tomato flu High Alert : ಮಕ್ಕಳಿಗೆ ಟೊಮ್ಯಾಟೊ ಜ್ವರ, ಕರ್ನಾಟಕದಲ್ಲಿ ಹೈ ಅಲರ್ಟ್‌ : ಡಾ.ಸುಧಾಕರ್ ಸೂಚನೆ

ಬೆಂಗಳೂರು : ಕೊರೋನಾ ನಾಲ್ಕನೇ ಅಲೆಯ ಆತಂಕದಲ್ಲಿರೋವಾಗಲೇ ಮತ್ತೊಂದು ಆತಂಕ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳಿಗೆ ಕಾಡಲಾರಂಭಿಸಿದೆ. ಪುಟ್ಟ ಮಕ್ಕಳಲ್ಲಿ ಜ್ವರ ಕಾಣಿಸಿಕೊಂಡಿದ್ದು, ಜ್ವರದ ಜೊತೆಗೆ ಕಾಣಿಸಿಕೊಂಡಿರೋ ಕೆಂಪು ಕೆಂಪಾದ ಬೊಬ್ಬೆಗಳಿಂದ ಮಕ್ಕಳು ಪರದಾಡುವಂತಾಗಿದೆ. ಇದನ್ನು ತಜ್ಞರು ಟೊಮೆಟೋ ಜ್ವರ ಎಂದು ಗುರುತಿಸಿದ್ದು, ರಾಜ್ಯದಲ್ಲೂ ಎಚ್ಚರಿಕೆ (tomato flu High Alert) ವಹಿಸುವಂತೆ ಆರೋಗ್ಯ ಸಚಿವ ಡಾ.ಸುಧಾಕರ್ ಸೂಚಿಸಿದ್ದಾರೆ.

ದೇಶದ ಎಲ್ಲೆಡೆ ಪುಟ್ಟ ಮಕ್ಕಳಲ್ಲಿ ಟೊಮ್ಯಾಟೊ ಜ್ವರ ಆತಂಕ ಎದುರಾಗಿದೆ. ಕೇರಳದಲ್ಲಿ 80 ಕ್ಕೂ ಹೆಚ್ಚು ಪುಟ್ಟ ಮಕ್ಕಳಿಗೆ ಸೋಂಕು ಕಾಣಿಸಿಕೊಂಡಿದ್ದು, ಕೇರಳ ಗಡಿಭಾಗದ ಜಿಲ್ಲೆಗಳಲ್ಲಿ ಕಟ್ಟೆಚ್ಚರಕ್ಕೆ ಸೂಚನೆ ನೀಡಲಾಗಿದೆ. ಈ ಬಗ್ಗೆ ಮಾಹಿತಿ ನೀಡಿರೋ, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್, ಕೊರೊನಾಗೂ ಟೊಮ್ಯಾಟೊ ಫ್ಲೂಗೂ ಸಂಬಂಧವಿಲ್ಲ. ಟೊಮ್ಯಾಟೊ ಫ್ಲೂ ಈಗಾಗಲೇ ಇರುವ ಕಾಯಿಲೆ, ಆತಂಕ ಬೇಕಿಲ್ಲ.

ಕೇರಳದಿಂದ ಬರುವ ಪ್ರಯಾಣಿಕರ ಮೇಲೆ ನಿಗಾ ಇಡಲು ಸೂಚಿಸಲಾಗಿದೆ. ಮಕ್ಕಳ ಆರೋಗ್ಯದ ಬಗ್ಗೆ ನಿಗಾ ವಹಿಸಲು ಸೂಚನೆ ನೀಡಿದ್ದು, ಅಪರೂಪದ ವೈರಸ್ ರೋಗವಾಗಿರುವ ಟೊಮ್ಯಾಟೊ ಜ್ವರ ಕೇರಳ ರಾಜ್ಯದ ಅರ್ಯಂಕಾರು, ಅಂಚಲ್ ಹಾಗೂ ನೆಡುವತೂರ್ ನಲ್ಲಿ ಪತ್ತೆಯಾಗಿದೆ. ಸಾಮಾನ್ಯವಾಗಿ 5 ವರ್ಷ ವಯಸ್ಸಿನೊಳಗಿನ ಮಕ್ಕಳಲ್ಲಿ ಕಂಡುಬರುವ ಸಮಸ್ಯೆ ಇದು ಎಂದು ಸುಧಾಕರ್ ವಿವರಿಸಿದ್ದಾರೆ.

