರಾಂ ಸ್ಟೋರೀಸ್’ನಲ್ಲಿ ಭಾವುಕರಾಗಿ ಬರೆದುಕೊಂಡಿದ್ದಾರೆ.

ಕಳೆದ ವರ್ಷ ಭಾರತ ತಂಡದಲ್ಲಿ ಸ್ಥಾನ ಕಳೆದುಕೊಂಡಿದ್ದ 22 ವರ್ಷದ ಪೃಥ್ವಿ ಶಾ, ದೇಶೀಯ ಕ್ರಿಕೆಟ್’ನಲ್ಲಿ ಅಮೋಘ ಪ್ರದರ್ಶನ ತೋರಿದ್ದರು. ಕಳೆದ 10 ಪಂದ್ಯಗಳಲ್ಲಿ 2 ಶತಕ ಸಹಿತ 581 ರನ್ ಗಳಿಸಿರುವ ಪೃಥ್ವಿ ಶಾ(Prithvi Shaw ) ಆಯ್ಕೆ ಸಮಿತಿಯ ಗಮನ ಸೆಳೆಯುವ ಪ್ರಯತ್ನ ಮಾಡಿದ್ದರು. ಈ 10 ಇನ್ನಿಂಗ್ಸ್’ಗಳಲ್ಲಿ ಏಳು ಟಿ20 ಇನ್ನಿಂಗ್ಸ್’ಗಳು ಎಂಬುದು ಗಮನಾರ್ಹ. ಅಸ್ಸಾಂ ವಿರುದ್ಧದ ಸೈಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಪಂದ್ಯದಲ್ಲಿ ಸ್ಫೋಟಕ 134 ರನ್ ಬಾರಿಸಿದ್ದ ಪೃಥ್ವಿ, ನ್ಯೂಜಿಲೆಂಡ್ ವಿರುದ್ಧದ ಟಿ20 ಅಥವಾ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದರು. ಆದರೆ ಯುವ ಆರಂಭಿಕ ಆಟಗಾರನಿಗೆ ಮತ್ತೆ ನಿರಾಸೆಯಾಗಿದೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಸರಣಿಗೆ ಭಾರತ ತಂಡ (India Vs New Zeeland T20 series):
ಹಾರ್ದಿಕ್ ಪಾಂಡ್ಯ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ಇಶಾನ್ ಕಿಶನ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್, ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್.

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (India Vs New Zeeland ODI series):
ಶಿಖರ್ ಧವನ್ (ನಾಯಕ), ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ಶುಭಮನ್ ಗಿಲ್, ದೀಪಕ್ ಹೂಡ, ಸೂರ್ಯಕುಮಾರ್ ಯಾದವ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಶಹಬಾಜ್ ಅಹ್ಮದ್, ಯುಜ್ವೇಂದ್ರ ಚಹಲ್, ಕುಲ್ದೀಪ್ ಯಾದವ್, ಅರ್ಷದೀಪ್ ಸಿಂಗ್, ದೀಪಕ್ ಚಹರ್, ಕುಲ್ದೀಪ್ ಸೇನ್, ಉಮ್ರಾನ್ ಮಲಿಕ್.

ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡ (India Vs Bangladesh ODI series):
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ರಿಷಭ್ ಪಂತ್ (ವಿಕೆಟ್ ಕೀಪರ್), ಇಶಾನ್ ಕಿಶನ್ (ವಿಕೆಟ್ ಕೀಪರ್), ರವೀಂದ್ರ ಜಡೇಜ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ದೀಪಕ್ ಚಹರ್, ಯಶ್ ದಯಾಳ್.

ಬಾಂಗ್ಲಾದೇಶ ವಿರುದ್ಧದ ಟೆಸ್ಟ್ ಸರಣಿಗೆ ಭಾರತ ತಂಡ (India Vs Bangladesh test series):
ರೋಹಿತ್ ಶರ್ಮಾ (ನಾಯಕ), ಕೆ.ಎಲ್ ರಾಹುಲ್ (ಉಪನಾಯಕ), ಶುಭಮನ್ ಗಿಲ್, ಚೇತೇಶ್ವರ್ ಪೂಜಾರ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಕೆ.ಎಸ್ ಭರತ್ (ವಿಕೆಟ್ ಕೀಪರ್), ರವಿಚಂದ್ರನ್ ಅಶ್ವಿನ್, ರವೀಂದ್ರ ಜಡೇಜ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಉಮೇಶ್ ಯಾದವ್.

ಭಾರತ Vs ನ್ಯೂಜಿಲೆಂಡ್ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: 18 ನವೆಂಬರ್ (ವೆಲಿಂಗ್ಟನ್)
2ನೇ ಟಿ20: 20 ನವೆಂಬರ್ (ಮೌಂಟ್ ಮೌಂಗ್’ನುಯ್)
3ನೇ ಟಿ20: 22 ನವೆಂಬರ್ (ನೇಪಿಯರ್)

ಭಾರತ Vs ನ್ಯೂಜಿಲೆಂಡ್ ಏಕದಿನ ಸರಣಿಯ ವೇಳಾಪಟ್ಟಿ
ಮೊದಲ ಏಕದಿನ: 25 ನವೆಂಬರ್ (ಆಕ್ಲೆಂಡ್)
2ನೇ ಏಕದಿನ: 27 ನವೆಂಬರ್ (ಹ್ಯಾಮಿಲ್ಟನ್)
3ನೇ ಏಕದಿನ: 30 ನವೆಂಬರ್ (ಕ್ರೈಸ್ಟ್’ಚರ್ಚ್)

ಭಾರತ Vs ಬಾಂಗ್ಲಾದೇಶ ಏಕದಿನ ಸರಣಿಯ ವೇಳಾಪಟ್ಟಿ
ಮೊದಲ ಏಕದಿನ: 4 ಡಿಸೆಂಬರ್
2ನೇ ಏಕದಿನ: 7 ಡಿಸೆಂಬರ್
3ನೇ ಏಕದಿನ: 10 ಡಿಸೆಂಬರ್

ಇದನ್ನೂ ಓದಿ : Sehwag criticized Dinesh Karthik: “ಇದೇನು ಬೆಂಗಳೂರು ಪಿಚ್ ಅಲ್ಲ”, ದಿನೇಶ್ ಕಾರ್ತಿಕ್ ವಿರುದ್ಧ ಸೆಹ್ವಾಗ್ ಈ ರೀತಿ ಗುಡುಗಿದ್ದೇಕೆ ?

ಇದನ್ನೂ ಓದಿ : Syed Mushtaq Ali T20: ನಾಳೆ ಕರ್ನಾಟಕ Vs ಪಂಜಾಬ್ ಕ್ವಾರ್ಟರ್ ಫೈನಲ್; ಇಲ್ಲಿದೆ Team, Time, Live ಡೀಟೇಲ್ಸ್

ಭಾರತ Vs ಬಾಂಗ್ಲಾದೇಶ ಟೆಸ್ಟ್ ಸರಣಿಯ ವೇಳಾಪಟ್ಟಿ
ಮೊದಲ ಟೆಸ್ಟ್: 14-18 ಡಿಸೆಂಬರ್
2ನೇ ಟೆಸ್ಟ್: 22-26 ಡಿಸೆಂಬರ್

“You see everything Sai Baba”, Prithvi Shah cried out to Baba for not getting a place in the Indian team.

Comments are closed.