Ravindra Jadeja : ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ ಐಪಿಎಲ್‌ನಿಂದ ಔಟ್‌

ಇಂಡಿಯನ್‌ ಪ್ರೀಮಿಯರ್‌ ಲೀಗ್‌ನಲ್ಲಿ ಗಾಯಾಳುಗಳ ಸಂಖ್ಯೆ ಹೆಚ್ಚುತ್ತಿದೆ. ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ನಾಯಕ ರವೀಂದ್ರ ಜಡೇಜಾ (Ravindra Jadeja ) ಕೂಡ ಇದೇ ಸಾಲಿಗೆ ಸೇರ್ಪಡೆ ಗೊಂಡಿದ್ದಾರೆ. ಪಕ್ಕೆಲುಬಿನ ಗಾಯಕ್ಕೆ ತುತ್ತಾಗಿರುವ ರವೀಂದ್ರ ಜಡೇಜಾ ಐಪಿಎಲ್‌ನ ಉಳಿದ ಪಂದ್ಯಗಳಿಂದ ಹೊರಗುಳಿಯಲಿದ್ದಾರೆ. ಭಾರತದ ತಂಡ ಖ್ಯಾತ ಆಲ್‌ರೌಂಡರ್‌ ಜಡೇಜಾ ಇದೀಗ ಚೆನ್ನೈ ಸೂಪರ್‌ ಕಿಂಗ್ಸ್‌ ಬಬಲ್‌ ತೊರೆದಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ( ಮೇ 04 ರಂದು) ಅವರು ತಮ್ಮ ಪಕ್ಕೆಲುಬಿನ ಮೇಲೆ ಗಾಯಗೊಂಡಿದ್ದರು. ಮುಂದಿನ ದಿನಗಳಲ್ಲಿ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಅವರು ಗುರುತಿಸಿ ಕೊಳ್ಳಬೇಕಾಗಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಕ್ಕೆ ಉಳಿದಿರುವುದು ಕೇವಲ ಎರಡು ಪಂದ್ಯಗಳು ಮಾತ್ರ. ಉಳಿದ ಪಂದ್ಯಗಳಲ್ಲಿ ಆಟವಾಡಿ ಗಾಯದ ತೀವ್ರತೆ ಹೆಚ್ಚುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅವರಿಗೆ ವಿಶ್ರಾಂತಿ ನೀಡಲಾಗಿದೆ ಎಂದು ಸಿಎಸ್‌ಕೆ ತಂಡದ ಸಿಇಓ ಕಾಸಿ ವಿಶ್ವನಾಥನ್‌ ಮಾಧ್ಯಮಗಳಿಗೆ ಮಾಹಿತಿಯನ್ನು ನೀಡಿದ್ದಾರೆ.

ಸತತ ಸೋಲಿನ ನಂತರ ತಂಡದ ನಾಯಕತ್ವದಿಂದ ಹೊರಗುಳಿದ ಜಡೇಜಾ ಅವರ ಪಕ್ಕೆಲುಬಿನಲ್ಲಿ ನೋವು ಕಾಣಿಸಿಕೊಂಡಿದೆ. ಅವರು ಬೌಲಿಂಗ್ ಮತ್ತು ಬ್ಯಾಟಿಂಗ್ ಮಾಡುವಾಗ ನೋವು ಅನುಭವಿಸುತ್ತಿದ್ದರು. ಹಾಗಾಗಿ ಅವರಿಗೆ ವಿಶ್ರಾಂತಿ ನೀಡುವುದು ಒಳ್ಳೆಯದು ಎಂದು ನಾವು ಭಾವಿಸಿದ್ದೇವೆ. ನಾವು ಬಿಸಿಸಿಐಗೂ ತಿಳಿಸಿದ್ದೇವೆ” ಎಂದು ವಿಶ್ವನಾಥನ್ ಹೇಳಿದ್ದಾರೆ.

ಕಳೆದ ಭಾನುವಾರ (ಮೇ 8) ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಸಿಎಸ್‌ಕೆಯ ಕೊನೆಯ ಪಂದ್ಯವನ್ನು ಜಡೇಜಾ ತಪ್ಪಿಸಿಕೊಂಡಿದ್ದರು. ಗುರುವಾರ (ಮೇ 12) ವಾಂಖೆಡೆಯಲ್ಲಿ ಮುಂಬೈ ಇಂಡಿಯನ್ಸ್ ವಿರುದ್ಧ ಸಿಎಸ್‌ಕೆ ಪಂದ್ಯ ನಡೆಯಲಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡದ ನಾಯಕತ್ವದಿಂದ ಜಡೇಜಾ ಕೆಳಗೆ ಇಳಿದ ನಂತರದಲ್ಲಿ ಮಂಕಾದಂತೆ ಕಂಡು ಬಂದಿದ್ದರು. ಐಪಿಎಲ್‌ ಪಂದ್ಯಗಳಲ್ಲಿ ಜಡೇಜಾ ಹೆಚ್ಚು ಲವಲವಿಕೆಯಿಂದ ಇರಲಿಲ್ಲ. ಆದ್ರೀಗ ಗಾಯಗೊಂಡು ಐಪಿಎಲ್‌ ಟೂರ್ನಿಯಿಂದಲೇ ಹೊರ ನಡೆದಿದ್ದಾರೆ.

ಇದನ್ನೂ ಓದಿ : Suryakumar Yadav : ಐಪಿಎಲ್ 2022ರಿಂದ ಮುಂಬೈ ಇಂಡಿಯನ್ಸ್ ಖ್ಯಾತ ಆಟಗಾರ ಸೂರ್ಯ ಕುಮಾರ್‌ ಯಾದವ್‌ ಔಟ್‌

ಇದನ್ನೂ ಓದಿ : Gujarat Titans : ಟಾಟಾ ಐಪಿಎಲ್‌ 2022ರ ಫ್ಲೇ ಆಫ್‌ ಪ್ರವೇಶಿಸಿದ ಗುಜರಾತ್‌ ಟೈಟಾನ್ಸ್‌

CSK captain Ravindra Jadeja out from IPL 2022 remaining matches due to Injury

Comments are closed.