tomato flu High Alert : ಟೊಮ್ಯಾಟೋ ಜ್ವರದ ಲಕ್ಷಣಗಳು

  • ಚರ್ಮದ ತುರಿಕೆ, ಕೆಂಪಾಗುವುದು, ನೀರಡಿಕೆ ರೋಗ ಲಕ್ಷಣಗಳು
  • ತೀವ್ರ ಜ್ವರ, ಮೈ ಕೈ ನೋವು, ಕೀಲು ನೋವು, ಆಯಾಸ ಕೂಡ ಕಂಡುಬರುತ್ತದೆ
  • ಚರ್ಮದ ಮೇಲೆ‌ ಕೆಂಪು‌ ಗುಳ್ಳೆಗಳು ಕೂಡ ಉಂಟಾಗುತ್ತದೆ
  • ಕೇರಳ ಗಡಿ ಭಾಗದ ಜಿಲ್ಲೆಗಳಾದ ಮಂಗಳೂರು, ಉಡುಪಿ, ಕೊಡಗು, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಕಟ್ಟೆಚ್ಚರ
  • ಈ ಜಿಲ್ಲೆಗಳಿಗೆ ಕೇರಳದಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚು ನಿಗಾ ಇಡಲು ಸೂಚನೆ

ಆಸ್ಪತ್ರೆಗಳ ಹೊರರೋಗಿ ವಿಭಾಗಗಳಲ್ಲಿ ಈ ರೋಗ ಲಕ್ಷಣ ಕಂಡುಬರುವ ಮಕ್ಕಳ ಬಗ್ಗೆ ಕೂಡಲೇ ಮಾಹಿತಿ ನೀಡಲು ಆರೋಗ್ಯ ಇಲಾಖೆ ಸೂಚಿಸಿದ್ದು, ವಿಶೇಷವಾಗಿ ರಾಜ್ಯ ಸರ್ಕಾರ ಮಂಗಳೂರು,ಮಡಿಕೇರಿ ಹಾಗೂ ಚಾಮರಾಜನಗರದಲ್ಲಿ ಎಚ್ಚರಿಕೆ ವಹಿಸಲು ಡಿಎಚ್ಓಗಳಿಗೆ ಆರೋಗ್ಯ ಇಲಾಖೆ ಸೂಚಿಸಿದೆ.

ಟೊಮ್ಯಾಟೊ ಜ್ವರದ ಕೆಲವು ಪ್ರಮುಖ ಲಕ್ಷಣಗಳು

  • ವಿಪರೀತ ಜ್ವರ, ನಿರ್ಜಲೀಕರಣ, ದದ್ದುಗಳು,
  • ಚರ್ಮದ ತುರಿಕೆ, ಕೈ ಮತ್ತು ಕಾಲುಗಳ ಚರ್ಮದ ಬಣ್ಣವೂ ಬದಲು
  • ಗುಳ್ಳೆಗಳು, ಕಿಬ್ಬೊಟ್ಟೆಯ ಸೆಳೆತ, ವಾಕರಿಕೆ, ವಾಂತಿ
  • ಅತಿಸಾರ, ಸ್ರವಿಸುವ ಮೂಗು, ಕೆಮ್ಮು, ಸೀನು,
  • ಆಯಾಸ ಮತ್ತು ದೇಹದಲ್ಲಿ ನೋವು ಪ್ರಮುಖ ಲಕ್ಷಣಗಳಾಗಿವೆ

ಇದನ್ನೂ ಓದಿ : ಕಪ್ಪಗಿದ್ದೀಯಾ ಎಂದು ಪತ್ನಿಯನ್ನು ದೂರಿದ ಪತಿ : ಸ್ಯಾನಿಟೈಸರ್​​ ಸುರಿದುಕೊಂಡು ಪತ್ನಿ ಸೂಸೈಡ್​

ಇದನ್ನೂ ಓದಿ : Tomato flu : ಕೇರಳದಲ್ಲಿ ಟೊಮ್ಯಾಟೋ ಜ್ವರ : ಏನಿದರ ಲಕ್ಷಣ,ಚಿಕಿತ್ಸೆ ಹೇಗೆ: ಇಲ್ಲಿದೆ ಮಾಹಿತಿ

tomato flu High Alert Karnataka Health Minister Sudhakar

Comments are closed.