ಮಂಗಳವಾರ, ಏಪ್ರಿಲ್ 29, 2025
HomeSportsCricketIndia Star Shreyas Iyer : ಶ್ರೇಯಸ್ ಅಯ್ಯರ್ ಭೇಟಿ ಮಾಡಲು ವಿಂಡೀಸ್’ನಲ್ಲಿ ಎರಡು ಗಂಟೆ...

India Star Shreyas Iyer : ಶ್ರೇಯಸ್ ಅಯ್ಯರ್ ಭೇಟಿ ಮಾಡಲು ವಿಂಡೀಸ್’ನಲ್ಲಿ ಎರಡು ಗಂಟೆ ಕಾದು ಕುಳಿತ ಹುಡುಗಿ

- Advertisement -

ಟ್ರಿನಿಡಾಡ್: ಟೀಮ್ ಇಂಡಿಯಾ ಆಟಗಾರರಿಗೆ ಜಗತ್ತಿನ ಮೂಲೆ ಮೂಲೆಗಳಲ್ಲಿ ಅಭಿಮಾನಿಗಳಿದ್ದಾರೆ. ಭಾರತದ ಸ್ಟಾರ್ ಆಟಗಾರರ ಆಟೋಗ್ರಾಫ್’ಗಾಗಿ ಗಂಟೆಗಟ್ಟಲೆ ಕಾಯುವ ಹುಚ್ಚು ಅಭಿಮಾನಿಗಳಿದ್ದಾರೆ. ಇಂಥದ್ದೇ ಒಂದು ಘಟನೆ ವೆಸ್ಟ್ ಇಂಡೀಸ್’ನ ಟ್ರಿನಿಡಾಡ್’ನಲ್ಲಿ ನಡೆದಿದೆ. ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಬ್ಯಾಟ್ಸ್’ಮನ್, ಕೋಲ್ಕತಾ ನೈಟ್ ರೈಡರ್ಸ್ ತಂಡದ ಶ್ರೇಯಸ್ ಅಯ್ಯರ್ (India Star Shreyas Iyer) ಅವರನ್ನು ಭೇಟಿ ಮಾಡಲು ಮಹಿಳಾ ಅಭಿಮಾನಿಯೊಬ್ಬಳು ಎರಡು ಗಂಟೆ ಕಾದು ಕುಳಿತಿದ್ದಾಳೆ. ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕಾಗಿ ಟೀಮ್ ಇಂಡಿಯಾ ಟ್ರಿನಿಡಾಡ್”ನ ಕ್ವೀನ್ಸ್ ಪಾರ್ಕ್ ಓವಲ್ ಇಂಡೋರ್ ಮೈದಾನದಲ್ಲಿ ಅಭ್ಯಾಸ ನಡೆಸುತ್ತಿತ್ತು. ಈ ವೇಳೆ ಮಹಿಳಾ ಅಭಿಮಾನಿಯೊಬ್ಬಳು ಶ್ರೇಯಸ್ ಅಯ್ಯರ್ ಆಟೋಗ್ರಾಫ್’ಗಾಗಿ ಮೈದಾನದ ಹೊರಗೆ ಕಾಯುತ್ತಾ ಕುಳಿತಿದ್ದಳು.

“ನಾನು ಶ್ರೇಯಸ್ ಅಯ್ಯರ್ ಅವರ ದೊಡ್ಡ ಅಭಿಮಾನಿ, ಅವರ ಆಟೋಗ್ರಾಫ್ ಬೇಕು. ರೋಹಿತ್ ಶರ್ಮಾ ಮತ್ತು ಕೆ.ಎಲ್ ರಾಹುಲ್ ಕೂಡ ನಂಗಿಷ್ಟ” ಎಂದು ಅಭಿಮಾನಿ ಹೇಳಿಕೊಂಡಿದ್ದಾಳೆ. ಆತಿಥೇಯ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯ ಮೊದಲ ಪಂದ್ಯ ಶುಕ್ರವಾರ ಪೋರ್ಟ್ ಆಫ್ ಸ್ಪೇನ್’ನ ಕ್ವೀನ್ಸ್ ಪಾರ್ಕ್ ಓವಲ್ ಮೈದಾನದಲ್ಲಿ ನಡೆಯಲಿದೆ. ಏಕದಿನ ಸರಣಿಗೆ ನಾಯಕ ರೋಹಿತ್ ಶರ್ಮಾ, ಮಾಜಿ ನಾಯಕ ವಿರಾಟ್ ಕೊಹ್ಲಿ, ವಿಕೆಟ್ ಕೀಪರ್ ರಿಷಭ್ ಪಂತ್, ಆಲ್ರೌಂಡರ್ ಹಾರ್ದಿಕ್ ಪಾಂಡ್ಯ, ವೇಗಿಗಳಾದ ಜಸ್ಪ್ರೀತ್ ಬುಮ್ರಾ ಮತ್ತು ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದ್ದು, ಟೀಮ್ ಇಂಡಿಯಾವನ್ನು ಹಿರಿಯ ಎಡಗೈ ಓಪನರ್ ಶಿಖರ್ ಧವನ್ ಮುನ್ನಡೆಸಲಿದ್ದಾರೆ.

ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲಿ ಶ್ರೇಯಸ್ ಅಯ್ಯರ್ ಸಹಿತ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯ ಸಾಬೀತು ಪಡಿಸಲು ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿ ಉತ್ತಮ ಅವಕಾಶ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಹಾಗೂ ಟಿ20 ಸರಣಿಯಲ್ಲಿ ಶ್ರೇಯಸ್ ಅಯ್ಯರ್ ಭಾರೀ ವೈಫಲ್ಯ ಎದುರಿಸಿದ್ದರು. ವಿಶೇಷವಾಗಿ ಶಾರ್ಟ್ ಪಿಚ್ ಎಸೆತಗಳ ಮುಂದೆ ಪದೇ ಪದೇ ಮುಗ್ಗರಿಸಿದ್ದ ಅಯ್ಯರ್, ಇಂಗ್ಲೆಂಡ್ ಪ್ರವಾಸದಲ್ಲಿ ಆಡಿದ 3 ಇನ್ನಿಂಗ್ಸ್”ಗಳಲ್ಲಿ ಕೇವಲ 62 ರನ್ ಕಲೆ ಹಾಕಿದ್ದರು (ಟೆಸ್ಟ್: 15 & 19, ಟಿ20: 28).

ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕಕ್ಕೆ ಯುವ ಆಟಗಾರರ ಮಧ್ಯೆ ಭಾರೀ ಪೈಪೋಟಿಯಿದೆ. ಸೂರ್ಯಕುಮಾರ್ ಯಾದವ್ ತಮ್ಮ ಸ್ಥಾನವನ್ನು ಈಗಾಗ್ಲೇ ಭದ್ರ ಪಡಿಸಿಕೊಂಡಿದ್ರೆ, ಶ್ರೇಯಸ್ ಅಯ್ಯರ್ ಅವರ ವೈಫಲ್ಯದ ಮಧ್ಯೆ ಮತ್ತೊಬ್ಬ ಯುವ ಆಟಗಾರ ದೀಪಕ್ ಹೂಡ ಭರವಸೆ ಮೂಡಿಸಿದ್ದಾರೆ. ಹೀಗಾಗಿ ಪ್ರಬಲ ಪೈಪೋಟಿಯ ಮಧ್ಯೆ ಟೀಮ್ ಇಂಡಿಯಾದಲ್ಲಿ ಶ್ರೇಯಸ್ ಅಯ್ಯರ್ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳಬೇಕಾದರೆ ವೆಸ್ಟ್ ಇಂಡೀಸ್ ವಿರುದ್ಧದ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಮಿಂಚಲೇಬೇಕಾದ ಒತ್ತಡದಲ್ಲಿದ್ದಾರೆ.

ಇದನ್ನೂ ಓದಿ : Neeraj Chopra In Finals:ನೀರಜ್ ಚೋಪ್ರಾ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಫೈನಲ್ ಗೆ ಎಂಟ್ರಿ

ಇದನ್ನೂ ಓದಿ : IND vs WI ODI: ಟೀಂ ಇಂಡಿಯಾಗೆ ದೊಡ್ಡ ಹೊಡೆತ; ರವೀಂದ್ರ ಜಡೇಜಾ ಗಾಯ

Fan Girl Waits For 2 Hours To Meet India Star Shreyas Iyer

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular