Dabang Delhi : ಹಾಲಿ ಚಾಂಪಿಯನ್ಸ್ ಡೆಲ್ಲಿಗೆ 8ನೇ ಸೋಲು, ಅಂಕಪಟ್ಟಿಯಲ್ಲಿ 10ನೇ ಸ್ಥಾನಕ್ಕೆ ಕುಸಿತ

ಪುಣೆ : ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ (Dabang Delhi) ತಂಡ ಪ್ರೊ ಕಬಡ್ಡಿ ಲೀಗ್ 9ನೇ ಆವೃತ್ತಿಯ (Pro Kabaddi League) ಟೂರ್ನಿಯಲ್ಲಿ 8ನೇ ಸೋಲು ಅನುಭವಿಸಿದೆ. ಪುಣೆಯ ಬಾಳೇವಾಡಿಯಲ್ಲಿರುವ ಛತ್ರಪತಿ ಶಿವಾಜಿ ಸ್ಪೋರ್ಟ್ಸ್ ಕಾಂಪ್ಲೆಕ್ಸ್’ನಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಯು.ಪಿ ಯೋಧಾ ಪಡೆ ದಬಾಂಗ್ ಡೆಲ್ಲಿ ಕೆ.ಸಿ ತಂಡವನ್ನು 50-31ರ ಅಂತರದಲ್ಲಿ ಬಗ್ಗು ಬಡಿದು, 7ನೇ ಗೆಲುವಿನೊಂದಿಗೆ ಒಟ್ಟು 45 ಅಂಕ ಸಂಪಾದಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನದಲ್ಲಿ ಮುಂದುವರಿಯಿತು.

ಮತ್ತೊಂದೆಡೆ ಆರಂಭದಲ್ಲಿ ಸತತ ಐದು ಪಂದ್ಯಗಳನ್ನು ಗೆದ್ದು ಅಬ್ಬರಿಸಿದ್ದ ದಬಾಂಗ್ ಡೆಲ್ಲಿ ನಂತರ ಆಡಿದ 9 ಪಂದ್ಯಗಳಲ್ಲಿ 8 ಸೋಲುಗಳನ್ನು ಕಾಣುವುದರೊಂದಿದೆ ಪಾಯಿಂಟ್ ಪಟ್ಟಿಯಲ್ಲಿ 10ನೇ ಸ್ಥಾನಕ್ಕೆ (ಒಟ್ಟು 35 ಅಂಕ) ಕುಸಿದಿದೆ. ಕಳೆದ ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ (32-57) 25 ಅಂಕಗಳ ಅಂತರದಲ್ಲಿ ಹೀನಾಯ ಸೋಲು ಕಂಡಿದ್ದ ದಬಾಂಗ್ ಡೆಲ್ಲಿ, ಬುಧವಾರ ಯು.ಪಿ ಯೋಧಾ ವಿರುದ್ಧ 19 ಅಂಕಗಳ ಅಂತರದಲ್ಲಿ (31-50) ಮತ್ತೊಂದು ಹೀನಾಯ ಸೋಲುಂಡಿತು.

ಯು.ಪಿ ಯೋಧಾ ಪರ ಸ್ಟಾರ್ ರೇಡರ್ ಪ್ರದೀಪ್ ನರ್ವಾಲ್ ಭರ್ಜರಿ 22 ರೇಡ್ ಪಾಯಿಂಟ್ಸ್ ಗಳಿಸಿ ದಬಾಂಗ್ ಡೆಲ್ಲಿ ಸದ್ದಡಗಿಸಿದರು. ಮತ್ತೊಂದೆಡ ದಬಾಂಗ್ ಡೆಲ್ಲಿ ನಾಯಕ ನವೀನ್ ಕುಮಾರ್ ಕೇವಲ 8 ಅಂಕ ಗಳಿಸಲಷ್ಟೇ ಶಕ್ತರಾದರು. ಬುಧವಾರ ನಡೆದ ಪಾಟ್ನಾ ಪೈರೇಟ್ಸ್ ಮತ್ತು ತಮಿಳ್ ತಲೈವಾಸ್ ನಡುವಿನ 2ನೇ ಪಂದ್ಯ 33-33ರಲ್ಲಿ ರೋಚಕ ಟೈನಲ್ಲಿ ಅಂತ್ಯಗೊಂಡಿತು. ಗುರುವಾರ ಪ್ರೊ ಕಬಡ್ಡಿ ಲೀಗ್’ನಲ್ಲಿ ವಿರಾಮದ ದಿನವಾಗಿದ್ದು, ಶುಕ್ರವಾರದಿಂದ ಪಂದ್ಯಗಳು ಹೈದರಾಬಾದ್’ನ ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಆರಂಭವಾಗಲಿವೆ.

ಪ್ರೊ ಕಬಡ್ಡಿ ಲೀಗ್-9: ಶುಕ್ರವಾರದ ಪಂದ್ಯಗಳು

  1. ಪುಣೇರಿ ಪಲ್ಟನ್ Vs ಹರ್ಯಾಣ ಸ್ಟೀಲರ್ಸ್
  2. ಬೆಂಗಾಲ್ ವಾರಿಯರ್ಸ್ Vs ತೆಲುಗು ಟೈಟನ್ಸ್
  3. ಗುಜರಾತ್ ಜೈಂಟ್ಸ್ Vs ಬೆಂಗಳೂರು ಬುಲ್ಸ್

ಇದನ್ನೂ ಓದಿ : Bangalore Bulls vs Telugu Titans 2022 : ಹ್ಯಾಟ್ರಿಕ್ ಜಯದೊಂದಿಗೆ ಅರ್ಧಶತಕ ಬಾರಿಸಿದ ಬುಲ್ಸ್, ಅಗ್ರಸ್ಥಾನ ಮತ್ತೆ ಕೈವಶ

ಇದನ್ನೂ ಓದಿ : Pro Kabaddi League: ದಕ್ಷಿಣ ಭಾರತ ಡರ್ಬಿಯಲ್ಲಿ ತಲೈವಾಸ್ ವಿರುದ್ಧ ಗೆದ್ದರೆ ಬೆಂಗಳೂರು ಬುಲ್ಸ್ ಟೇಬಲ್ ಟಾಪರ್

ಇದನ್ನೂ ಓದಿ : Pro Kabaddi League : ಬೆಂಗಾಲ್ ವಾರಿಯರ್ಸ್ ವಿರುದ್ಧ ಗೆದ್ದ ಪುಣೇರಿ ಪಲ್ಟನ್ ಮತ್ತೆ ಪಾಯಿಂಟ್ ಪಟ್ಟಿಯಲ್ಲಿ ನಂ.1

ಸ್ಥಳ: ಗಚ್ಚಿಬೌಲಿ ಒಳಾಂಗಣ ಕ್ರೀಡಾಂಗಣ, ಹೈದರಾಬಾದ್
ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್ವರ್ಕ್
ಲೈವ್ ಸ್ಟ್ರೀಮಿಂಗ್: ಡಿಸ್ನಿ+ಹಾಟ್ ಸ್ಟಾರ್

Dabang Delhi: 8th defeat for defending champions Delhi, fall to 10th place in the points table

Comments are closed.