Faf du Plessis : ಫೀಲ್ಡಿಂಗ್ ಮಾಡುವಾಗ ಆಟಗಾರನಿಗೆ ಢಿಕ್ಕಿ : ಜ್ಞಾಪಕ ಶಕ್ತಿಯನ್ನೇ ಕಳೆದುಕೊಂಡ ಡು ಪ್ಲೆ ಸಿಸ್

ದುಬೈ : ಫೀಲ್ಡಿಂಗ್ ಮಾಡುವ ವೇಳೆಯಲ್ಲಿ ಸಹ ಆಟಗಾರನಿಗೆ ಢಿಕ್ಕಿ ಹೊಡೆದು ಆಸ್ಪತ್ರೆಗೆ ದಾಖಲಾಗಿದ್ದ ದಕ್ಷಿಣ ಆಫ್ರಿಕಾ ತಂಡದ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ ನೆನೆಪಿನ ಶಕ್ತಿ ಕಳೆದುಕೊಂಡಿದ್ದಾರೆ‌.

ಪಾಕಿಸ್ತಾನ ಸೂಪರ್ ಲೀಗ್ ಪಂದ್ಯದಲ್ಲಿ ಪೇಶಾವರ ತಂಡದ ವಿರುದ್ಧದ ಪಂದ್ಯದಲ್ಲಿ ಡು ಪ್ಲೆಸಿಸ್ ಅವರು  ಕ್ವೆಟ್ಟಾ ಗ್ಲಾಡಿಯೇಟರ್ಸ್ ಪರವಾಗಿ ಆಡುತ್ತಿದ್ದರು. 7ನೇ ಓವರ್ ನಲ್ಲಿ ಬೌಂಡರಿ ತಡೆಯಲು ಫಾಫ್ ಡೈವ್ ಹೊಡೆದಿದ್ದಾರೆ. ಈ ವೇಳೆಯಲ್ಲಿ ಪಾಕ್ ಆಟಗಾರ ಮೊಹಮ್ಮದ್ ಹಸ್ನೈನ್ ಗೆ ಡಿಕ್ಕಿ ಹೊಡೆದಿದ್ದರು.

ಹಸ್ನೈನ್ ಕಾಲು ಗಂಟಿಗೆ ಫಾಫ್ ತಲೆ ಬಡಿದಿದ್ದು, ಮೈದಾನದಲ್ಲೇ ಕುಸಿದು ಬಿದ್ದಿದ್ದಾರೆ. ಪ್ಲೆಸಿಸ್ ತಲೆಗೆ ಬಲವಾದ ಪೆಟ್ಟು ಬಿದ್ದು ಪ್ರಜ್ಞೆ ತಪ್ಪಿದ್ದರಿಂದ ಕೂಡಲೇ ಅಬುದಾಬಿಯಲ್ಲಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆದರೆ ತಲೆಗೆ ಗಂಭೀರವಾಗಿ ತಲೆಗೆ ಏಟು ಬಿದ್ದ ನಂತರ ಅವರನ್ನು ಅಬುಧಾಬಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚೇತರಿಸಿಕೊಂಡಿದ್ದಾರೆ. ಆದರೆ ಘಟನೆ ನಂತರ ನೆನಪಿನ ಶಕ್ತಿ ಕಡಿಮೆ ಆಗಿರುವ ಅನುಭವ ಆಗುತ್ತಿದೆ ಎಂದು ಖುದ್ದು ಫಾಫ್ ಡು ಪ್ಲೆಸಿಸ್ ಹೇಳಿಕೊಂಡಿದ್ದಾರೆ.

Comments are closed.