ಮರವೂರು ಸೇತುವೆ ಕುಸಿತ : ಮಂಗಳೂರು – ಕಟೀಲು, ವಿಮಾನ ನಿಲ್ದಾಣ ಸಂಪರ್ಕ ಕಡಿತ

ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಬಜಪೆ ಸಮೀಪದ ಮರವೂರು ಸೇತುವೆ ಕುಸಿತವಾಗಿದ್ದು, ಮಂಗಳೂರು ಹಾಗೂ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಕಟೀಲು, ಬಜಪೆಗೆ ಸಂಪರ್ಕ ಸಂಪೂರ್ಣವಾಗಿ ಕಡಿತಗೊಂಡಿದೆ.

ಪಲ್ಗುಣಿ ನದಿಗೆ ಅಡ್ಡಲಾಗಿ ನಿರ್ಮಾಣವಾಗಿದ್ದ ಸೇತುವೆ ಮಂಗಳೂರು – ಬಜಪೆ, ಕಟೀಲು ನಡುವೆ ಸಂಪರ್ಕ ಕಲ್ಪಿಸುತ್ತಿತ್ತು. ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಪ್ರಯಾಣಿಸುವ ಪ್ರಯಾಣಿಕರು ಇದೇ ಸೇತುವೆಯನ್ನೇ ಆಶ್ರಯಿಸಿದ್ದರು. ಆದ್ರೀಗ ಬಜೆಪಿಯಿಂದ ಮಂಗಳೂರಿಗೆ ತೆರಳು ಭಾಗದಲ್ಲಿನ ಸೇತುವೆಯ ಮೊದಲ ಅಂಕಣ ಮೂರು ಅಡಿ ಕೆಳಗೆ ಕುಸಿದಿದೆ. ಇದರಿಂದಾಗಿ ಸೇತುವೆ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಬಜಪೆ, ಕಿನ್ನಿಗೋಳಿ, ಕಟೀಲು, ನೆಲ್ಲಿತೀರ್ಥ, ಅದ್ಯಪಾಡಿ ಸಂಪರ್ಕ ಕಡಿತಗೊಂಡಿದೆ.

ಬಾರೀ ಮಳೆಯಿಂದಾಗಿ 2018ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮುಲ್ಲರಪಟ್ನದಲ್ಲಿನ ಸೇತುವೆ ಕುಸಿತವಾಗಿತ್ತು. ಇದೀಗ ಮತ್ತೊಂದು ಸೇತುವೆ ಕುಸಿದಿದೆ. ನದಿಯಲ್ಲಿ ನಡೆಯುತ್ತಿದ್ದ ಮರಳುಗಾರಿಯಿಂದಲೇ ಸೇತುವೆ ಕುಸಿದಿದೆ ಎನ್ನಲಾಗುತ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಭದ್ರತೆಯನ್ನು ಒದಗಿಸಿದ್ದಾರೆ. ಅಲ್ಲದೇ ಅಧಿಕಾರಿಗಳು ಕುಸಿದ ಸೇತುವೆಯ ಪರಿಶೀಲನಾ ಕಾರ್ಯ ಮಾಡುತ್ತಿದ್ದಾರೆ.

Comments are closed.