Duleep Trophy 2023 : ದುಲೀಪ್ ಟ್ರೋಫಿಯಲ್ಲಿ ಕನ್ನಡಿಗರ ಪರಾಕ್ರಮ, ಫೈನಲ್’ಗೆ ಲಗ್ಗೆ ಇಟ್ಟ ದಕ್ಷಿಣ ವಲಯ

ಬೆಂಗಳೂರು: Duleep Trophy 2023 : ಕನ್ನಡಿಗರ ಅಮೋಘ ಪ್ರದರ್ಶನದ ಬಲದಿಂದ ದಕ್ಷಿಣ ವಲಯ ತಂಡ ದುಲೀಪ್ ಟ್ರೋಫಿ ಟೂರ್ನಿಯಲ್ಲಿ (Duleep Trophy 2023) ಫೈನಲ್’ಗೆ ಲಗ್ಗೆ ಇಟ್ಟಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ರೋಚಕ ಸೆಮಿಫೈನಲ್ ಪಂದ್ಯದಲ್ಲಿ ದಕ್ಷಿಣ ವಲಯ (South Zone) ತಂಡ, ಉತ್ತರ ವಲಯ ವಿರುದ್ಧ 2 ವಿಕೆಟ್’ಗಳ ರೋಚಕ ಗೆಲುವು ಸಾಧಿಸಿತು. ಬೌಲರ್’ಗಳ ಪಾಲಿನ ಸ್ವರ್ಗವಾಗಿದ್ದ ಪಿಚ್’ನಲ್ಲಿ ಗೆಲುವಿಗೆ 215 ರನ್’ಗಳ ಗುರಿ ಬೆನ್ನಟ್ಟಿದ ದಕ್ಷಿಣ ವಲಯ 8 ವಿಕೆಟ್ ನಷ್ಟಕ್ಕೆ 219 ರನ್ ಗಳಿಸಿ ಜಯಭೇರಿ ಬಾರಿಸಿತು.

ದಕ್ಷಿಣ ವಲಯ ತಂಡದ 2ನೇ ಇನ್ನಿಂಗ್ಸ್’ನಲ್ಲಿ ಗುರಿ ಬೆನ್ನಟ್ಟುವ ವೇಳೆ ಕನ್ನಡಿಗ ಮಯಾಂಕ್ ಅಗರ್ವಾಲ್ (Mayank Agarwal) ಅತ್ಯಮೂಲ್ಯ 54 ರನ್ (57 ಎಸೆತ) ಗಳಿಸಿ ಗೆಲುವಿನ ರೂವಾರಿಯಾಗಿ ಮೂಡಿ ಬಂದರು. ಪ್ರಥಮ ಇನ್ನಿಂಗ್ಸ್’ನಲ್ಲೂ ಮಿಂಚಿದ್ದ ಮಯಾಂಕ್ ಆಕರ್ಷಕ 76 ರನ್ ಗಳಿಸಿದ್ದರು. ನಾಯಕ ಹನುಮ ವಿಹಾರಿ (43 ರನ್), ವಿಕೆಟ್ ಕೀಪರ್ ಕಿರಿ ಭುಯಿ (34 ರನ್), ತಿಲಕ್ ವರ್ಮಾ (25 ರನ್), ಸಾಯಿ ಕಿಶೋರ್ (ಅಜೇಯ 15 ರನ್) ಕಿರುಕಾಣಿಕೆಗಳ ಮೂಲಕ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.

Duleep Trophy 2023 ಮಿಂಚಿದ ಕನ್ನಡಿಗರ ಆಟಗಾರರು :

ಬ್ಯಾಟಿಂಗ್’ನಲ್ಲಿ ಮಯಾಂಕ್ ಅಗರ್ವಾಲ್ ಮಿಂಚಿದರೆ, ಬೌಲಿಂಗ್’ನಲ್ಲಿ ಕರ್ನಾಟಕದ ಯುವ ಮಧ್ಯಮ ವೇಗಿಗಳಾದ ವಿದ್ವತ್ ಕಾವೇರಪ್ಪ ಮತ್ತು ವೈಶಾಖ್ ವಿಜಯ್ ಕುಮಾರ್ ಅಮೋಘ ಪ್ರದರ್ಶನ ತೋರಿ ದಕ್ಷಿಣ ವಲಯ ತಂಡದ ಗೆಲುವಿಗೆ ಕಾರಣರಾದರು. ಕೊಡಗಿನ ಕಲಿ ವಿದ್ವತ್ ಕಾವೇರಪ್ಪ ಪ್ರಥಮ ಇನ್ನಿಂಗ್ಸ್’ನಲ್ಲಿ 28 ರನ್ನಿಗೆ 5 ವಿಕೆಟ್ ಉರುಳಿಸಿದ್ರೆ, ದ್ವಿತೀಯ ಇನ್ನಿಂಗ್ಸ್’ನಲ್ಲಿ ವೈಶಾಖ್ ವಿಜಯ್ ಕುಮಾರ್ 76 ರನ್ನಿಗೆ 5 ವಿಕೆಟ್ ಉರುಳಿಸಿದರು.

ಬೆಂಗಳೂರಿನ ಆಲೂರು ಮೈದಾನದಲ್ಲಿ ನಡೆದ ಮತ್ತೊಂದು ಸೆಮಿಫೈನಲ್’ನಲ್ಲಿ ಕೇಂದ್ರ ವಲಯ ವಿರುದ್ಧ ಇನ್ನಿಂಗ್ಸ್ ಮುನ್ನಡೆ ಆಧಾರದಲ್ಲಿ ಪಶ್ಚಿಮ ವಲಯದ ತಂಡ ಫೈನಲ್ ಪ್ರವೇಶಿಸಿದೆ. ಫೈನಲ್ ಪಂದ್ಯ ಜುಲೈ 12ರಿಂದ 16ರವರೆಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದ್ದು, ದಕ್ಷಿಣ ವಲಯ ಮತ್ತು ಪಶ್ಚಿಮ ವಲಯ ತಂಡಗಳು ಮುಖಾಮುಖಿಯಾಗಲಿವೆ.

ಇದನ್ನೂ ಓದಿ : India tour of West Indies : ಪ್ರಥಮ ಟೆಸ್ಟ್ ಪಂದ್ಯಕ್ಕೆ ಡೊಮಿನಿಕಾ ತಲುಪಿದ ಟೀಮ್ ಇಂಡಿಯಾ, ಬ್ಲ್ಯಾಕ್ ಡ್ರೆಸ್‌ನಲ್ಲಿ ಮಿಂಚಿದ ಆಟಗಾರರು

ಇದನ್ನೂ ಓದಿ : Anil Kumble : ನಾಗರಹೊಳೆ ನ್ಯಾಷನಲ್ ಪಾರ್ಕ್’ನಲ್ಲಿ ಪತ್ನಿ-ಪುತ್ರನ ಜೊತೆ ಜಂಬೋ ಸಫಾರಿ

Comments are closed.