India Vs NZ T20 Series: ನಾಳೆಯಿಂದ ಭಾರತ Vs ನ್ಯೂಜಿಲೆಂಜ್ ಟಿ20 ಸರಣಿ: ಒಂದೇ ಕ್ಲಿಕ್‌ನಲ್ಲಿ Live ಟೆಲಿಕಾಸ್ಟ್, ಪ್ಲೇಯಿಂಗ್ XI ಸಹಿತ ಕಂಪ್ಲೀಟ್ ಮಾಹಿತಿ

ವೆಲ್ಲಿಂಗ್ಟನ್: (India Vs NZ T20 Series) ಪ್ರವಾಸಿ ಭಾರತ ಮತ್ತು ಆತಿಥೇಯ ನ್ಯೂಜಿಲೆಂಡ್ ತಂಡಗಳ ನಡುವಿನ ಮೂರು ಪಂದ್ಯಗಳ ಟಿ20 ಸರಣಿ ಶುಕ್ರವಾರ ಆರಂಭವಾಗಲಿದ್ದು, ಸರಣಿಯ ಮೊದಲ ಪಂದ್ಯ ವೆಲ್ಲಿಂಗ್ಟನ್’ನಲ್ಲಿ ನಡೆಯಲಿದೆ.

ಎರಡೂ ತಂಡಗಳು ಆಸ್ಟ್ರೇಲಿಯಾದಲ್ಲಿ ನಡೆದ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯ ಸೆಮಿಫೈನಲ್’ನಲ್ಲಿ ಸೋಲುಂಡು ಟೂರ್ನಿಯಿಂದ ಹೊರ ಬಿದ್ದಿದ್ದವು. ಇದೀಗ ವಿಶ್ವಕಪ್ ಸೆಮಿಫೈನಲಿಸ್ಟ್’ಗಳ ನಡುವಿನ ಟಿ20 ಸರಣಿ(India Vs NZ T20 Series) ಭಾರೀ ಕುತೂಹಲ ಕೆರಳಿಸಿದೆ.

ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಉಪನಾಯಕ ಕೆ.ಎಲ್ ರಾಹುಲ್ ಅವರಿಗೆ ನ್ಯೂಜಿಲೆಂಡ್ ಪ್ರವಾಸಕ್ಕೆ ವಿಶ್ರಾಂತಿ ನೀಡಲಾಗಿದ್ದು, ಟಿ20 ಸರಣಿಯಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಟೀಮ್ ಇಂಡಿಯಾವನ್ನು ಮುನ್ನಡೆಸಲಿದ್ದಾರೆ. ಕೋಚ್ ರಾಹುಲ್ ದ್ರಾವಿಡ್ ಕೂಡ ನ್ಯೂಜಿಲೆಂಡ್ ಪ್ರವಾಸದಿಂದ ಹೊರಗುಳಿದಿರುವ ಕಾರಣ, ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥ ವಿವಿಎಸ್ ಲಕ್ಷ್ಮಣ್ (National Cricket Academy chief VVS Laxman) ಟೀಮ್ ಇಂಡಿಯಾ ಕೋಚ್ ಹುದ್ದೆ ವಹಿಸಿಕೊಂಡಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಟಿ20 ಹಾಗೂ ಏಕದಿನ ಸರಣಿಯ ನೇರಪ್ರಸಾರ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್ (DD Sports) ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಸ್ಟಾರ್ ಸ್ಪೋರ್ಟ್ಸ್ ಅಥವಾ ಸೋನಿ ನೆಟ್ವರ್ಕ್ ನೇರಪ್ರಸಾರದ ಹಕ್ಕನ್ನು ಪಡೆದಿರದ ಕಾರಣ ಭಾರತದಲ್ಲಿ ಡಿಡಿ ಸ್ಪೋರ್ಟ್ಸ್’ನಲ್ಲಿ ಮಾತ್ರ ಪಂದ್ಯಗಳನ್ನು ವೀಕ್ಷಿಸಬಹುದಾಗಿದೆ.

ಇದನ್ನೂ ಓದಿ : India vs New Zeeland : “ಮೊಸಳೆ ಬೈಕ್”ನಲ್ಲಿ ಬಂದು ಟ್ರೋಫಿ ಅನಾವರಣ ಮಾಡಿದ ಪಾಂಡ್ಯ, ವಿಲಿಯಮ್ಸನ್

ಇದನ್ನೂ ಓದಿ : RCB releases Karnataka stars : ಇಬ್ಬರೂ ಕನ್ನಡಿಗರನ್ನು ಕೈಬಿಟ್ಟ RCB, ಕರ್ನಾಟಕದ ಆಟಗಾರರ ಮೇಲೆ ಐಪಿಎಲ್ ಫ್ರಾಂಚೈಸಿಗಳ ನಿರಾಸಕ್ತಿ

ಇದನ್ನೂ ಓದಿ : Bangalore Bulls vs Telugu Titans 2022 : ಹ್ಯಾಟ್ರಿಕ್ ಜಯದೊಂದಿಗೆ ಅರ್ಧಶತಕ ಬಾರಿಸಿದ ಬುಲ್ಸ್, ಅಗ್ರಸ್ಥಾನ ಮತ್ತೆ ಕೈವಶ

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
(India Vs New Zeeland T20 series):
ಹಾರ್ದಿಕ್ ಪಾಂಡ್ಯ (ನಾಯಕ), ಶುಭಮನ್ ಗಿಲ್, ದೀಪಕ್ ಹೂಡ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ಉಪನಾಯಕ, ವಿಕೆಟ್ ಕೀಪರ್), ವಾಷಿಂಗ್ಟನ್ ಸುಂದರ್, ಯುಜ್ವೇಂದ್ರ ಚಹಲ್, ಅರ್ಷದೀಪ್ ಸಿಂಗ್, ಹರ್ಷಲ್ ಪಟೇಲ್/ಮೊಹಮ್ಮದ್ ಸಿರಾಜ್, ಭುವನೇಶ್ವರ್ ಕುಮಾರ್.

ಭಾರತ Vs ನ್ಯೂಜಿಲೆಂಡ್ ಮೊದಲ ಟಿ20
ಪಂದ್ಯ ಆರಂಭ: ಮಧ್ಯಾಹ್ನ 12.00 (ಭಾರತೀಯ ಕಾಲಮಾನ)
ಸ್ಥಳ: ಸ್ಕೈ ಸ್ಟೇಡಿಯಂ, ವೆಲ್ಲಿಂಗ್ಟನ್ (Sky stadium, Wellington)
ನೇರ ಪ್ರಸಾರ: ಡಿಡಿ ಸ್ಪೋರ್ಟ್ಸ್

ಭಾರತ Vs ನ್ಯೂಜಿಲೆಂಡ್ ಟಿ20 ಸರಣಿಯ ವೇಳಾಪಟ್ಟಿ
ಮೊದಲ ಟಿ20: ನವೆಂಬರ್ 18 (ವೆಲ್ಲಿಂಗ್ಟನ್)
2ನೇ ಟಿ20: ನವೆಂಬರ್ 20 (ಮೌಂಟ್ ಮೌಂಗ್’ನ್ಯುಯ್)
3ನೇ ಟಿ20: ನವೆಂಬರ್ 22 (ನೇಪಿಯರ್)

(India Vs NZ T20 Series) The three-match T20 series between the visiting India and the host New Zealand teams will begin on Friday and the first match of the series will be played in Wellington.

Comments are closed.