Exclusive: ಆಲೂರಿನಲ್ಲಿ ನಾಳೆಯಿಂದ ಟೀಮ್ ಇಂಡಿಯಾದ ಏಷ್ಯಾ ಕಪ್ ಟ್ರೈನಿಂಗ್ ಕ್ಯಾಂಪ್ ಶುರು

ಬೆಂಗಳೂರು: ಏಷ್ಯಾ ಕಪ್ ಟೂರ್ನಿಗೆ (Asia Cup 2023) ಸಜ್ಜಾಗುತ್ತಿರುವ ಟೀಮ್ ಇಂಡಿಯಾದ ಟ್ರೈನಿಂಗ್ ಕ್ಯಾಂಪ್ ಬೆಂಗಳೂರಿನ ಹೊರವಲಯದಲ್ಲಿರುವ ಆಲೂರಿನಲ್ಲಿ ನಾಳೆ (ಗುರುವಾರ) ಆರಂಭವಾಗಲಿದೆ.

ಆಲೂರಿನಲ್ಲಿರುವ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಕ್ರೀಡಾಂಗಣದಲ್ಲಿ ನಡೆಯಲಿರುವ ಅಭ್ಯಾಸ ಶಿಬಿರದಲ್ಲಿ ಏಷ್ಯಾ ಕಪ್ ಟೂರ್ನಿಗೆ ಆಯ್ಕೆಯಾಗಿರುವ ಟೀಮ್ ಇಂಡಿಯಾದ ಎಲ್ಲಾ ಆಟಗಾರರು ಭಾಗಿಯಾಗಲಿದ್ದಾರೆ. ಟ್ರೈನಿಂಗ್ ಕ್ಯಾಂಪ್ ಗುರುವಾರ ಆರಂಭವಾಗಲಿದ್ದು, ಆಗಸ್ಟ್ 29ರವರೆಗೆ ನಡೆಯಲಿದೆ. ಭಾರತ ತಂಡದ ಆಟಗಾರರು ಬುಧವಾರ ಬೆಂಗಳೂರಿಗೆ ಆಗಮಿಸಲಿದ್ದಾರೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಆಡುತ್ತಿರುವ ಜಸ್ಪ್ರೀತ್ ಬುಮ್ರಾ, ಪ್ರಸಿದ್ಧ್ ಕೃಷ್ಣ ಮತ್ತು ಸಂಜು ಸ್ಯಾಮ್ಸನ್ ಮೂರು ದಿನಗಳ ಒಳಗೆ ಬೆಂಗಳೂರಿಗೆ ಆಗಮಿಸಿ ಅಭ್ಯಾಸ ಶಿಬಿರವನ್ನು ಸೇರಿಕೊಳ್ಳಲಿದ್ದಾರೆ. ಭಾರತ ಮತ್ತು ಐರ್ಲೆಂಡ್ ನಡುವಿನ 3 ಪಂದ್ಯಗಳ ಟಿ20 ಸರಣಿಯ ಅಂತಿಮ ಪಂದ್ಯ ಇಂದು ನಡೆಯಲಿದೆ.

ಭಾರತ ತಂಡ ಪ್ರಧಾನ ತರಬೇತುದಾರ ರಾಹುಲ್ ದ್ರಾವಿಡ್ ಅವರ ಗರಡಿಯಲ್ಲಿ ಟೀಮ್ ಇಂಡಿಯಾ ಆಟಗಾರರು ಅಭ್ಯಾಸ ನಡೆಸಲಿದ್ದಾರೆ. ಐದು ದಿನಗಳ ಅಭ್ಯಾಸ ಶಿಬಿರದ ನಂತರ ಭಾರತ ತಂಡದ ಆಟಗಾರರು ಆಗಸ್ಟ್ 30ರಂದು ಬೆಂಗಳೂರಿನಿಂದ ಶ್ರೀಲಂಕಾಗೆ ಪ್ರಯಾಣ ಬೆಳೆಸಲಿದ್ದಾರೆ. ಏಷ್ಯಾ ಕಪ್ ಟೂರ್ನಿ ಆಗಸ್ಟ್ 31ರಂದು ಶ್ರೀಲಂಕಾದಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್ 2ರಂದು ಶ್ರೀಲಂಕಾದ ಕ್ಯಾಂಡಿಯಲ್ಲಿ ನಡೆಯಲಿರುವ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಭಾರತ ತಂಡ ಟೂರ್ನಿಯಲ್ಲಿ ತನ್ನ ಅಭಿಯಾನ ಆರಂಭಿಸಲಿದೆ. ಇದನ್ನೂ ಓದಿ : Heath Streak passes away : ಜಿಂಬಾಬ್ವೆ ಕ್ರಿಕೆಟ್ ತಂಡದ ಮಾಜಿ ನಾಯಕ ಹೀತ್ ಸ್ಟ್ರೀಕ್ ಇನ್ನಿಲ್ಲ

ಏಷ್ಯಾ ಕಪ್ ಟೂರ್ನಿ ಭಾರತ ತಂಡ ಹೀಗಿದೆ (Team India for Asia Cup 2023)
ರೋಹಿತ್ ಶರ್ಮಾ (ನಾಯಕ), ಶುಭಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆ.ಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜ, ಜಸ್ಪ್ರೀತ್ ಬುಮ್ರಾ, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಇಶಾನ್ ಕಿಶನ್, ಶಾರ್ದೂಲ್ ಠಾಕೂರ್, ಅಕ್ಷರ್ ಪಟೇಲ್, ಸೂರ್ಯಕುಮಾರ್ ಯಾದವ್, ತಿಲಕ್ ವರ್ಮಾ, ಪ್ರಸಿದ್ಧ್ ಕೃಷ್ಣ, (ಸಂಜು ಸ್ಯಾಮ್ಸನ್, ಮೀಸಲು ಆಟಗಾರ).

ಏಷ್ಯಾ ಕಪ್ 2023 ಟೂರ್ನಿಯ ಲೀಗ್ ಪಂದ್ಯಗಳ ವೇಳಾಪಟ್ಟಿ (Asia Cup 2023 schedule)
ಆಗಸ್ಟ್ 30: ಪಾಕಿಸ್ತಾನ Vs ನೇಪಾಳ (ಬೆಳಗ್ಗೆ 10ಕ್ಕೆ, ಮುಲ್ತಾನ್)
ಆಗಸ್ಟ್ 31: ಶ್ರೀಲಂಕಾ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 2: ಭಾರತ Vs ಪಾಕಿಸ್ತಾನ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 3: ಅಫ್ಘಾನಿಸ್ತಾನ Vs ಬಾಂಗ್ಲಾದೇಶ (ಬೆಳಗ್ಗೆ 9.30ಕ್ಕೆ, ಲಾಹೋರ್)
ಸೆಪ್ಟೆಂಬರ್ 4: ಭಾರತ Vs ನೇಪಾಳ (ಬೆಳಗ್ಗೆ 9.30ಕ್ಕೆ, ಪಲ್ಲೆಕೆಲೆ)
ಸೆಪ್ಟೆಂಬರ್ 5: ಅಫ್ಘಾನಿಸ್ತಾನ Vs ಶ್ರೀಲಂಕಾ (ಬೆಳಗ್ಗೆ 9.30ಕ್ಕೆ, ಲಾಹೋರ್).

Exclusive: Team India’s Asia Cup training camp starts tomorrow in Alur

Comments are closed.