ಗುವಾಹಟಿ: (Cricketer KL Rahul) ಶ್ರೀಲಂಕಾ ವಿರುದ್ಧದ ಪ್ರಥಮ ಏಕದಿನ ಪಂದ್ಯದಲ್ಲಿ (India Vs Sri Lanka ODI) ಟಾಸ್ ಸೋತಿರುವ ಭಾರತ ಮೊದಲು ಬ್ಯಾಟಿಂಗ್ ನಡೆಸುತ್ತಿದೆ.
ಭಾರತದ ಪ್ಲೇಯಿಂಗ್ XIನಲ್ಲಿ ಆರಂಭಿಕರಾಗಿ ನಾಯಕ ರೋಹಿತ್ ಶರ್ಮಾ ಮತ್ತು ಶುಭಮನ್ ಗಿಲ್ ಕಾಣಿಸಿಕೊಂಡಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿ, 4ನೇ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್, 5ನೇ ಕ್ರಮಾಂಕದಲ್ಲಿ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ (Cricketer KL Rahul) ಮತ್ತು 6ನೇ ಕ್ರಮಾಂಕದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಡಲಿದ್ದಾರೆ. ನಂತರದ ಕ್ರಮಾಂಕಗಳಲ್ಲಿ ಅಕ್ಷರ್ ಪಟೇಲ್, ಯುಜ್ವೇಂದ್ರ ಚಹಲ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಮತ್ತು ಉಮ್ರಾನ್ ಮಲಿಕ್ ಕಾಣಿಸಿಕೊಂಡಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 3ನೇ ಪಂದ್ಯದಲ್ಲಿ ಭರ್ಜರಿ ದ್ವಿಶತಕ ಬಾರಿಸಿದ್ದ ಎಡಗೈ ಓಪನರ್ ಇಶಾನ್ ಕಿಶನ್ (Ishan Kishan) ಅವರನ್ನು ಲಂಕಾ ವಿರುದ್ಧದ ಪಂದ್ಯಕ್ಕೆ ಪ್ಲೇಯಿಂಗ್ XIನಿಂದ ಕೈಬಿಡಲಾಗಿದ್ದು, ಶುಭಮನ್ ಗಿಲ್’ಗೆ (Shubman Gill) ಅವಕಾಶ ನೀಡಲಾಗಿದೆ. ವಿಕೆಟ್ ಕೀಪರ್ ಸ್ಥಾನದಲ್ಲಿ ಕೆ.ಎಲ್ ರಾಹುಲ್ (Cricketer KL Rahul) ಬದಲು ಇಶಾನ್ ಕಿಶನ್ ಅವರನ್ನು ಆಡಿಸಬೇಕಿತ್ತು ಎಂದು ಕರ್ನಾಟಕದ ಮಾಜಿ ಕ್ರಿಕೆಟಿಗ ವೆಂಕಟೇಶ್ ಪ್ರಸಾದ್ ಟ್ವೀಟ್ ಮಾಡಿದ್ದಾರೆ. ಕೆ.ಎಲ್ ರಾಹುಲ್ (KL RahuCricketer KL Rahul) ಅವರಿಗಾಗಿ ಇಶಾನ್ ಕಿಶನ್ ಅವರನ್ನು ಬಲಿಕೊಡಲಾಗಿದೆ ಎಂದು ವೆಂಕಟೇಶ್ ಪ್ರಸಾದ್ ಆರೋಪಿಸಿದ್ದಾರೆ.
