CWG : ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗಿಯಾಗಿದ್ದ ಶ್ರೀಲಂಕಾದ ಇಬ್ಬರು ಆಟಗಾರರು, ಓರ್ವ ಸಿಬ್ಬಂದಿ ನಾಪತ್ತೆ

ಬರ್ಮಿಂಗ್​​ಹ್ಯಾಮ್​ : CWG : ಬರ್ಮಿಂಗ್​ಹ್ಯಾಮ್​ನಲ್ಲಿ ನಡೆಯುತ್ತಿರುವ 2022ನೇ ಸಾಲಿನ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ವಿವಿಧ ದೇಶಗಳ ಪದಕದ ಬೇಟೆ ಮುಂದುವರಿದಿದೆ. ಕಾಮನ್​ವೆಲ್ತ್​ ಗೇಮ್ಸ್​​ ಸ್ಪರ್ಧೆಯಲ್ಲಿ ಭಾಗಿಯಾಗಿದ್ದ ಆಟಗಾರರ ಪೈಕಿ ಇಬ್ಬರು ಅಥ್ಲೀಟ್​ಗಳು ಹಾಗೂ ಓರ್ವ ಸಿಬ್ಬಂದಿ ಕ್ರೀಡಾಗ್ರಾಮದಿಂದ ನಾಪತ್ತೆಯಾಗಿದ್ದಾರೆ. ಈ ಬೆಳವಣಿಗೆ ಬೆಳಕಿಗೆ ಬಂದ ಬಳಿಕ ಕಾಮನ್​ವೆಲ್ತ್​ ಗೇಮ್ಸ್​ನಲ್ಲಿ ಭಾಗಿಯಾಗಿರುವ ಆಟಗಾರರಿಗೆ ಪಾಸ್​ಪೋರ್ಟ್​ಗಳನ್ನು ಸಲ್ಲಿಸುವಂತೆ ಶ್ರೀಲಂಕಾದ ಅಧಿಕಾರಿಗಳು ಸೂಚನೆ ನೀಡಿದ್ದಾರೆ.


ಶ್ರೀಲಂಕಾ ದೇಶದಲ್ಲಿ ಉಂಟಾಗಿರುವ ಆರ್ಥಿಕ ಬಿಕ್ಕಟ್ಟಿನ ಪರಿಸ್ಥಿತಿ ಇದೀಗ ಜಗಜ್ಜಾಹಿರವಾಗಿದೆ. ಇಂತಹ ಕಠಿಣ ಆರ್ಥಿಕ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಶ್ರೀಲಂಕಾ 51 ಅಧಿಕಾರಿಗಳು ಸೇರಿದಂತೆ 161 ಮಂದಿ ಸದಸ್ಯರ ತಂಡವನ್ನು ಬರ್ಮಿಂಗ್​ಹ್ಯಾಮ್​ಗೆ ಕಳುಹಿಸಿಕೊಟ್ಟಿದೆ.


ಕಾಮನ್​ವೆಲ್ತ್​ ಗೇಮ್ಸ್​ ಫೆಡರೇಶನ್​ ಹಾಗೂ ಶ್ರೀಲಂಕಾ ಕ್ರಿಕೆಟ್ ತಂಡವು ಅಥ್ಲೀಟ್​ಗಳಿಗೆ ಈ ಸ್ಪರ್ಧೆಯಲ್ಲಿ ಭಾಗಿಯಾಗಲು ಧನಸಹಾಯವನ್ನು ಮಾಡಿದೆ. ಈ ಆಟಗಾರರ ಪೈಕಿ ಓರ್ವ ಜುಡೋ ಪಟು, ಓರ್ವ ಕುಸ್ತಿಪಟು ಹಾಗೂ ಜುಡೋ ಮ್ಯಾನೇಜರ್​ ನಾಪತ್ತೆಯಾಗಿದ್ದಾರೆ ಎಂದು ಶ್ರೀಲಂಕಾ ತಂಡದ ಗೋಬಿನಾಥ್​ ಶಿವರಾಜ ಅಧಿಕೃತ ಮಾಹಿತಿಯನ್ನು ನೀಡಿದ್ದಾರೆ.


ಈ ಘಟನೆಯ ಬಳಿಕ ಕ್ರೀಡಾ ಗ್ರಾಮದಲ್ಲಿರುವ ಎಲ್ಲಾ ನಮ್ಮ ಅಧಿಕಾರಿಗಳು ಹಾಗೂ ಕ್ರೀಡಾಪಟುಗಳಿಗೆ ಪಾಸ್​​ಪೋರ್ಟ್​ಗಳನ್ನು ಸಲ್ಲಿಸುವಂತೆ ಕೇಳಿದ್ದೇವೆ. ನಾಪತ್ತೆಯಾದ ಕ್ರೀಡಾಪಟುಗಳು ಹಾಗೂ ಅಧಿಕಾರಿಯ ಪತ್ತೆಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಮೂವರು ಬ್ರಿಟನ್​ನಿಂದ ದಾಟಿ ಹೋಗಲು ಸಾಧ್ಯವಿಲ್ಲ. ಈ ರೀತಿಯ ಘಟನೆ ನಡೆದಿರುವುದು ನಿಜಕ್ಕೂ ದುರದೃಷ್ಟಕರ ಎಂದು ಸಿವಾರ್ಜಾ ಹೇಳಿದ್ದಾರೆ.


ಶ್ರೀಲಂಕಾದ ಜುಡೋ ತಂಡವು ಮೂವರು ಪುರುಷ ಹಾಗೂ ಇಬ್ಬರು ಮಹಿಳಾ ಆಟಗಾರರನ್ನು ಹೊಂದಿದೆ. ವರದಿಗಳ ಪ್ರಕಾರ ಕಾಣೆಯಾದ ಕ್ರೀಡಾಪಟು ಮಹಿಳೆ ಎಂದು ತಿಳಿದು ಬಂದಿದೆ. ಜುಡೋ ಪಂದ್ಯವು ಬರ್ಮಿಂಗ್​ಹ್ಯಾಮ್​ನಿಂದ 30 ಗಂಟೆ ಪ್ರಯಾಣದ ದೂರದಲ್ಲಿರುವ ಕವಂಟ್ರಿ ಅರೇನಾದಲ್ಲಿ ಆಯೋಜನೆಗೊಂಡಿತ್ತು.

ಇದನ್ನು ಓದಿ : ಅನಂತ ಕುಮಾರ್ ಹೆಗಡೆ ಸಿಎಂ, ಯತ್ನಾಳ್ ಹೋಂ ಮಿನಿಸ್ಟರ್ : ಸದ್ದಿಲ್ಲದೇ ರೂಪುಗೊಳ್ತಿದೆ ಸ್ಟ್ರಾಂಗ್ ಜನಾಭಿಪ್ರಾಯ

ಇದನ್ನೂ ಓದಿ : Asia Cup 2022 : ಏಷ್ಯಾಕಪ್ ವೇಳಾಪಟ್ಟಿ ಪ್ರಕಟ : ಟೂರ್ನಿಯ ಫಾರ್ಮ್ಯಾಟ್, ಭಾರತದಲ್ಲಿ Live Streaming, ಒಂದೇ ಕ್ಲಿಕ್‌ನಲ್ಲಿ ಕಂಪ್ಲೀಟ್ ಡೀಟೇಲ್ಸ್

CWG: Two Sri Lankan athletes, one official go missing; police investigating

Comments are closed.