ವೆಂಕಟೇಶ್ ಪ್ರಸಾದ್ ಅವರ ಈ ಅಭಿಪ್ರಾಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ಕೆಲವರು ಧ್ವನಿಗೂಡಿಸಿದ್ರೆ, ಇನ್ನು ಕೆಲವರು ಇದು ಮೈಂಡ್ ಲೆಸ್ ಅಭಿಪ್ರಾಯ ಎಂದಿದ್ದಾರೆ. “ಕೆ.ಎಲ್ ರಾಹುಲ್ ಅವರಿಗಾಗಿ ಇಶಾನ್ ಕಿಶನ್ ಅವರನ್ನ ಡ್ರಾಪ್ ಮಾಡಲಾಗಿಲ್ಲ. ರಾಹುಲ್ (Cricketer KL Rahul) 5ನೇ ಕ್ರಮಾಂಕದ ಬ್ಯಾಟ್ಸ್’ಮನ್, ಇಶಾನ್ ಕಿಶನ್ ಮೀಸಲು ಆರಂಭಿಕ ಆಟಗಾರ. ತಂಡದ ಆಯ್ಕೆಯಲ್ಲಿ ರಾಹುಲ್ ಮತ್ತು ಇಶಾನ್ ಕಿಶನ್’ಗೆ ಸಂಬಂಧವೇ ಇಲ್ಲ” ಎಂದು ಕ್ರಿಕೆಟ್ ಅಭಿಮಾನಿಯೊಬ್ಬ ಟ್ವೀಟ್ ಮೂಲಕ ವೆಂಕಟೇಶ್ ಪ್ರಸಾದ್’ಗೆ ತಿರುಗೇಟು ಕೊಟ್ಟಿದ್ದಾನೆ.
ಬಾಂಗ್ಲಾದೇಶ ಪ್ರವಾಸದಲ್ಲಿ ವಿಫಲರಾಗಿದ್ದ ಕನ್ನಡಿಗ ಕೆ.ಎಲ್ ರಾಹುಲ್ (Cricketer KL Rahul) ಭಾರತ ಪರ ಏಕದಿನ ಕ್ರಿಕೆಟ್’ನಲ್ಲಿ 4 ಮತ್ತು 5ನೇ ಕ್ರಮಾಂಕದಲ್ಲಿ ಅದ್ಭುತ ಪ್ರದರ್ಶನ ತೋರಿದ್ದಾರೆ. ಇಲ್ಲಿಯವರೆಗೆ 4 ಹಾಗೂ 5ನೇ ಕ್ರಮಾಂಕಗಳಲ್ಲಿ ಒಟ್ಟು 19 ಇನ್ನಿಂಗ್ಸ್’ಗಳಲ್ಲಿ ಬ್ಯಾಟ್ ಬೀಸಿರುವ ಕೆ.ಎಲ್ ರಾಹುಲ್ 47.31ರ ಸರಾಸರಿಯಲ್ಲಿ 100.39ರ ಸ್ಟ್ರೈಕ್’ರೇಟ್’ನೊಂದಿಗೆ 757 ರನ್ ಕಲೆ ಹಾಕಿದ್ದಾರೆ. ಈ ವೇಳೆ ಎರಡು ಶತಕಗಳನ್ನು ಬಾರಿಸಿರುವ ರಾಹುಲ್ 5 ಅರ್ಧಶತಕಗಳನ್ನು ಸಿಡಿಸಿದ್ದಾರೆ.
ಇದನ್ನೂ ಓದಿ : Faf du Plessis: ಸೂಪರ್ ಕಿಂಗ್ಸ್ ತಂಡದ ನಾಯಕತ್ವ ವಹಿಸಲಿದ್ದಾರೆ RCB ಕ್ಯಾಪ್ಟನ್ ಫಾಫ್ ಡು ಪ್ಲೆಸಿಸ್
ಏಕದಿನ ಕ್ರಿಕೆಟ್’ನಲ್ಲಿ 4/5ನೇ ಕ್ರಮಾಂಕದಲ್ಲಿ ರಾಹುಲ್
ಪಂದ್ಯ: 21
ಇನ್ನಿಂಗ್ಸ್: 19
ರನ್: 757
ಸರಾಸರಿ: 47.31
ಸ್ಟ್ರೈಕ್’ರೇಟ್: 100.39
ಬೆಸ್ಟ್: 112
ಶತಕ: 02
ಅರ್ಧಶತಕ: 05
KL Rahul: Here is the answer to the “mindless” people who are asking why Rahul was given a chance!